Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಜಿಲ್ಲೆಯಲ್ಲಿ ಚುರುಕುಗೊಂಡ ಮತದಾನ : ಸಂಜೆಯೇ ಫಲಿತಾಂಶ ಘೋಷಣೆ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇವತ್ತು ಸಂಜೆ ವೇಳೆಗೆ ಕಸಾಪ ಶಿವಮೊಗ್ಗ ಘಟಕದ ನೂತನ ಸಾರಥಿ ಯಾರು ಅನ್ನುವುದು ಗೊತ್ತಾಗಲಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶಿಕಾರಿಪುರದಲ್ಲಿ 4, ಶಿವಮೊಗ್ಗದಲ್ಲಿ 3, ಉಳಿದ ತಾಲೂಕುಗಳಲ್ಲಿ ತಲಾ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. 9,143 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 2811 ಮತದಾರರಿದ್ದಾರೆ. ಭದ್ರಾವತಿಯಲ್ಲಿ 1202, ತೀರ್ಥಹಳ್ಳಿಯಲ್ಲಿ 730,…

Read Full News

ಸೈಕಲ್‌ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ :ಬಾಲಕ ಸ್ಥಳದಲ್ಲಿಯೇ ಸಾವು

ಸೊರಬ : ಸೈಕಲ್ ಗೆ ಯಮಸ್ವರೂಪಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ತೋರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾನುಗೋಡು ಗ್ರಾಮದ ಜೀವ (13) ಮೃತ ದುರ್ದೈವಿ. ಸಿದ್ದಾಪುರದಿಂದ ಚಂದ್ರಗುತ್ತಿಯಡೆಗೆ ತೆರಳುತ್ತಿದ್ದ ಯಮ ಸ್ವರೂಪಿ ಟಿಪ್ಪರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಸೈಕಲ್ ನಲ್ಲಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೈಕಲ್ ಸವಾರ ಕಾನುಗೋಡು ಗ್ರಾಮದ ಸಂದೀಪ (32) ಎಂಬ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ….

Read Full News

ತೀರ್ಥಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರ ಬಂಧನ :

ತೀರ್ಥಹಳ್ಳಿ: ಮಾರಿಕಾಂಬ ದೇವಸ್ಥಾನದ ಎಡಭಾಗದ ಓಣಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಕುಶಾವತಿಯ ಅನುಜಿತ್ ಮತ್ತು ಬೆಟ್ಟಮಕ್ಕಿಯ ಸುಮಂತ್ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ತೀರ್ಥಹಳ್ಳಿ ಪೊಲೀಸರು ಗಸ್ತು ತಿರುಗುವಾಗ ಅನುಜಿತ್, ಸುಮಂತ್ ಮತ್ತು ಸೊಪ್ಪುಗುಡ್ಡೆಯ ಮಂಜುನಾಥ ಅನುಚಿತವಾಗಿ ವರ್ತಿಸುತ್ತಿದ್ದರು. ಮೂವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು ಇಬ್ಬರದ್ದು ಪಾಸಿಟಿವ್ ಬಂದಿದೆ.  ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಶ್ರೀಕಾಂತ್ ಪುನರಾಯ್ಕೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಹುಟ್ಟಿಸಿದೆ : ಆರ್ ಎನ್ ಮಂಜುನಾಥ್

ಶಿವಮೊಗ್ಗ: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಎಂ ಶ್ರೀಕಾಂತ್   ರವರು ಪುನರ್ ಆಯ್ಕೆಯಾಗಿರುವುದಕ್ಕೆ ಹೊಸನಗರ ತಾಲೂಕಿನ ಜೆಡಿಎಸ್ ಮುಖಂಡರಾದ ಆರ್ ಎನ್ ಮಂಜುನಾಥ್ ಹರ್ಷ ವ್ಯಕ್ತ ಪಡಿಸಿದ್ದಾರೆ.  ಯುವಕರ ಕಣ್ಮಣಿ, ಬಡವರ ಬಂಧುವಾದ ಎಂ ಶ್ರೀಕಾಂತ್  ನಾಯಕರನ್ನು ಸೃಷ್ಟಿಮಾಡುವ ನಾಯಕತ್ವದ ಗುಣವನ್ನು ಹೊಂದಿರುವ ಉನ್ನತ ಹೃದಯವಂತ ವ್ಯಕ್ತಿ. ಜಿಲ್ಲೆಯ ಯುವಕರ ಪಾಲಿಗೆ ಅಣ್ಣನ ಸ್ಥಾನದಲ್ಲಿದ್ದು, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿರುವುದು ಅಭಿನಂದನೀಯ ಅವರಿಗೆ ಹೊಸನಗರ ಕಾರ್ಯಕರ್ತರ ಪರವಾಗಿ ಹಾರ್ದಿಕ ಅಭಿನಂದನೆಗಳು…

Read Full News

ಕುಸಿದು ಬಿದ್ದ ಮನೆ ಗೋಡೆ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ ಸದಸ್ಯರು!!!!

