Headlines

ಆನಂದಪುರದಲ್ಲಿ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!!

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಹಳೆ ಸಂತೆ ಮಾರ್ಕೆಟ್ ರಸ್ತೆಯ ನಿವಾಸಿ ಮಹೇಶ್ (31)  ವರ್ಷ ಇಂದು ಮಧ್ಯಾಹ್ನ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
  ಮಹೇಶ್ ಕೊರೋನಾ ಲಾಕ್ ಡೌನ್  ಸಂದರ್ಭದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಹಾಗೂ ಕೊರೋನಾ ಸಂದರ್ಭದಲ್ಲಿ ಅವರ ತಾಯಿಯವರು ಕೂಡ ಕರೋನಾಗೆ ಬಲಿಯಾಗಿದ್ದರು ಇದರಿಂದಲೂ ತೀವ್ರ ಮಾನಸಿಕ ಜಿಗುಪ್ಸೆಯನ್ನು ಹೊಂದಿದ್ದರ ಪರಿಣಾಮ ಹಾಗೂ ಇತ್ತೀಚೆಗೆ ಕೆನರಾ ಬ್ಯಾಂಕ್ ನಲ್ಲಿ ತರಕಾರಿ ಅಂಗಡಿಗೆ ಸಾಲವನ್ನು ಸಹ ಪಡೆದಿದ್ದರು ಆದರೆ ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ  ಮಾಡಿಕೊಂಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





ವರದಿ : ಪವನ್ ಕುಮಾರ್ ಕಠಾರೆ.

About The Author

Leave a Reply

Your email address will not be published. Required fields are marked *