Headlines

ಮನೆಗೆ ನುಗ್ಗಿದ ನೀರು – ಗೋಡೆ ಕುಸಿತದಿಂದ ನಾಲ್ವರಿಗೆ ಪೆಟ್ಟು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಮನಗದ್ದೆ ನಿವಾಸಿ ಲೋಕೇಶ್ ಎಂಬವರ ಮನೆಯ ಹೊರಭಾಗದ ಗೋಡೆ ಕುಸಿದ ಪರಿಣಾಮ ಮೂವರಿಗೆ ಗಂಭೀರ ಪೆಟ್ಟು ತಗುಲಿದೆ. ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಯ  ಹೊರಭಾಗದಲ್ಲಿ   ಕೃಷಿ  ಸಾಮಾಗ್ರಿಗಳನ್ನು ದಾಸ್ತಾನಿರಿಸಿದ ಕಡುಮಾಡಿನ ಒಳಗೆ ಪ್ರವಾಹದ ರೀತಿಯಲ್ಲಿ   ಏಕಾಏಕಿ ನೀರು ನುಗ್ಗಿತ್ತು. ಕುಟುಂಬಸ್ಥರು ಸೇರಿ ಅಲ್ಲಿದ್ದ ಕೃಷಿ ಪರಿಕರಗಳನ್ನು ಒಳಗೆ ಸಾಗಿಸುತ್ತಿರುವಾಗ ನೀರಿನ ರಭಸಕ್ಕೆ ಗೋಡೆ  ಸಂಪೂರ್ಣ ಕುಸಿದು ಬಿದ್ದು ಗೋಡೆಯಡಿಯಲ್ಲಿ ನಾಲ್ವರು ಸಿಲುಕಿಕೊಂಡರು….

Read Full News

ಶಿವಮೊಗ್ಗ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ :

ಶಿವಮೊಗ್ಗ  ಜಿಲ್ಲೆಯಾದ್ಯಂತ ಇವತ್ತು ಮಳೆ ಪುನಃ ಅಬ್ಬರಿಸುತ್ತಿದೆ.   ಇವತ್ತು ಸಂಜೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಭಾರಿ ಮಳೆಯಾಗುವ ಸಂಭವವಿದೆ. ಇಂದು ಸಂಜೆಯಿಂದ ನಾಳೆ ಬೆಳಗ್ಗೆ 8.30ರವರೆಗೆ ORANGE ALERT ಘೋಷಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲಿ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.

Read Full News

ಹದಗೆಟ್ಟ ರಸ್ತೆ – ರಾಜ್ಯ ಹೆದ್ದಾರಿಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ

ಸೂಡೂರು :  ಶಿವಮೊಗ್ಗ-ಹೊಸನಗರ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರತಿ ನಿತ್ಯ ಒಂದೆರಡು ಅಪಘಾತಗಳು ನಡೆಯುತಿದ್ದು ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ಎಂದು ಒತ್ತಾಯಿಸಿ ಕೂರಂಬಳ್ಳಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಐದನೇ ಮೈಲಿಕಲ್ಲು ಹಾಗೂ ಚಿನ್ನಮನೆ ಗ್ರಾಮದ ನಡುವಿನ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದಿದ್ದು ಹಲವಾರು ಅಪಘಾತಗಳು ನಡೆದಿದ್ದವು ಈ ಹಿನ್ನಲೆಯಲ್ಲಿ ಕೂರಂಬಳ್ಳಿ ಗ್ರಾಮಸ್ಥರು ಇಂದು ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ವಿನೂತನವಾಗಿ…

Read Full News

ಬೋನಿಗೆ ಬಿದ್ದ ಚಿರತೆ – ನಿಟ್ಟುಸಿರು ಬಿಟ್ಟ ಜನತೆ

ಕಳೆದ ಎರಡು ತಿಂಗಳಿಂದ ಕಾಟ ಕೊಡುತ್ತಿದ್ದ ಚಿರತೆ ಶಿವಮೊಗ್ಗ ಗ್ರಾಮಾಂತರದ ಆಲದಹಳ್ಳಿ ಸೋಮಿನಕೊಪ್ಪದಲ್ಲಿ  ಬೋನಿಗೆ ಬಿದ್ದಿದೆ.ನಂತರ ಚಿರತೆಯನ್ನು ಅರಣ್ಯ ಇಲಾಖೆಯವರು ಬೇರೆಡೆ ಸಾಗಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ಬಾಳಿ ತಾಲೂಕಿನ ಪಲವನಹಳ್ಳಿ ಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸಾಕಿದ ನಾಯಿಯನ್ನು ಬೋನಿನಲ್ಲಿಟ್ಟು ಚಿರತೆಯನ್ನ ಹಿಡಿಯಲಾಗಿದೆ. ಹೊಲದಲ್ಲಿ ಸೌತೆಕಾಯಿ ಕೀಳಲು ಬಂದ ರೈತರು ಬೋನಿಗೆ ಬಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ. ನಂತರ ಸ್ಥಳದಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ. ಕಳೆದ  ಮೂರು…