ಶಿವಮೊಗ್ಗ, ನ.20: ಮಳೆಯಿಂದ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ, ಶಿವಮೊಗ್ಗ ತಾಲೂಕು ಕೂಡಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಚಿಕ್ಕ ಕೂಡ್ಲಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಪಾರ್ವತಮ್ಮ ಎಂಬುವವರ ಮನೆಯೇ ಕುಸಿದು ಬಿದ್ದಿದ್ದಾಗಿದೆ. ಮುಂಜಾನೆ ಸವಿ ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಹಾಗೂ ವಿಜಯ್ ಭೇಟಿ ನೀಡಿ ಪರಿಶೀಲಿಸಿದರು. ‘ಸ್ಥಳಕ್ಕೆ ಇಲ್ಲಿಯವರೆಗೂ ಯಾವುದೆ ಅಧಿಕಾರಿ – ಸಿಬ್ಬಂದಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಗ್ರಾಮದ…

Read Full News

ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹರಿಹಾಯ್ದ ಲಗೇಜ್ ಆಟೋ :

ಸಾಗರ: ದ್ವಿಚಕ್ರ ವಾಹನವನ್ನು ಬಚಾವ್ ಮಾಡಲು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ಯುವತಿಯರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದು ಅಪಘಾತವಾಗಿರುವ ಘಟನೆ ಸಾಗರದಲ್ಲಿ ಸಂಜೆ ನಡೆದಿದೆ. ಸಾಗರ ನಗರ ಬಿಹೆಚ್ ರಸ್ತೆಯಲ್ಲಿ ಇರುವ ಸುಜುಕಿ ಶೋರೂಮ್ ಎದುರು ಶುಕ್ರವಾರ ಸಂಜೆ ಲಗೇಜ್ ಆಟೋ ಒಂದು ಅಚಾನಕ್ಕಾಗಿ ರಸ್ತೆಯ ಮಧ್ಯ ಬಂದ ದ್ವಿಚಕ್ರ ವಾಹನಕ್ಕೆ ಬಚಾವ್ ಮಾಡಲು ಹೋಗಿ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಎಸ್ಎನ್ ನಗರದ ನಾಲ್ಕನೇ ತಿರುವಿನ ವಾಸಿಗಳಾದ ಆಫ಼್ರೀನ್ ಹಾಗೂ ಶಮ್ರೀನ್ ಎಂಬ …

Read Full News

ರಿಪ್ಪನ್ ಪೇಟೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಪುನೀತ್ ರಾಜ್​ಕುಮಾರ್‌ಗೆ ಶ್ರದ್ಧಾಂಜಲಿ

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ನೇರಲೆಮನೆ – ಕ್ವಾಡ್ರಿಗೆ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಮತ್ತು ರೋಟರಿ ಕ್ಲಬ್ ರಿಪ್ಪನ್ ಪೇಟೆ ಸಂಯುಕ್ತ ಆಶ್ರಯದಲ್ಲಿ ಪುನೀತ್ ರಾಜ್​ಕುಮಾರ್​ ಪುಣ್ಯ ಸ್ಮರಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಗುರುವಾರ ಬೆಳಗ್ಗೆ ಆರಂಭವಾದ ರಕ್ತದಾನ ಶಿಬಿರದಲ್ಲಿ ಹತ್ತಾರು ಅಪ್ಪು ಅಭಿಮಾನಿಗಳು ರಕ್ತದಾನ ಮಾಡಿದರು. ಪುನೀತ್‌ ಅಗಲಿಕೆ ಹಿನ್ನೆಲೆ ಮೌನಾಚರಣೆ ಬಳಿಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ಸಾಮಾಜಿಕ ಕಾಳಜಿಯನ್ನ ಶ್ಲಾಘಿಸಲಾಯಿತು. ಮತ್ತು ಅಪ್ಪು ಶಿವಮೊಗ್ಗಕ್ಕೆ…

Read Full News

ಸಿನಿಮೀಯ ರಿತಿಯಲ್ಲಿ ದನಗಳ್ಳರನ್ನು ಮಟ್ಟ ಹಾಕಿದ ಹೊಸನಗರ ತಹಶೀಲ್ದಾರ್ ವಿ ಎಸ್ ರಾಜೀವ್ : ರಿಪ್ಪನ್ ಪೇಟೆ ಪೊಲೀಸರು ಬದುಕುಳಿದಿದ್ದೆ ಹೆಚ್ಚು

