ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಆಕೆ ಧರಿಸಿದ್ದ ವಸ್ತ್ರದ ಜೊತೆಗೆ ಪತ್ತೆಯಾಗಿರುವ ಘಟನೆ ನಡೆದಿದೆ.
ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆ ಎಂಬ ಶಂಕೆ :
ಹಾರಂಬಳ್ಳಿ ಗ್ರಾಮದ ಮಹಿಳೆ ಗಿಡ್ಡಮ್ಮ (80) ಕಳೆದ 12-07-2021ರಂದು ನಾಪತ್ತೆಯಾಗಿದ್ದರು.ಕೂಡಲೇ ಗಿಡ್ಡಮ್ಮ ಅವರ ಮಕ್ಕಳು ರಿಪ್ಪನ್‌ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಆದರೆ ವೃದ್ದೆ ಎಲ್ಲೂ ಪತ್ತೆಯಾಗಿರಲಿಲ್ಲ.
ನಾಪತ್ತೆಯಾಗಿ ಒಂದು ವರ್ಷ ಎರಡು ತಿಂಗಳ ನಂತರ ನಿನ್ನೆ (29-09-2022) ರ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ಹಾರಂಬಳ್ಳಿ ಗ್ರಾಮದ ಬಿಳಿಗಲ್ಲು ಉಬ್ಬಿನಕಾಡು ಎಂಬ ಅರಣ್ಯ ಪ್ರದೇಶದಲ್ಲಿ ತಲೆಬುರುಡೆ,ಸೀರೆ ,ಸರ, ಮೂಳೆ ಮತ್ತು ಅವಶೇಷಗಳು ಪತ್ತೆಯಾಗಿದೆ.
ಸ್ಥಳಕ್ಕೆ ತೆರಳಿದ್ದ ಕುಟುಂಬಸ್ಥರು ಸೀರೆ ಮತ್ತು ಸರವನ್ನು ನೋಡಿ ಅಸ್ಥಿಪಂಜರ ಗಿಡ್ಡಮ್ಮ ರವರದ್ದೆ ಎಂದು ಗುರುತಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಸಿಪಿಐ ಗಿರೀಶ್ ಮತ್ತು ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ರವರ ತಂಡ ಅಸ್ಥಿಪಂಜರ ಹಾಗೂ ಅವಶೇಷಗಳನ್ನು ವಶಕ್ಕೆ ಪಡೆದು ಎಫ಼್ ಎಸ್ ಐಎಲ್ ವರದಿಗಾಗಿ ಕಳುಹಿಸಿಕೊಟ್ಟಿದೆ.
ಎಫ಼್ ಎಸ್ ಐಎಲ್ ವರದಿ ಬಂದ ನಂತರವೇ ಸತ್ಯಾಂಶ ತಿಳಿದುಬರಲಿದೆ.