Read Full News

ಅಭಿವೃದ್ಧಿಯನ್ನು ಸಹಿಸದೆ ಪುಕ್ಕಟೆ ಪ್ರಚಾರಕ್ಕಾಗಿ ಪರಿತಪಿಸುತ್ತಿರುವ ಬೇಳೂರು : ಬಿಜೆಪಿ ಅರೋಪ

ರಿಪ್ಪನ್‌ಪೇಟೆ;-ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೇಸ್ ಪಕ್ಷದ ವಕ್ತಾರ ಗೋಪಾಲಕೃಷ್ಣ ಬೇಳೂರು ಹಾಲಿ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗರೊAದಿಗೆ ಸುಳ್ಳು ಹಾಗೂ ನಿರಾಧಾರ ಅರೋಪ ಮಾಡುತ್ತಿದ್ದಾರೆಂದು ಕೆರೆಹಳ್ಳಿ-ಹುಂಚಾ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಅರೋಪಿಸಿದರು.  ರಿಪ್ಪನ್‌ಪೇಟೆ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಸುರಿದ ಭಾರಿಮಳೆಯಿಂದಾಗಿ ಕೆರೆಹಳ್ಳಿ ಹೋಬಳಿಯ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ-ಮಳವಳ್ಳಿ ಕನ್ನೇಹೊಂಡದ ನೀರು ನುಗ್ಗಿ ರಸ್ತೆ ಕೊಚ್ಚಿಹೋಗಿ ಸಾರ್ವಜನಿಕರು ಓಡಾಡದಂತಾಗಿರುವ ಬಗ್ಗೆ…

Read Full News

ರಾಜಕಾರಣಿಗಳ ನಡವಳಿಕೆ ಜನರಲ್ಲಿ ಅಸಹ್ಯವುಂಟುಮಾಡಿದೆ,ಅದು ಪರಿವರ್ತನೆಯಾಗಬೇಕು: ಕೆ ದಿವಾಕರ್

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ನಂತರ ನಮ್ಮ ರಾಷ್ಟ, ರಾಜ್ಯದ ರಾಜಕಾರಣಿಗಳು ನಡೆದುಕೊಂಡಿರುವ ರೀತಿ ಜನರಲ್ಲಿ ಅಸಹ್ಯವುಂಟುಮಾಡಿದೆ. ಇದು ಪರಿವರ್ತನೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಸಾಗರ ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಕೆ. ದಿವಾಕರ್ ಹೇಳಿದರು. ಪಟ್ಟಣದ ಸಾಗರ ರಸ್ತೆಯ ಗೌರಿಶಂಕರ ಕಾಂಪ್ಲೆಕ್ಸ್ ನಲ್ಲಿ ಆಮ್‌ಆದ್ಮಿ ಪಕ್ಷದ ನೂತನ ಕಛೇರಿ ಉದ್ಘಾಟನೆಯ ನಂತರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಇದುವರೆಗೆ ನಮ್ಮನ್ನಾಳಿದ ಶಾಸಕರುಗಳು ಉಂಡುಹೋದ ಕೊಂಡುಹೋದ ಮನಸ್ಥಿತಿಯವರಾಗಿರುವುದು ದುರಂತ. ನಮ್ಮಿಂದ ಆಯ್ಕೆಯಾದ ಕಳ್ಳರು, ಕಾಕರು, ದರೋಡೆ ಕೋರರು ಸಮಾಜವನ್ನು ಏನು…

Read Full News

ಅರಸಾಳು ಮಾಲ್ಗುಡಿ ಮ್ಯೂಸಿಯಂಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಭೇಟಿ :

ರಿಪ್ಪನ್‌ಪೇಟೆ: ಸಮೀಪದ ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂಗೆ ನೈರುತ್ಯ ರೈಲ್ವೆಯ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ ನೇತೃತ್ವದಲ್ಲಿ ಗ್ರಾಮಸ್ಥರು, ವಿವಿಧ ಸಂಘಸಂಸ್ಥೆಗಳ  ಮುಖಂಡರು ಜಿಎಂ ರವರನ್ನು ಭೇಟಿಮಾಡಿ ಹರಿಹರ-ಬೈಂದೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅರಸಾಳು ರೈಲು ನಿಲ್ದಾಣಕ್ಕೆ ರೈಲು ನಿಲುಗಡೆಗಾಗಿ 4 ಕೋಟಿ ರೂ. ಅನುದಾನದಲ್ಲಿ ಪ್ಲಾಟ್‌ಫಾರಂ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಬ್ರಿಟೀಷರ ಕಾಲದಿಂದಲೂ ಜನನಿಬಿಡ ಪ್ರದೇಶವಾಗಿದ್ದ…

Read Full News

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು : ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಸಮಾಜದಲ್ಲಿ ನೊಂದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಹಾಗೂ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಒದಗಿಸಿ ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅವರು ಭಾನುವಾರ ಪಟ್ಟಣದ ಜಿಎಸ್ ಬಿ ಸಭಾಂಗಣದಲ್ಲಿ ಹೊಸನಗರ ತಾಲ್ಲೂಕ್ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ತಾಲ್ಲೂಕ್ ಗಂಗಾಮತಸ್ಥರ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊರೊನಾದಿಂದಾಗಿ…

Read Full News

ಭಾರಿ ಮಳೆಗೆ ಧರೆ ಕುಸಿತ : ಶಾಸಕರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳವಳ್ಳಿ-ತಮ್ಮಡಿಕೊಪ್ಪ ಸಂಪರ್ಕ ರಸ್ತೆಯ ಧರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಅಪಾಯದ ಅತಂಕದಲ್ಲಿ  ಇರುವ ಹಿನ್ನೆಲೆಯಲ್ಲಿ  ಮಳವಳ್ಳಿ ಮತ್ತು ತಮ್ಮಡಿಕೊಪ್ಪ ಗ್ರಾಮಸ್ಥರು ಇಂದು ಮಾಜಿ ಶಾಸಕ  ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ನೇತ್ರತ್ವದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಬೇಳೂರು ಮಳವಳ್ಳಿ-ತಮ್ಮಡಿಕೊಪ್ಪದ ಗ್ರಾಮದ  ಸಂಪರ್ಕ ರಸ್ತೆಯು ಸಂಪೂರ್ಣ ಅಪಾಯದ ಸ್ಥಿತಿಯಲ್ಲಿದ್ದು ಈಗಾಗಲೇ ಈ…

Read Full News

ರಿಪ್ಪನ್‌ಪೇಟೆ : ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್

ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು. ಇಂದು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಅರಿಶಿಣ ಕುಂಕುಮ ಮತ್ತು ಅರತಿ ಬೆಳಗಿ ಬಾಗಿನ ಅರ್ಪಿಸಿದರು. ಇದೇ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಗಿರೀಶ್ ಹಾಗೂ ಪಿಎಸ್‌ಐ ಶಿವಾನಂದ ಕೋಳಿ, ಎಎಸ್‌ಐ ಗಣಪತಿ,ಹಾಲಪ್ಪ,ಮಂಜಪ್ಪ ಹಾಗೂ ಇನ್ನಿತರ…

Read Full News

ನಾಳೆ (29-08-2022) ರಿಪ್ಪನ್‌ಪೇಟೆಗೆ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ : ಆಮ್ ಆದ್ಮಿ‌ ಪಕ್ಷದ ನೂತನ ಕಾರ್ಯಾಲಯ ಉದ್ಘಾಟನೆ

ರಿಪ್ಪನ್‌ಪೇಟೆ : ನಾಳೆ (29/08/2022) ಸೋಮವಾರ ಪಟ್ಟಣದಲ್ಲಿಆಮ್ ಆದ್ಮಿ ಪಕ್ಷದ ನೂತನ ಕಛೇರಿಯನ್ನು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಉದ್ಘಾಟಿಸಲಿದ್ದಾರೆ. ಪಟ್ಟಣದ ಸಾಗರ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ10 ಗಂಟೆಗೆ ಆಮ್ ಆದ್ಮಿ ಪಕ್ಷದ ನೂತನ ಕಛೇರಿಯನ್ನು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಟೆನ್ನಿಸ್ ಕೃಷ್ಣ ರವರು ಉದ್ಘಾಟಿಸಲಿದ್ದಾರೆ. ಆಮ್ ಆದ್ಮಿ‌ಪಕ್ಷದ ನೂತನ ಕಛೇರಿ ಉದ್ಘಾಟನೆಗೆ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಹಳ್ಳಿಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ…

Read Full News

ಕಾಗೋಡು ತಿಮ್ಮಪ್ಪ ಸಮ್ಮುಖದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಬೇಳೂರು :

ಹೊಸನಗರ: ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಮುಂದಿನ ವರ್ಷ ನಡೆಯುವ ವಿಧಾನಸಬೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ನಮ್ಮಲ್ಲಿ ಯಾವುದೇ ಒಡಕಿಲ್ಲದೇ ಚುನಾವಣೆ ಎದುರಿಸೋಣ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಮ್ಮುಖದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರು. ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳ ಆಚರಣೆ ಪ್ರಯುಕ್ತ ಸ್ವಾತಂತ್ರ್ಯ ಬರಲು ಕಾರಣರಾದ ಎಲ್ಲ ಮಹಾನೀಯರಿಗೆ ಗೌರವ ಸೂಚಕವಾಗಿ ಹೊಸನಗರ ತಾಲ್ಲೂಕು ಮಾವಿನಕಟ್ಟೆಯಿಂದ ಸುಮಾರು…

Read Full News

ಭೂ ಕಬಳಿಕೆ ಕಾಯ್ದೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ : ಶಾಸಕ ಹರತಾಳು ಹಾಲಪ್ಪ ಸಂತಸ

ರಿಪ್ಪನ್‌ಪೇಟೆ : ರಾಜ್ಯದ ಬಹು ಜನರ ಬೇಡಿಕೆಯಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇದ ಕಾಯ್ದೆಯ 2011 ರ ಕಾಲಂ 2(ಡಿ ) ತಿದ್ದುಪಡಿ ತಂದಿರುವುದು ಬಹಳ ಸಂತಸವಾಗಿದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹೆಚ್ ಹಾಲಪ್ಪ ಹರತಾಳು ಹೇಳಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸಚಿವ ಸಂಪುಟದ ಪರಿಷತ್  ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. 192ಎ ಕಾಲಂ ಸ್ಥಗಿತಗೊಳಿಸಿರುವಂಥದ್ದು ಬಹಳ ಖುಷಿಯ ವಿಚಾರ. ಕಾರಣ ಒಂದು…

Read Full News

ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ : ರಾಜ್ಯಾದ್ಯಂತ ಗೃಹಸಚಿವರ ಮೇಲೆ ಬಹುದೊಡ್ಡ ಸೈಟ್ ಹಗರಣದ ಆಪಾದನೆ ಇದೆ. ಆರಗ ಜ್ಞಾನೇಂದ್ರರವರು ಬೆಂಗಳೂರಿನಲ್ಲಿ ಅಕ್ರಮವಾಗಿ 50 ಕೋಟಿ ಸೈಟ್ ತಾವು ತೆಗೆದುಕೊಂಡು ಅಧಿಕಾರಿಗಳನ್ನು ಮನೆಗೆ ಹೋಗುವ ಹಾಗೆ ಮಾಡಿದ್ದಾರೆ. ಹೈಕೋರ್ಟ್ ಕೂಡ ಈ ವಿಚಾರವಾಗಿ ಇವರ ಕಪಾಳಕ್ಕೆ ಹೊಡೆದಿದ್ದಾರೆ. ಹಾಗಾಗಿ ತೀರ್ಥಹಳ್ಳಿ ಕ್ಷೇತ್ರದ ಘನತೆ ಕಾಪಾಡಲು ರಾಜೀನಾಮೆ ಕೊಡಬೇಕು ಎಂದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಆಗಿನ ಕಾಲದಲ್ಲಿ ಕಡಿದಾಳ್ ಮಂಜಪ್ಪನವರಿಗೆ ಸೈಟ್ ಕೊಡಲು ಹೋದಾಗಲೇ ಅದನ್ನು ತಿರಸ್ಕಾರ…

Read Full News

ಸ್ಮಶಾನದ ಜಾಗ ಒತ್ತುವರಿ : ಮೃತದೇಹ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಸೊರಬ : ಸರ್ಕಾರದಿಂದ ಮಂಜೂರಾದ ರುದ್ರಭೂಮಿಯನ್ನು ಅತಿಕ್ರಮಣಕಾರರಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರೆಲ್ಲಾ ಸೇರಿ ಮೃತದೇಹವನ್ನು ಇಟ್ಟು ಸೊರಬ ಮುಖ್ಯ ರಸ್ತೆಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ. ತಾಲೂಕಿನ ಹೆಚ್ಚೆ ಗ್ರಾಮದಲ್ಲಿ ಮಂಜೂರಾದ ರುದ್ರಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗಡಿ ಗುರುತಿಸುವಂತೆ ಹತ್ತಾರು ಬಾರಿ ಮನವಿ ನೀಡಿದರೂ ಸಂಬಂಧಪಟ್ಟವರು  ಸ್ಪಂದಿಸಿಲ್ಲ ಹಾಗಾಗಿ ಈ ದಿನ ಹೆಚ್ಚೆ ಊರಿನಲ್ಲಿ ನಿಧನರಾದವರ ಮೃತದೇಹವನ್ನು ಸೊರಬ ಪಟ್ಟಣಕ್ಕೆ ತಂದು ಪ್ರತಿಭಟಿಸಿದ್ದಾರೆ. ಸರ್ಕಾರದಿಂದ 4 ಎಕರೆ ಜಾಗ ಮಂಜೂರಾಗಿದೆ ಆದರೆ…