ಹೊಸನಗರ :  ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ದನಗಳ್ಳರು ಗ್ರಾಮದ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ನಡೆದಿದೆ.  ಬುಧವಾರ ರಾತ್ರಿ ಮೇಲಿನಬೆಸಿಗೆಯ ಗ್ರಾಮಸ್ಥರು ಅಕ್ರಮ ದನಗಳ್ಳರ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ದನಕಳ್ಳರು ಮಾರಕಾಸ್ತ್ರಗಳಿಂದ ಬೆದರಿಸಿ ವಾಹನ ಚಲಾಯಿಸಿದ್ದಾರೆ.ಕೂಡಲೇ ಗ್ರಾಮಸ್ಥರು ತಹಸಿಲ್ದಾರ್ ವಿ.ಎಸ್. ರಾಜೀವ್‌ ಮತ್ತು ಸಿಬ್ಬಂದಿಗಳ ತಂಡಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ರಾಜೀವ್ ದನಗಳ್ಳರ ವಾಹನ ಹೊಸನಗರದಿಂದ ರಿಪ್ಪನ್ ಪೇಟೆ…

Read Full News

ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು : ಅದ್ದೂರಿಯಾಗಿ ಜರುಗಿದ ಮಳಲಿ ಮಠದ ಕಾರ್ತಿಕ ದೀಪೋತ್ಸವ

ರಿಪ್ಪನ್‌ಪೇಟೆ: ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಬಾಹ್ಯ ಕತ್ತಲೆ ಕಳೆಯಲು ದೀಪ ಬೇಕು. ಮನದ ಅಜ್ಞಾನ ದೂರ ಮಾಡಲು ಜ್ಞಾನ ಬೋಧಾಮೃತ ಬೆಳಕಿನ ಕಿರಣ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ ಅಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ಮನುಷ್ಯನ…

Read Full News

ಅಕ್ರಮ ಗೋಮಾಂಸ ಸಾಗಿಸುತ್ತಿದ್ದವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು

ಮೂಡಿಗೆರೆ : ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಭಜರಂಗದಳದ ಕಾರ್ಯಕರ್ತರು ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಪ್ರತೀ ಶುಕ್ರವಾರದಂದು ಗೋಮಾಂಸ ಸಾಗಾಟ ನಡೆಸಿ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಅಲಿ ಎಂಬ 35 ವರ್ಷದವನ್ನು, ಮುತ್ತಿಗೆಪುರದ ಹಂಡಗುಳಿ ದಾರಿಯಲ್ಲಿ ಭಜರಂಗದಳದ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಈತನು ಈ ಹಿಂದೆ ಸಾಗಾಟ ನಡೆಸಿದ ಆರೋಪದ ಮೇರೆಗೆ ಭಜರಂಗದಳದ ಕಾರ್ಯಕರ್ತರು ಈತನನ್ನು ಬಹಳ ಸಮಯ ಕಾದು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆರೋಪಿಯನ್ನು…

Read Full News

ರಿಪ್ಪನ್ ಪೇಟೆಯಲ್ಲಿ ಇದೇ 27 ಕ್ಕೆ ಅದ್ದೂರಿ ಕನ್ನಡ ರಾಜ್ಯೋತ್ಸವ : ಪದ್ಮಶ್ರಿ ಪುರಸ್ಕೃತ ಹರೇಕಾಳ ಹಾಜಬ್ಬ ಹಾಗೂ ಮಂಜಮ್ಮ ಜೋಗತಿಗೆ ಸನ್ಮಾನ ಕಾರ್ಯಕ್ರಮ

ರಿಪ್ಪನ್ ಪೇಟೆ : ನವೆಂಬರ್ 27 ರ ಶನಿವಾರ ರಿಪ್ಪನ್ ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ದಿಂದ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆರ್ ಎ ಚಾಬುಸಾಬ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು. ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯ ಕುವೆಂಪು ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವಂಬರ್ 27 ರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ…

Read Full News

ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಚರಣೆ : ಕಳ್ಳತನವಾಗಿದ್ದ ವಸ್ತುಗಳು ವಾರಸುದಾರರಿಗೆ ವಾಪಾಸ್

ಶಿವಮೊಗ್ಗ: 2021 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 518 ಸ್ವತ್ತು ಕಳವು ಪ್ರಕರಣ ವರದಿಯಾಗಿದ್ದು ಅಂದಾಜು ಮೌಲ್ಯ 6,23,91,2147 ರೂ. ಎಂದು ಅಂದಾಜಿಸಲಾಗಿದೆ. ಅದರಲ್ಲಿ 3,03,59,176 ರೂ. ಮೌಲ್ಯದ ಮಾಲುಗಳನ್ನು ಪತ್ತೆ ಮಾಡಲಾಗಿದ್ದು, ಸದರಿ ಮಾಲಿನ ವಾರಸುದಾರರಿಗೆ ಬಿಟ್ಟು ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ. ಅವರು ಇಂದು ಡಿಎಆರ್ ಸಭಾಂಗಣದಲ್ಲಿ ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲ್ ಗಳನ್ನು ವಾರಸುದಾರರಿಗೆ ಬಿಟ್ಟುಕೊಡುವ ಸಮಾರಂಭದ ಸುದ್ದಿಗಾರರೊಂದಿಗೆ ಮಾತನಾಡಿದರು….

