ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಈ ಬಾರಿ ಈದ್ ಮಿಲಾದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ನಡೆದಿದೆ.
ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸೀದಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಈ ಬಾರಿ ಅದ್ದೂರಿಯಾಗಿ ಈದ್ ಮಿಲಾದ್ ಕಾರ್ಯಕ್ರಮವನ್ನು ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ.
ಸತತ ಎರಡು ಮೂರು ವರ್ಷಗಳ ಕಾಲ ಮಹಾಮಾರಿ ಕೊವೀಡ್ -19 ಅಟ್ಟಹಾಸದಿಂದ ಸಂಭ್ರಮದ ಈದ್ ಮಿಲಾದ್ ಆಚರಣೆಗೆ ತೊಡಕಾಗಿತ್ತು ಹಾಗಾಗಿ ಈ ಬಾರಿ ಅದ್ದೂರಿ ಈದ್ ಮಿಲಾದ್ ಹಬ್ಬವನ್ನು 20,21,22 ಮತ್ತು 23 ರಂದು ಆಚರಿಸಲಾಗುತ್ತದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಕೆಹೆಚ್ ಆರ್ ಮುಸ್ತಫಾ ತಿಳಿಸಿದರು.
ಈದ್ ಮಿಲಾದ್ ಆಚರಣೆಯ ಅಂಗವಾಗಿ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ ಮತ್ತು ಹೊಸನಗರ ರಸ್ತೆಯಲ್ಲಿ ದೀಪಾಲಾಂಕರ ಮಾಡಲಾಗಿದ್ದು ನೋಡುಗರ ಮನಸೆಳೆಯುವಂತಿದೆ.
ಅಕ್ಟೋಬರ್ 20ರಂದು ಧ್ವಜಾರೋಹಣ ಮತ್ತು ಸೌಹಾರ್ದ ಸಮ್ಮಿಲನ ಕಾರ್ಯಕ್ರಮ :
ಈ ದಿನ ಸಂಜೆ 4.30 ಕ್ಕೆ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 5 ಗಂಟೆಗೆ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮೂಲೆಗದ್ದೆ ಮಠದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿಗಳು ಹಾಗೂ ಶಿವಮೊಗ್ಗ ಧರ್ಮ ಕ್ಷೇತ್ರದ ಫಾದರ್ ವೀರೇಶ್ ವಿ ಮೋರಸ್ ಮತ್ತು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ್ ಮುನೀರ್ ಸಖಾಫ಼ಿ ಭಾಗವಹಿಸುವರು.
ಅಂದು ಸಂಜೆ ಮಹಮ್ಮದ್ ಶಿಹಾಬುದ್ದೀನ್ ರಿಝ್ವಿ ರವರಿಂದ ಪ್ರಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಅಕ್ಟೋಬರ್ 21:
ಈ ದಿನ ಸಂಜೆ 6.30 ಕ್ಕೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸೀದಿಯ ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 22 :
ಈ ದಿನ ಸಂಜೆ 8.30ಕ್ಕೆ ಮಿಶ್ಕಾತುಲ್ ಮದೀನ ತಂಡದಿಂದ ಬುರ್ದಾ ಮಜ್ಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ದಿನ ಶಿವಮೊಗ್ಗದ ಅಸ್ಸಯಿದ್ ಶಹಿಯುದ್ದೀನ್ ಅಲ್ ಬುಖಾರಿ,ಅಲ್ ಹಾಜ್ ಮಹಮ್ಮದ್ ಪೈಜಿ ಕಾರ್ಗಲ್ ,ಅಲ್ ಹಾಜ್ ಜಬ್ಬಾರ್ ಸಅದಿ ಉಪಸ್ಥಿತರಿರುತ್ತಾರೆ.
ಅಕ್ಟೋಬರ್ 23 :
ಈ ದಿನ ಬೆಳಿಗ್ಗೆ 9.00 ಗಂಟೆಗೆ ಮಿಲಾದ್ ಸಂದೇಶ ಮೆರವಣಿಗೆ ಏರ್ಪಡಿಸಲಾಗಿದ್ದು.ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫ಼ಿ ಸಂದೇಶ ಭಾಷಣ ಮಾಡಲಿದ್ದಾರೆ.ನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 4.00 ಗಂಟೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ
ಇದೇ ದಿನ ಸಂಜೆ ಅಬ್ದುಲ್ ಹಮೀದ್ ಫ಼ೈಜಿ ಕಿಲ್ಲೂರು ಇವರಿಂದ ನಅತೆ ಷರೀಫ್ ಮತ್ತು ಹನೀಫ಼್ ರಜಾ ಬಿಜಾಪುರ ಇವರಿಂದ ಹುಬ್ಬುರಸೂಲ್ ಪ್ರಭಾಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬಹು ಅಸ್ಸಯಿದ್ ಹಬೀಬುಲ್ಲಾ ಪೂಕೋಯಾ ತಂಗಳ್ ರವರಿಂದ ದುಆ ಆಶೀರ್ವಚನ ಇರುತ್ತದೆ.
ರಿಪ್ಪನ್‌ಪೇಟೆಯ ಸಮಸ್ತ ನಾಗರೀಕರು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಈದ್ ಮಿಲಾದ್ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.