Read Full News

ರಿಪ್ಪನ್‌ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ಶಾಂತಿ ಸಭೆ : ಡ್ರೋಣ್ ಕ್ಯಾಮೆರಾ ಅಳವಡಿಕೆಗೆ ಸೂಚನೆ

ರಿಪ್ಪನ್‌ಪೇಟೆ : ಗಣೇಶೋತ್ಸವ ಅಂಗವಾಗಿ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಪೊಲೀಸ್ ಶಾಂತಿ ಸಮಿತಿ ಸಭೆಯು ಹೊಸನಗರ ವೃತ್ತ ನಿರೀಕ್ಷಕ ಗಿರೀಶ್ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಮೊಗ್ಗ ಜಿಲ್ಲೆಯಲ್ಲಿಯೇ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣಪತಿ ಅಚರಣೆ ಅದ್ದೂರಿಯಾಗಿ ಅಚರಿಸಲಾಗುತ್ತದೆ.ಮತ್ತು ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು ೧೦೪ ಕಡೆಯಲ್ಲಿ ಗಣಪತಿಗಳನ್ನು ಪ್ರತಿಷ್ಟಾಪಿಸಲಾಗುತ್ತಿದ್ದು ಪ್ರತಿಷ್ಟಾಪನೆಗೆ ಇಲಾಖೆ ಅನುಮತಿಗಾಗಿ ಹೊಸನಗರಕ್ಕೆ ಹೋಗಿ ಬರಬೇಕಾಗುತ್ತದೆ ಇದರಿಂದ ಅಯೋಜಕರಿಗೆ ತುಂಬ ಕಷ್ಟವಾಗುತ್ತದೆ ಆ ಕಾರಣ ರಿಪ್ಪನ್‌ಪೇಟೆಯಲ್ಲಿಯೇ ಅನುಮತಿ ನೀಡುವ ಬಗ್ಗೆ ವಿಶೇಷ ಅಧಿಕಾರಿಯನ್ನು…

Read Full News

ದುರಸ್ತಿಯಾಗದ ರಸ್ತೆ : ರಸ್ತೆಯಲ್ಲೇ ಬಾಳೆ,ಅಡಿಕೆ,ಭತ್ತ ನಾಟಿ‌ಮಾಡುವ ಮೂಲಕ ಪ್ರತಿಭಟನೆ

ಹುಂಚಾ : ಇಲ್ಲಿನ ಸಮೀಪದ ವಾರಂಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಊರಿನ ಹಿರಿ-ಕಿರಿಯ ನಾಗರೀಕರು ಒಗ್ಗಟ್ಟಾಗಿ ಶಾಸಕ ಹಾಗೂ ಎಲ್ಲಾ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದ ಘಟನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ವಾರಂಬಳ್ಳಿ, ನಿವಣೆ ಸಮೀಪ ನಡೆದಿದೆ. ತೀರ್ಥಹಳ್ಳಿ – ಹೊಸನಗರ ತಾಲ್ಲೂಕಿನ ಗಡಿ ಭಾಗದ ವಾರಂಬಳ್ಳಿ, ನಿವಣೆ, ಗೊರಗೋಡು, ಜಯನಗರ, ಹೇರಗಲ್ಲು, ಕೊಳಗಿ, ಗೊರದಳ್ಳಿ, ಅಲಗಾರು, ಹುಣಸೆಮಕ್ಕಿ ಗ್ರಾಮಸ್ಥರು ಅಡಿಕೆ, ಬಾಳೆ ಸಸಿ, ಭತ್ತದ ಸಸಿಗಳನ್ನು ಕೆಸರಿನಿಂದ ಮುಚ್ಚಿಕೊಂಡಿರುವ ರಸ್ತೆಯಲ್ಲಿ ನಾಟಿ ಮಾಡುವ…

Read Full News

ಅವಧೂತ ವಿನಯ್ ಗುರೂಜಿ ಜನ್ಮ ದಿನೋತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರ ಯಶಸ್ವಿ :

ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಡಿವೈಎಸ್ಪಿ ಶಾಂತವೀರ ಉದ್ಘಾಟನೆ ಮಾಡಿದರು. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ, ಪುನೀತ್ ಬ್ರಿಗೇಡ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆ, ರೋಟರಿ ಬ್ಲಡ್ ಬ್ಯಾಂಕ್, ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಭಾಗವಹಿಸಿ ರಕ್ತದಾನಿಗಳಿಗೆ ಶುಭ ಕೋರಿದರು….

Read Full News

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ

ಸೊರಬ : ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ ಬಂದಿದೆ. ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರಾಘವೇಂದ್ರ ಟಿ., ಉಪಾಧ್ಯಕ್ಷರಾಗಿ ಹೊಸ ದಿಗಂತ ಪತ್ರಿಕೆ ವರದಿಗಾರ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಲೆನಾಡು ಮಿತ್ರ ಪತ್ರಿಕೆ ವರದಿಗಾರ ದಿನಕರ್ ಬಾವೆ, ಕಾರ್ಯದರ್ಶಿಯಾಗಿ ಕ್ರಾಂತಿದೀಪ ವರದಿಗಾರ ನೂಪಿ ಶಂಕರ್, ಖಜಾಂಚಿಯಾಗಿ ಕನ್ನಡಪ್ರಭ ವರದಿಗಾರ ಹೆಚ್.ಕೆ.ಬಿ. ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಶ್ರೀಪಾದ ಬಿಚ್ಚುಗತ್ತಿ ಅವರು…

Read Full News

ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಯ ಕುರಿತು ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ : ಆಕೆಗಾಗಿ ಲೆಟರ್ ಬರೆದವ ಈಗ ಪೊಲೀಸರ ಅತಿಥಿ

ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಭಾವಚಿತ್ರ ತೆರವುಗೊಳಿಸಿದ ವೇಳೆ ಉಂಟಾದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ನಡುವೆ ಕಳೆದ ಶನಿವಾರ ನಗರದಲ್ಲಿ ಅನಾಮದೇಯ ಪತ್ರವೊಂದು ಪತ್ತೆಯಾಗಿ ಭಾರಿ ತಲ್ಲಣ ಸೃಷ್ಠಿಸಿತ್ತು, ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸುವ ಜೊತೆಗೆ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಅನಾಮಧೇಯ ಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.. ಅಂದಹಾಗೆ ಈ ಪತ್ರ ಬರೆದಿರುವುದು ಕೂಡಾ ಆತನೇ.. ಕಾರಣ ಅದೇ ಊರಿನ ಫೈಜಲ್ ಎಂಬಾತನ…

Read Full News

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ದರ್ಪ : ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ

ತೀರ್ಥಹಳ್ಳಿ :  ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಸ್ಥಳೀಯ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಮೇಲಿನ ಕುರುವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಆರೋಪಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಛೇರಿ ಎದುರು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅವಿನಾಶ್ ರವರು ಕಳೆದ ಕೆಲ ದಿನಗಳಿಂದ ಮೇಲಿನ ಕುರುವಳ್ಳಿಯಲ್ಲಿನ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕಾರ್ಮಿಕರು ಕಷ್ಟ ಪಟ್ಟು…

Read Full News

ಅವಧೂತ ವಿನಯ್ ಗುರೂಜಿಯವರ ಜನ್ಮ ದಿನೋತ್ಸವದ ಅಂಗವಾಗಿ ರಕ್ತದಾನ :

ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಅಗಸ್ಟ್ 24ರಂದು ತೀರ್ಥಹಳ್ಳಿ ತಾಲ್ಲೂಕಿನ ವೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ತೀರ್ಥಹಳ್ಳಿ ತಾಲ್ಲೂಕಿನ ರಕ್ತದಾನಿಗಳು, ಸಮಸ್ತ ಜನತೆ ಹಾಗೂ ಶ್ರೀ ವಿನಯ್ ಗುರೂಜಿಯವರ ಭಕ್ತರು ಸಮಸ್ತ ಜನತೆ ರಕ್ತದಾನ ಮಾಡಿ ಇನ್ನೊಂದು ಜೀವ ಕಾಪಾಡಲು ಮನವಿ ಮಾಡಲಾಗಿದೆ. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ…

Read Full News

ಜಮೀನಿಗೆ ಹೋಗಲು ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನಿಂದ ತಾಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹ :

ಹೊಸನಗರ: ತಮ್ಮ ಜಮೀನಿಗೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನೋರ್ವ ತಾಲೂಕು ಕಛೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಹೊಸನಗರ ತಾಲೂಕಿನ ಎಚ್.ಮಳವಳ್ಳಿ ನಿವಾಸಿ ಕೆ.ಯು ದಿನೇಶ್ ಅವರು, ತಮ್ಮ ಜಮೀನಿಗೆ ತೆರಳಲು ರಸ್ತೆ ಬಂದ್ ಮಾಡಲಾಗಿದೆ. ಈ ಬಗ್ಗೆ ವರ್ಷಗಳ ಕಾಲ ಹೋರಾಟ ನಡೆಸಿದರೂ ಅಧಿಕಾರಿವರ್ಗ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019ರಲ್ಲಿಯೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನ್ನ ಕೃಷಿ ಜಮೀನಿಗೆ ತೆರಳುವ ದಾರಿಗೆ ಅಡ್ಡಲಾಗಿ ಗ್ರಾಮದ ಇನ್ನೋರ್ವ ಕೃಷಿಕ…

Read Full News

ಕ್ರೀಡಾಕೂಟದಲ್ಲಿ ನಡೆದ ಜಗಳ ಹಿನ್ನಲೆಯಲ್ಲಿ ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ : ಅಂಗಡಿಗಳು ಸಂಪೂರ್ಣ ಬಂದ್

ಶಿರಾಳಕೊಪ್ಪ : ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.  ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಕ್ರೀಡಾಂಗಣದಿಂದ ಹೊರ ಬಂದ ಒಂದು ಕೋಮಿನ ಯುವಕರ ಗುಂಪು ಮತ್ತೊಂದು…

Read Full News

ಯಕ್ಷಗಾನ ಕಲೆಗೆ ಸಾವಿರ ವರ್ಷದ ಇತಿಹಾಸವಿದೆ : ಶ್ವೇತ ಶ್ರೀಧರ್

ಹೊಸನಗರ : ಯಕ್ಷಗಾನ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ.ಕಲಾವಿದರು ತಮ್ಮ ಪ್ರತಿಭೆ ಯನ್ನು ಯಾವುದೇ ತಯಾರಿ ಇಲ್ಲದೆ ಕ್ಷಣ ಕ್ಷಣಕ್ಕೂ ಪ್ರದರ್ಶನ ನೀಡಿ..ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿ ಅರ್ಥ ಹೇಳುವ ಸ್ಪಷ್ಟ ಕನ್ನಡ ಉಚ್ಚಾರಣೆ ಮಾಡುವ ಕಲೆ…ಸಾಂಪ್ರದಾಯಿಕ, ಸಾಂಸ್ಕೃತಿಕ, ಕಲೆ ಯಕ್ಷಗಾನವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ರ್ಮೋಚಾ ಕಾರ್ಯದರ್ಶಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಶ್ವೇತ ಶ್ರೀಧರ್ ಹೇಳಿದರು. ಶುಕ್ರವಾರ  ಬೆಂಗಳೂರು ರವಿಂದ್ರ ಕಲಾ ಕ್ಷೇತ್ರದಲ್ಲಿ ಯಕ್ಷ ಮಿತ್ರ ಬಳಗ ಬೆಂಗಳೂರು ಹಾಗೂ ಕನ್ನಡ…

Read Full News

2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ : ಶಾರದ ಪೂರ್ಯನಾಯ್ಕ್

ಹೊಸನಗರ : 2023ರಲ್ಲಿ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಹೇಳಿದರು. ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜೆಡಿಎಸ್ ಪಕ್ಷವು ಬೇರೂರಿ ಅತ್ಯಂತ ಕ್ರಿಯಾಶೀಲವಾಗಿ ಇದ್ದದ್ದು ಈ ಹೊಸನಗರ ತಾಲ್ಲೂಕಿನಲ್ಲಿ ಕೆಲ ರಾಜಕೀಯ ಸ್ಥಿತ್ಯಂತರಗಳಿಗೆ ಕಾರ್ಯಕರ್ತರು ಚದುರಿದ್ದು ಅವರನ್ನು…

Read Full News

ಹುಂಚದಕಟ್ಟೆಯಲ್ಲಿ ಹಳ್ಳಿ ಭೇಟಿ ಮತ್ತು ಗ್ರಾಮ ವಾಸ್ತವ್ಯ : ಅಕ್ರಮ ಮದ್ಯ ಮಾರಾಟದ ವಿರುದ್ದ ಸಿಡಿದೆದ್ದ ಮಹಿಳೆಯರು,ತಬ್ಬಿಬ್ಬಾದ ಅಬಕಾರಿ ಅಧಿಕಾರಿ

ಮನೆ-ಮನೆಗಳಲ್ಲಿ ಆಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಯುವಜನಾಂಗ ಮತ್ತು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಶಾಲಾ ಅವರಣದ ತುಂಬ ಮಧ್ಯದ ಬಾಟಲ್ ಮತ್ತು ಪೌಚು ಪ್ಯಾಕೇಟ್‌ಗಳ ರಾಶಿಯೇ ಬಿದ್ದಿರುತ್ತದೆ ಶಾಲೆ ಅರಂಭಕ್ಕೂ ಮುನ್ನ ಮಕ್ಕಳಿದ ಅದನ್ನು ಅರಿಸುವುದೇ ಕೆಲಸವಾಗಿದೆ.ಈ ಬಗ್ಗೆ ಗ್ರಾಮ ಸಭೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ  ಅಬಕಾರಿ ಅಧಿಕಾರಿಗಳು ಅಂಗಡಿ ಮನೆಗಳ ಬಳಿ ಬಂದು ಹಪ್ತಾ ವಸೂಲಿ ಮಾಡಿಕೊಂಡು ಹೋಗುತ್ತಾರೆಯೇ ಹೊರತು ಮಧ್ಯಮಾರಾಟ ತಡೆಯುತ್ತಿಲ್ಲ ಎಂದು ಅಬಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಮಹಿಳೆಯರು ಗರಂ ಅಗುವ ಮೂಲಕ…

Read Full News

ರಿಪ್ಪನ್‌ಪೇಟೆ : ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ – ದಂಡ ಸಂಗ್ರಹ

ರಿಪ್ಪನ್‌ಪೇಟೆ : ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಪಟ್ಟಣದ ವಿನಾಯಕ ವೃತ್ತ,ಸಾಗರ ರಸ್ತೆ ಸೇರಿದಂತೆ ಅನೇಕ ಭಾಗಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್‌ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್‌ ಮಾಲೀಕರಿಗೆ ನೋಟೀಸ್‌ ಜಾರಿ ಮಾಡಿ ತಂಬಾಕು…

Read Full News

ವ್ಯಸನ ಮುಕ್ತ ಸಮಾಜಕ್ಕಾಗಿ 450 ಕಿಲೋ ಮೀಟರ್ ಪಾದಯಾತ್ರೆ : ಅಥಣಿಯಿಂದ ಹೊಂಬುಜಾ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಬಂದ ಭಕ್ತರ ದಂಡು

ರಿಪ್ಪನ್ ಪೇಟೆ : ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಪಣತೊಡಬೇಕು ಎಂಬ ಆಶಯದೊಂದಿಗೆ ಆ ನಿಟ್ಟಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ಮೂಲಕ ಜನಜಾಗೃತಿ ಗೊಳಿಸುತ್ತಿರುವುದು  ವಿಶೇಷ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ- ಐನಾಪುರ ಗ್ರಾಮದ ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿ ಪಾದಯಾತ್ರ  ಸಂಘವು   ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶ್ರೀ ಕ್ಷೇತ್ರ ಹೊಂಬುಜಕ್ಕೆ  ಸುಮಾರು 450  ಕಿಲೋ ಮೀಟರ್ ಪಾದಯಾತ್ರೆ ಯಲ್ಲಿ ಬಂದು ದರ್ಶನ  ಪಡೆಯುತ್ತಿದ್ದಾರೆ. ಪದ್ಮಾವತಿ ಪಾದಯಾತ್ರಾ…

Read Full News

ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ : ವಿಡಿಯೋ ಸಹಿತ ಬಿಜೆಪಿಗೆ ಭದ್ರಾವತಿ ಶಾಸಕ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆ ದಿನವಾದ ಸೋಮವಾರ ಸಂಜೆ ಸಾವರ್ಕರ್​ ಫ್ಲೆಕ್ಸ್​ ತೆರವು ವಿವಾದದಲ್ಲಿ ಪ್ರೇಮ್​ಸಿಂಗ್​ ಎಂಬಾತನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಪ್ರಕ್ಷ್ಯಬ್ಧ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಬೆನ್ನಲ್ಲೇ ಅಂದರೆ ಮಂಗಳವಾರ ಭದ್ರಾವತಿಯಲ್ಲಿ ಹಿಂದು ಯುವಕ ಸುನೀಲ್​ ಎಂಬಾತನ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ನಡೆದಿತ್ತು. ಇದು ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ, ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಸುನೀಲ್​ ಮೇಲಿನ ಹಲ್ಲೆ ಪ್ರಕರಣ ಕುರಿತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಭದ್ರಾವತಿ…

Read Full News