Read Full News

ಆನಂದಪುರದಲ್ಲಿ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಹಳೆ ಸಂತೆ ಮಾರ್ಕೆಟ್ ರಸ್ತೆಯ ನಿವಾಸಿ ಮಹೇಶ್ (31)  ವರ್ಷ ಇಂದು ಮಧ್ಯಾಹ್ನ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಮಹೇಶ್ ಕೊರೋನಾ ಲಾಕ್ ಡೌನ್  ಸಂದರ್ಭದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಹಾಗೂ ಕೊರೋನಾ ಸಂದರ್ಭದಲ್ಲಿ ಅವರ ತಾಯಿಯವರು ಕೂಡ ಕರೋನಾಗೆ ಬಲಿಯಾಗಿದ್ದರು ಇದರಿಂದಲೂ ತೀವ್ರ ಮಾನಸಿಕ ಜಿಗುಪ್ಸೆಯನ್ನು ಹೊಂದಿದ್ದರ ಪರಿಣಾಮ ಹಾಗೂ ಇತ್ತೀಚೆಗೆ ಕೆನರಾ ಬ್ಯಾಂಕ್ ನಲ್ಲಿ ತರಕಾರಿ ಅಂಗಡಿಗೆ ಸಾಲವನ್ನು…

Read Full News

ರಿಪ್ಪನ್ ಪೇಟೆಯ ಕುಕ್ಕಳಲೇ ವೃತ್ತಕ್ಕೆ ಪುನೀತ್ ರಾಜ್ ಕುಮಾರ್ ನಗರವೆಂದು ನಾಮಕರಣ ಮಾಡಿ ಗೌರವ ಸಲ್ಲಿಸಿದ ಗ್ರಾಮಸ್ಥರು !!!

ರಿಪ್ಪನ್ ಪೇಟೆ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂದು ನಾಮಕರಣ ಮಾಡಲಾಗಿದೆ.ಸ್ವಯಂ ಸಾರ್ವಜನಿಕರೇ ವೃತ್ತಕ್ಕೆ ಪುನೀತ್ ರಾಜಕುಮಾರ್ ನಗರ ಎಂದು ಹೆಸರು ಹಾಕಿ ನಾಮಪಲಕ ಪ್ರತಿಷ್ಟಾಪಿಸಿದ್ದಾರೆ. ರಿಪ್ಪನ್ ಪೇಟೆಯ ಸಾಗರ ಮುಖ್ಯ ರಸ್ತೆಯಿಂದ ಕುಕ್ಕಳಲೆ ಗ್ರಾಮಕ್ಕೆ ಹೋಗುವ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ನಗರ ಎಂಬ ಹೆಸರನ್ನು ಅಧಿಕೃತಗೊಳಿಸುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್…

Read Full News

ಶಿವಮೊಗ್ಗದಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ವಿಚಾರ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಖುದ್ದು ಎಸ್ಪಿಗೆ ಕರೆ ಮಾಡಿದ್ದೇಕೆ !!! ದೂರವಾಣಿಯಲ್ಲಿ ಹೇಳಿದ್ದಾದರೂ ಏನು ???

ಶಿವಮೊಗ್ಗ : ನಗರದಲ್ಲಿ ಇತ್ತೀಚೆಗೆ ಪೌರ ಕಾರ್ಮಿಕರ ಮೇಲೆ ಕೆಲವು ಕಿಡಿಗೇಡಿಗಳು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಪೌರ ಕಾರ್ಮಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಸಚಿವ ಕೆ.ಎಸ್. ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಸ ವಿಲೇವಾರಿ ಮಾಡುವವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪೌರ ಕಾರ್ಮಿಕರು ಜನರ ಸೇವೆ ಮಾಡುತ್ತಾರೆ. ಅವರ ಮೇಲೆ ಹಲ್ಲೆ ಮಾಡುವಷ್ಟರಮಟ್ಟಿಗೆ…

Read Full News

ಬೀದಿ ಕಾಮಣ್ಣರೇ ಹುಷಾರು !! ಸಾಗರಕ್ಕೆ ಬಂದಿದ್ದಾರೆ ಸ್ಮಾರ್ಟ್ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್

ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಇದೀಗ ನೂತನ  ಎ ಎಸ್ ಪಿ ಯಾಗಿ ಐಪಿಎಸ್ ಅಧಿಕಾರಿಯಾದ ರೋಹನ್ ಜಗದೀಶ್ ಚಾರ್ಜ್ ಪಡೆದಿದ್ದಾರೆ.  ಅಧಿಕಾರ ಸ್ವೀಕರಿಸಿ ಇನ್ನೂ 1 ವಾರವಾಗಿದೆ ಅಷ್ಟೆ, ಇದೀಗ ಸ್ಮಾರ್ಟ್ ಐಪಿಎಸ್ ಅಧಿಕಾರಿಯವರು  ಸಾಗರವನ್ನು  ಅಪರಾಧ ಮುಕ್ತವನ್ನಾಗಿಸಲು ಪಣ ತೊಟ್ಟಿದ್ದಾರೆ. ಅಂತೆಯೇ ಇಂದು ಸಾಗರದ ಸುತ್ತಮುತ್ತ ಬೀದಿ ಕಾಮಣ್ಣರ ಮೇಲೆ ಕಣ್ಣಿಟ್ಟು ಹುಡುಗಿಯರ ವಿಚಾರಕ್ಕೆ ಹೋಗದಿರುವಂತೆ ಬಿಸಿ ಮುಟ್ಟಿಸಿದ್ದಾರೆ. ಬುಲೆಟ್ ಬೈಕ್ ಗಳಲ್ಲಿ ಕರ್ಕಶ ಸೈಲೆನ್ಸರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಬೈಕ್…

Read Full News

ದೀಪಾವಳಿ ಸಂಭ್ರಮಕ್ಕೆ ಬೀಗರ ಮನೆಗೆ ಹೊರಟಿದ್ದ ಕುಟುಂಬದವರ ಮೇಲೆ ಜವರಾಯನ ಅಟ್ಟಹಾಸ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು!!!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ಬೈಕ್ ಹಾಗೂ 407 ಟೆಂಪೋ  ವಾಹನದ ನಡುವೆ ಮುಖಾಮುಖಿ ಅಪಘಾತ ವಾಗಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ತಂದೆ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರು ಭಾಗದಿಂದ ಬಂದ 407  ಟೆಂಪೋ ವಾಹನ ಡಿಕ್ಕಿ ಹೊಡೆದಿದ್ದು ರಾಮಚಂದ್ರ ವೀರಪ್ಪ ( 42) ಪುಟಾಣಿ ಮಕ್ಕಳಾದ ಶಶಾಂಕ್( 11) ಆದರ್ಶ( 5)ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನೂ ಪತ್ನಿ ಭಾಗ್ಯಮ್ಮನಿಗೂ ಕೂಡ…

Read Full News

ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ : ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಗೆ ಸಕಲ ಸಿದ್ದತೆ :

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಹಸ್ರಾರು ವರುಷಗಳ ಇತಿಹಾಸ ಪ್ರಸಿದ್ದ ಶ್ರೀ ಜಗದ್ಗುರು ರಂಭಾಪುರಿ ಖಾಸಾ ಶಾಖಾ  ಶ್ರೀಮಾನ್ ಮಹಾಸಂಸ್ಥಾನ ಮಳಿಲಿಮಠ ಕೋಣಂದೂರು ಇಲ್ಲಿ ದಿನಾಂಕ 18.11.2021 ರಂದು ಕಾರ್ತಿಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಏರ್ಪಡಿಸಲಾಗಿದೆ.  ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರಂಭಾಪುರಿ ಪೀಠ ಬಾಳೆಹೊನ್ನೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.  ಈ…

Read Full News

ಕಾರ್ಗಲ್ ನಲ್ಲಿ ಎಸಿಬಿ ದಾಳಿ ಕಂದಾಯ ನಿರೀಕ್ಷಕ ಕೃಷ್ಣಮೂರ್ತಿ ಬಂಧನ..

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ನಾಡ ಕಚೇರಿ ಮೇಲೆ ಶಿವಮೊಗ್ಗ ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಕಂದಾಯ ನಿರೀಕ್ಷಕ ಕೃಷ್ಣಮೂರ್ತಿಯನ್ನು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಾನೂರು ನಿವಾಸಿ ಹತ್ತಿರ ಕುಟುಂಬದ ಆಸ್ತಿ ಹಿಸ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ಖಾತೆಯನ್ನು ಮಾಡಿಕೊಡಲು ಕೃಷ್ಣಮೂರ್ತಿ 15000 ರೂ  ಲಂಚದ ಬೇಡಿಕೆ ಇಟ್ಟಿದ್ದರು ಇಂದು 8000 ನಗದು ರೂಪದಲ್ಲಿ ಸ್ವೀಕರಿಸುತ್ತಿರುವ ಅಂತಹ ಸಂದರ್ಭದಲ್ಲಿ ಎಸಿಬಿ ಡಿವೈಎಸ್ ಪಿಲೋಕೇಶ್ ಮತ್ತು  ತಂಡ ದಾಳಿ ನಡೆಸಿದ್ದು ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ…

Read Full News

ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಬಹು ವಿಜ್ರಂಭಣೆಯಿಂದ ನೆರವೇರಿತು ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ :

ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು.ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆಯು 1956 ರ ಹಿಂದಿನದು….

