w
Headlines
Home » 10 ಕೋಟಿ ರೂ ಬೆಲೆಯ ನಾಯಿಯ ನೋಡಲು ಮುಗಿಬಿದ್ದ ಜನ – ಭೀಮಾ ನ ಲುಕ್ ಗೆ ಎಲ್ಲಾ ಫಿದಾ….|DOG SHOW

10 ಕೋಟಿ ರೂ ಬೆಲೆಯ ನಾಯಿಯ ನೋಡಲು ಮುಗಿಬಿದ್ದ ಜನ – ಭೀಮಾ ನ ಲುಕ್ ಗೆ ಎಲ್ಲಾ ಫಿದಾ….|DOG SHOW

ಶಿವಮೊಗ್ಗ ದಸರಾದ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ನಡೆದ ಡಾಗ್ ಶೋ ನಲ್ಲಿ ಬೆಂಗಳೂರಿನ ಸತೀಶ್ ಮಾಲೀಕತ್ವದ ಟಿಬೇಟಿಯನ್ ಮಸ್ತೀಪ್ ಬ್ರೀಡ್ ನಾಯಿ ಭೀಮ ಎಲ್ಲಾರ ಆಕರ್ಷಣೀಯವಾಗಿತ್ತು

ಈ ನಾಯಿಯ ಹೆಸರು ಭೀಮಾ,ಇದರ ಬೆಲೆ ಬರೋಬ್ಬರಿ 10 ಕೋಟಿ. ಎ ಸಿ ರೂಂ ನಲ್ಲಿ ವಾಸ ,ಡೈಲಿ ಚಿಕನ್ ಬೇಕೆ ಬೇಕು..


10 ಕೋಟಿ ಬೆಲೆಯ ನಾಯಿಗೆ ಡಾಗ್ ಶೋನಲ್ಲಿ ಡಿಮ್ಯಾಂಡೋ ಡಿಮ್ಯಾಂಡ್ ಇದೆ. ಡಾಗ್ ಶೋ ನಲ್ಲಿ ಮಾಲೀಕ ಸತೀಶ್ ಎರಡು ಸುತ್ತು ಪ್ರೇಕ್ಷಕರಿಗೆ ಪ್ರದರ್ಶಿಸಿದರು.

ಸಾರ್ವಜನಿಕರು 10 ಕೋಟಿ ಬೆಲೆಯ ನಾಯಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಈ ನಾಯಿ ಬರಲಿದೆ ಎಂದೇ ಜನ ಗಾಂಧಿ ಪಾರ್ಕ್ ನಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಈಡಾಗ್ ಶೋ ನಲ್ಲಿ ಹಸ್ಕಿ, ಜರ್ಮನ್ ಶೆಫರ್ಡ್, ಪಮೋರಿಯನ್ ಮುಧೋಳ್, ಗೋಲ್ಡನ್ ರಿಟ್ರೇವರ್, ರಾಟ್ ವಿಲ್ಲರ್ ಫಗ್ ಸೇರಿ 15 ಬಗೆಯ ನಾಯಿ ಭಾಗಿಯಾಗಿದ್ದವು.


150 ಕ್ಕೂ ಹೆಚ್ಚು ವಿವಿಧ ಬಗೆಯ ನಾಯಿಗಳು ಭಾಗಿಯಾಗಿದ್ದವು. ಉಡುಪಿ ಮಂಗಳೂರು ದಾವಣಗೆರೆ, ಭದ್ರಾವತಿ, ಹುಬ್ಬಳ್ಳಿ ನಾಯಿಗಳು ಭಾಗಿಯಾಗಿವೆ. ಈ ಡಾಗ್ ಶೋ ನಲ್ಲಿ ಮಸ್ತೀಫ್ ಬ್ರೀಡ್ ನ ನಾಯಿಯೇ ಪ್ರದರ್ಶನದ ವಿಶೇಷ ನಾಯಿಯಾಗಿದೆ.

2½ ವರ್ಷದ ಭೀಮನನ್ನು ಬೀಜಿಂಗ್ ನಿಂದ ತರಲಾಗಿತ್ತು.‌ಈ ನಾಯಿ ಸದಾ ಎಸಿ ರೂಮ್ ನಲ್ಲಿಯೇ ಇರಬೇಕು. ಚಿಕನ್ ಇದರ ಡೈಲಿ ಫುಡ್ ಆಗಿದೆ. ನೋಡಲು ಸಿಂಹದಂತೆ ಕಾಣುತ್ತದೆ. ಈ ನಾಯಿಯ ಮಾಲೀಕರಾದ ಸತೀಶ್ ಸಿನಿಮಾ ನಟರೂ ಸಹ ಹೌದು!

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.