ಹೊಸನಗರ : ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ದನಗಳ್ಳರು ಗ್ರಾಮದ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ನಡೆದಿದೆ.
ಬುಧವಾರ ರಾತ್ರಿ ಮೇಲಿನಬೆಸಿಗೆಯ ಗ್ರಾಮಸ್ಥರು ಅಕ್ರಮ ದನಗಳ್ಳರ ವಾಹನವನ್ನು ಅಡ್ಡಗಟ್ಟಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ದನಕಳ್ಳರು ಮಾರಕಾಸ್ತ್ರಗಳಿಂದ ಬೆದರಿಸಿ ವಾಹನ ಚಲಾಯಿಸಿದ್ದಾರೆ.ಕೂಡಲೇ ಗ್ರಾಮಸ್ಥರು ತಹಸಿಲ್ದಾರ್ ವಿ.ಎಸ್. ರಾಜೀವ್ ಮತ್ತು ಸಿಬ್ಬಂದಿಗಳ ತಂಡಕ್ಕೆ ಮಾಹಿತಿ ಮುಟ್ಟಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತರಾದ ರಾಜೀವ್ ದನಗಳ್ಳರ ವಾಹನ ಹೊಸನಗರದಿಂದ ರಿಪ್ಪನ್ ಪೇಟೆ ಮಾರ್ಗವಾಗಿ ಹಿಂಬಾಲಿಸಿದ್ದಾರೆ. ಶಿವಮೊಗ್ಗ ಮಾರ್ಗವಾಗಿ ಹೋಗುತ್ತಿರುವ ದನಗಳ್ಳರ ವಾಹನವನ್ನು ತಡೆದು ನಿಲ್ಲಿಸುವಂತೆ ರಾಜೀವ್ ರಿಪ್ಪನ್ ಪೇಟೆ ಪೊಲೀಸರಿಗೆ ಸೂಚಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ರಿಪ್ಪನ್ ಪೇಟೆಯ ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆಗೊಳಿಸಿದ್ದರು.ಆದರೆ ಏಕಾಏಕಿ ನುಗ್ಗಿ ಬಂದ ದನಗಳ್ಳರ ವಾಹನ ಬ್ಯಾರಿಕೇಡ್ ನ್ನು ಲೆಕ್ಕಿಸದೇ ವಾಹನ ಚಲಾಯಿಸಿ ಮುನ್ನುಗ್ಗಿದ್ದಾರೆ ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಪ್ಪನ್ ಪೇಟೆಯ ಇಬ್ಬರು ಪೊಲೀಸರು ಅದೃಷ್ಟಾವಶತ್ ಬದುಕುಳಿದಿದ್ದಾರೆ.ಇಲ್ಲದಿದ್ದಲ್ಲಿ ಪಾಪಿ ದನಗಳ್ಳರು ಪೊಲೀಸ್ ಪೇದೆಗಳ ಮೇಲೆಯೇ ಗಾಡಿ ಹಾಯಿಸಲು ರೆಡಿಯಾಗಿ ಬಂದಿದ್ದರು.
ನಂತರ ವಾಹನ ಹಿಮ್ಮೆಟ್ಟಿಸಿಕೊಂಡು ಬಂದ ತಹಸಿಲ್ದಾರ್ ರಾಜೀವ್ ರವರ ಗಾಡಿಯಲ್ಲಿಯೇ ಸೂಡೂರು ಚೆಕ್ ಪೋಸ್ಟ್ ವರೆಗೂ ಬೆನ್ನತ್ತಿದ್ದ ರಿಪ್ಪನ್ ಪೇಟೆ ಪೊಲೀಸರು ನಂತರ ದನ ಸಾಗಿಸುತ್ತಿದ್ದ ವಾಹನದ ನಂಬರನ್ನು ಕಂಟ್ರೊಲ್ ಪೊಲೀಸರಿಗೆ ನೀಡಿದ್ದಾರೆ. ನಂತರ ವಾಹನದ ನಂಬರ್ ಟ್ರಾಕ್ ಮಾಡಿದಾಗ ಶಿವಮೊಗ್ಗದಲ್ಲಿ ಅದು ಪತ್ತೆಯಾಗಿದೆ.
ಪೊಲೀಸರು ಎಂಟು ಗೋವುಗಳ ಸಮೇತ ಕಳ್ಳರನ್ನು ಬಂಧಿಸಿದ್ದಾರೆ. ಸುತ್ತಾ ಗ್ರಾಮದ ಇಬ್ಬರು ದನ ಕಳುವಿಗೆ ನೆರವಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ದನ ಖರೀದಿಸಿದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ದನ ಕಳ್ಳತನಕ್ಕೆ ಸ್ವಗ್ರಾಮದವರೇ ನೆರವಾಗಿರುವುದು ನಿಜಕ್ಕೂ ವಿಪರ್ಯಾಸ. ಜನರ ಕರೆಗೆ ಓಗೊಟ್ಟು ದನಗಳ್ಳರನ್ನು ಹಿಮ್ಮೆಟ್ಟಿಸಲು ಅಣಿಯಾದ ತಹಸಿಲ್ದಾರ್ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.