Read Full News

ರಿಪ್ಪನ್ ಪೇಟೆ : ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಯುವಕ ಸಾವು : ಅಮಾಯಕ ಯುವಕನ ಸಾವಿಗೆ ಮನೆಯ ಮಾಲೀಕನ ನಿರ್ಲಕ್ಷ್ಯವೇ ಕಾರಣವಾಯಿತಾ ?????

ರಿಪ್ಪನ್ ಪೇಟೆ : ಮನೆಯ ಹಿಂಬದಿ ಇರುವ ತೆರೆದ ಬಾವಿಗೆ ಸೋಮವಾರ ರಾತ್ರಿ  ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.  ರಿಪ್ಪನ್ ಪೇಟೆಯ ವಿನಾಯಕ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಂಜನೇಯ (ಅಂಜಿ) (25) ಮನೆಯ ಹಿಂಬದಿಯಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 10.30 ರ ವೇಳೆ ಮನೆಯ ಕಾಂಪೌಂಡಿನ ಒಳಗಡೆ ಇದ್ದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈ ತೆರೆದ ಬಾವಿಗೆ ಬಿದ್ದ ಪರಿಣಾಮ ತಲೆಗೆ ಭೀಕರ ಪೆಟ್ಟಾಗಿದ್ದು…

Read Full News

ರಿಪ್ಪನ್ ಪೇಟೆಯಲ್ಲಿ ನೂತನ ಕನ್ನಡ ಸಂಘಕ್ಕೆ ಪದಾದಿಕಾರಿಗಳ ಆಯ್ಕೆ:

ರಿಪ್ಪನ್ ಪೇಟೆ : ಪಟ್ಟಣದಲ್ಲಿ ನೂತನವಾಗಿ ಕಸ್ತೂರಿ ಕನ್ನಡ ಸಂಘ ಅಸ್ತಿತ್ವಕ್ಕೆ ಬಂದಿದ್ದು ಸೋಮವಾರ ಅದರ ಪದಾದಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು. ಪಟ್ಟಣದಲ್ಲಿ ಸೋಮವಾರ ಗ್ರಾಮ ಪಂಚಾಯತ್ ನ ಕುವೆಂಪು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗಕ್ಕೆ ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು. ಕಸ್ತೂರಿ ಕನ್ನಡ ಸಂಘ ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗಕ್ಕೆ ಅಧ್ಯಕ್ಷರಾಗಿ ಆರ್ ಎ ಚಾಬುಸಾಬ್ , ಪ್ರಧಾನ ಕಾರ್ಯದರ್ಶಿಯಾಗಿ…

Read Full News

ಮಲೆನಾಡಿನಲ್ಲಿ ಮನೆ ಮುರಿದರೇ ಪೊಲೀಸರು ?? ಪೊಲೀಸರ ಗೂಂಡಾ ವರ್ತನೆಯ ಆರೋಪಕ್ಕೆ ಕಡೂರು ಪಿಎಸ್ಸೈ ರಮ್ಯಾ ಹೇಳಿದ್ದೇನು !!

ಮಲೆನಾಡಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಗೂಂಡಾ ವರ್ತನೆ ತೊರಿದ್ದು. ಮನೆಯ ಬಾಗಿಲು, ಹಂಚು ಮುರಿದು ರೌಡಿಗಳಂತೆ ಪೊಲೀಸರು ಮನೆಯ ಒಳ ಭಾಗವನ್ನು ಪ್ರವೇಶಿಸಿದ್ದಾರೆ ಎಂದು ಕುಟುಂಬದ ಸದಸ್ಯರಿಂದ ಪೋಲಿಸರ ಮೇಲೆ  ಆರೋಪ ಕೇಳಿಬಂದಿದೆ. ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಬಾರ್ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದರು.  ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಖಾಕಿ ಪಡೆ ಎಳೆದೊಯ್ದಿದ್ದಾರೆ ಎಂದು ಕುಟುಂಬದ ಓರ್ವ ಸದಸ್ಯರು ಆರೋಪಿಸಿದ್ದಾರೆ.ಒಂದೇ ಮನೆಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ….

Read Full News

ಹಣದ ವಿಚಾರವಾಗಿ ಖಾರದ ಪುಡಿ ಎರಚಿ ದಾಳಿ ಸ್ಥಳದಲ್ಲಿ ಬೈಕ್ ಸುಟ್ಟು ಭಸ್ಮ!! ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು !!

ಹಣದ ವಿಚಾರದಲ್ಲಿ ಹಾರನಹಳ್ಳಿ ರಫೀಕುಲ್ಲಾ(37) ಎಂಬುವರಿಗೆ ಖಾರದ ಪುಡಿ ಎರಚಿ ಥಳಿಸಿದ್ದು‌‌ ಬೈಕ್ ನ್ನ ಸುಟ್ಟು ಭಸ್ಮ ಮಾಡಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆದಿದೆ. ತರಕಾರಿ, ಕಾರ್ಪೆಂಟ್ ಕೆಲಸ ಮಾಡಿಕೊಂಡಿದ್ದ ರಫೀಕುಲ್ಲಾ  ಹಾರನಹಳ್ಳಿಯಿಂದ ಶಿವಮೊಗ್ಗಕ್ಕೆ ಬಜಾಜ್ ಪ್ಲಾಟಿನ ದಲ್ಲಿ ಬರುವಾಗ ಯರೇಕೊಪ್ಪದ ಅರಣ್ಯ ಇಲಾಖೆಯ ಪ್ರವೇಶ‌ದ್ವಾರದ ಬಳಿ ಖಾರದ ಪುಡಿ ಎರಚಿ ಮೂವರು  ದಾಳಿ ನಡೆಸಿದ್ದಾರೆ ಕಳೆದ ಎರಡು ತಿಂಗಳ ಹಿಂದೆ ರಫಿಕುಲ್ಲಾ ಪತ್ನಿ ರಿಹಾನಾ ಭಾನು  ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. 13…

Read Full News

ಬ್ರಿಟನ್ ಪ್ರಜೆಗೆ ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ!!! ಮಾದರಿಯದ ದಂಪತಿ

ಭದ್ರಾವತಿ : ಬ್ರಿಟನ್ ಪ್ರಜೆಗೆ ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ ಹಾಗು ಲಿಂಗಧಾರಣೆ ನಡೆಯಿತು. ಭದ್ರಾವತಿ ಮೂಲದ ಪುನೀತ್ ಹಾಗೂ ರಾಧಿಕಾ ದಂಪತಿ ಲಂಡನ್​​ನಲ್ಲಿ ನೆಲೆಸಿದ್ದಾರೆ. ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಕಳೆದ ಆರು ತಿಂಗಳ ಹಿಂದೆ ಲಂಡನ್​​ನಲ್ಲಿಯೇ ಹೆಣ್ಣು ಮಗು ಜನಿಸಿದೆ. ಇದೀಗ ಮಗುವಿನ ನಾಮಕರಣ ಭದ್ರಾವತಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಸಲಾಯಿತು. ಮಗುವಿಗೆ ಲಿಂಗಾಯತ ಧರ್ಮದಂತೆ ಲಿಂಗಧಾರಣೆ ನಡೆಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ  ಲಿಂಗಧಾರಣೆ…

Read Full News

ಶಿವಮೊಗ್ಗ ಜಿಲ್ಲಾ ಜೆಡಿಎಸ್ ರಾಯಭಾರ ಮತ್ತೆ ಎಂ.ಶ್ರೀಕಾಂತ್ ಹೆಗಲಿಗೆ, ಜಿಲ್ಲಾಧ್ಯಕ್ಷರು ಜೆಡಿಎಸ್ ಗೆಲುವಿಗೆ ರೂಪಿಸಿರುವ ಕಾರ್ಯತಂತ್ರಗಳೇನು!!! ಕಾರ್ಯಕರ್ತರು ಇದರ ಬಗ್ಗೆ ಏನನ್ನುತ್ತಾರೆ.?

ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಮತ್ತೆ ಪುನಶ್ಚೇತನಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಜೆಡಿಎಸ್ ನಲ್ಲಿ ಸಂಚಲನ ಮೂಡಿಸಿದ್ದ ಎಂ. ಶ್ರೀಕಾಂತ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಿಂದ ಸ್ವಲ್ಪ ದೂರವೇ ಉಳಿಸಿದ್ದರು. ಆದರೆ, ಮೊನ್ನೆ ನಡೆದ ಜೆಡಿಎಸ್ ವಿಷನ್-2021ರ ಸಮಾವೇಶದಲ್ಲಿ ಪಕ್ಷದ ವರಿಷ್ಟರು ಜಿಲ್ಲಾ ಜೆಡಿಎಸ್ ನ ನಾಯಕತ್ವವನ್ನು ಮತ್ತೆ ಶ್ರೀಕಾಂತ್ ಹೆಗಲಿಗೆ ಹೊರಿಸಿದ್ದಾರೆ. ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ. ಶ್ರೀಕಾಂತ್ 20 ಸಾವಿರಕ್ಕೂ ಹೆಚ್ಚು ಮತಗಳಿಸುವ…

Read Full News

ರಿಪ್ಪನ್ ಪೇಟೆ,ಶಿವಮೊಗ್ಗ ನಗರದಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ

ರಿಪ್ಪನ್ ಪೇಟೆ : ಪಟ್ಟಣದಲ್ಲಿ ಇಂದು ಸಂಜೆಯಿಂದ ಧಾರಾಕಾರ ಮಳೆ ಸುರಿದಿದೆ. ವಿನಾಯಕ ವೃತ್ತ ಸೇರಿ ಹಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿದಿದ್ದು, ಜನರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಪಟ್ಟಣದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಶುರುವಾಗಿದ್ದು, ಬಿಡುವು ಕೊಡದೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಪಟ್ಟಣದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ಇವತ್ತು ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. …

Read Full News

ಗಾಂಜಾ ವಿಚಾರವಾಗಿ ಇಬ್ಬರ ನಡುವೆ ಮಾರಾಮಾರಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲು !!!

