Headlines

ಅಕ್ಕನ ಬಾಣಂತನಕ್ಕೆ ಹೋದ ಯುವತಿ ಭಾವನಿಂದ ಗರ್ಭಿಣಿ – ಮದುವೆಗೆ ಒಲ್ಲೆ ಎಂದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ |suicide

 ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 21 ವರ್ಷದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಕ್ಕನ ಬಾಣಂತನಕ್ಕೆ ಹೋಗಿದ್ದ ವೇಳೆ ಅಕ್ಕನ ಗಂಡ ಪುಸಲಾಯಿಸಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದ.ನಂತರ ಎಲ್ಲಾರಿಗೂ ಗೊತ್ತಾದ ನಂತರ ಉಡಾಫೆ ಮಾತನಾಡಿದ ಕಾರಣ ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

          [     ಆರೋಪಿ ಪ್ರಶಾಂತ್  ]


ಚೋರಡಿಯ ಮರಾಠೀ ಕ್ಯಾಂಪ್ ನಿವಾಸಿಯಾದ ಯುವತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.ಅದೇ ಮರಾಠಿ ಕ್ಯಾಂಪ್ ನ ನಿವಾಸಿ ಪ್ರಶಾಂತ್ ಎಂಬುವವನಿಗೆ ಯುವತಿಯ ಅಕ್ಕನನ್ನು ಕೊಟ್ಟು ಮದುವೆ ಮಾಡಿದ್ದು, ಅಕ್ಕನ ಬಾಣಂತನಕ್ಕೆ ಹೋದಾಗ ಪ್ರಶಾಂತ್ ಸೀತಮ್ಮಳನ್ನ ಗರ್ಭಾವತಿ ಮಾಡಿರುವುದಾಗಿ ದೂರು ದಾಖಲಾಗಿದೆ.

ಇದರಿಂದ ಯುವತಿ ಗರ್ಭಿಣಿಯಾಗಿದ್ದು, ವಿಚಾರ ತಿಳಿದ ಮನೆಯವರು ಅಕ್ಕನ ಗಂಡನನ್ನು ವಿಚಾರಿಸಿದಾಗ ಉಡಾಫೆಯಿಂದ ಮಾತನಾಡಿದ್ದಾನೆ. 

ಇದರಿಂದ ನೊಂದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *