w
Headlines
Home » ಕುಸಿದು ಬಿದ್ದ ಮನೆ ಗೋಡೆ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ ಸದಸ್ಯರು!!!!

ಕುಸಿದು ಬಿದ್ದ ಮನೆ ಗೋಡೆ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ ಸದಸ್ಯರು!!!!

ಶಿವಮೊಗ್ಗ, ನ.20: ಮಳೆಯಿಂದ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ, ಶಿವಮೊಗ್ಗ ತಾಲೂಕು ಕೂಡಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಚಿಕ್ಕ ಕೂಡ್ಲಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಪಾರ್ವತಮ್ಮ ಎಂಬುವವರ ಮನೆಯೇ ಕುಸಿದು ಬಿದ್ದಿದ್ದಾಗಿದೆ. ಮುಂಜಾನೆ ಸವಿ ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಹಾಗೂ ವಿಜಯ್ ಭೇಟಿ ನೀಡಿ ಪರಿಶೀಲಿಸಿದರು.
‘ಸ್ಥಳಕ್ಕೆ ಇಲ್ಲಿಯವರೆಗೂ ಯಾವುದೆ ಅಧಿಕಾರಿ – ಸಿಬ್ಬಂದಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಗ್ರಾಮದ ಸಮುದಾಯ ಭವನದಲ್ಲಿ ಆಶ್ರಯ ಕಲ್ಲಿಸಲಾಗಿದೆ. ಸೂಕ್ತ ಪರಿಹಾರ ಕಲ್ಪಿಸುವಂತೆ’ ಗ್ರಾಮದ ಮುಖಂಡ ಪ್ರಭಾಕರ್ ಆಗ್ರಹಿಸಿದ್ದಾರೆ.
 ವರದಿ : ಬಿ.ರೇಣುಕೇಶ್, ಶಿವಮೊಗ್ಗ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.