ಭದ್ರಾವತಿ : ಗಾಂಜಾ ವಿಚಾರದಲ್ಲಿ ಇಬ್ಬರ ನಡುವೆ  ಮಾರಾಮಾರಿ ಉಂಟಾಗಿದೆ. ಗಾಂಜಾ ಪ್ರಕರಣದಲ್ಲಿ ಮೊಹ್ಮದ್ ಗೌಸ್ ಎಂಬುವನನ್ನ ಪೊಲೀಸರು ಇತ್ತೀಚೆಗೆ ಅಂದರ್ ಮಾಡಿದ್ದು, ಈ ಪ್ರಕರಣದಲ್ಲಿ ಇಬ್ಬರ ನಡುವೆ ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಸಹ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿದ್ದಾರೆ. ಭದ್ರಾವತಿಯ ಅನ್ವರ್ ಕಾಲೋನಿಯ ಕಾಫಿಬಾರ್ ನ ಬಳಿ ಮೊಹ್ಮದ್ ಗೌಸ್ ನ ಸಹೋದರ ಮೊಹ್ಮದ್ ಮುಸ್ತಫಾ, ಮೊಹ್ಮದ್ ಅರ್ಶನ್, ಮಾತನಾಡುತ್ತಿದ್ದ ವೇಳೆ ಮೊಹ್ಮದ್ ಅಫ್ತಾಬ್, ಜಾಫರ್ ಸಾದಿಕ್, ಹಾಗೂ ಇನ್ನಿತರೆ ಇಬ್ವರು ಸ್ನೇಹಿತರು ಬಂದು ಏಕಾಏಕಿ…

Read Full News

ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಎಂ.ಶ್ರೀಕಾಂತ್ ಮರುಆಯ್ಕೆ

ಶಿವಮೊಗ್ಗ : ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಎಂ ಶ್ರೀಕಾಂತ್ ಅವರನ್ನು ಮರು ಆಯ್ಕೆ ಮಾಡಲಾಗಿದೆ. ಈ ಹಿಂದೆ ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿದ್ದ ಶ್ರೀಕಾಂತ್ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದರು. ಅಪ್ಪಾಜಿಗೌಡ, ಶಾರದಾ ಪೂರ್ಯ ನಾಯಕ್, ಮಧು ಬಂಗಾರಪ್ಪ ಸೇರಿದಂತೆ ಜೆಡಿಎಸ್ ನ 3ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಯಶಸ್ವಿಯಾಗಿದ್ದರು. ವಿಧಾನಪರಿಷತ್ ಸದಸ್ಯರಾದ ಬೋರೇಗೌಡರ ಗೆಲುವಿಗೂ ಹೆಗಲಾಗಿದ್ದರು.  ಎರಡು ಬಾರಿ ಶಿವಮೊಗ್ಗ ನಗರದ ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.ಕೇವಲ ರಾಜಕಾರಣಿ ಮಾತ್ರವಾಗಿರದೆ ಸಮಾಜ ಸೇವಕರಾಗಿದ್ದಾರೆ. ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು…

Read Full News

ನನಗೆ ಜೀರೋ ಟ್ರಾಫಿಕ್ ಅವಶ್ಯಕತೆ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ನನಗೆ ಜೀರೋ ಟ್ರಾಫಿಕ್ ಅವಶ್ಯಕತೆ ಇಲ್ಲ. ನಾಲ್ಕು ಜೀಪು, ಮನೆ ತುಂಬ ಪೊಲೀಸರು ಕೊಟ್ಟಿದ್ದರು. ಅಲಂಕಾರಕ್ಕಾಗಿ ಇದೆಲ್ಲ ಬೇಡ ಎಂದು ನಾನು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ  ಅವರು ಹೇಳಿದರು.  ನಗರದ ಸರ್ಕಾರಿ ಭವನದಲ್ಲಿ ಇಂದು ರಾಜ್ಯ ಸೌಹರ್ದ ಸಂಯುಕ್ತ ಸಹಕಾರಿ ನಿಯಮಿತ ಹಾಗೂ ಸಹ್ಯಾದ್ರಿ ಸೌಹರ್ದ ಸಹಕಾರಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಗೃಹ ಸಚಿವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಸ್ವೀಕರಿಸಿ ಗೃಹ ಸಚಿವರು ಮಾತನಾಡಿದರು. ಬಹಳ ಜನ ನನಗೆ…

Read Full News