ಮಲೆನಾಡಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಗೂಂಡಾ ವರ್ತನೆ ತೊರಿದ್ದು. ಮನೆಯ ಬಾಗಿಲು, ಹಂಚು ಮುರಿದು ರೌಡಿಗಳಂತೆ ಪೊಲೀಸರು ಮನೆಯ ಒಳ ಭಾಗವನ್ನು ಪ್ರವೇಶಿಸಿದ್ದಾರೆ ಎಂದು ಕುಟುಂಬದ ಸದಸ್ಯರಿಂದ ಪೋಲಿಸರ ಮೇಲೆ ಆರೋಪ ಕೇಳಿಬಂದಿದೆ.
ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಬಾರ್ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದರು.
ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ 7 ಜನರನ್ನ ಖಾಕಿ ಪಡೆ ಎಳೆದೊಯ್ದಿದ್ದಾರೆ ಎಂದು ಕುಟುಂಬದ ಓರ್ವ ಸದಸ್ಯರು ಆರೋಪಿಸಿದ್ದಾರೆ.ಒಂದೇ ಮನೆಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಕಡೂರು ಪಿಎಸೈ ರಮ್ಯಾ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಮುಸ್ಲಾಪುರಹಟ್ಟಿಯಲ್ಲಿ ಬಾರ್ ತೆರೆದಿರುವುದನ್ನು ವಿರೋಧಿಸಿ ನ. 12 ರಂದು ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ರಮ್ಯಾ ನೇತೃತ್ವದ ತಂಡದವರು ಗ್ರಾಮಕ್ಕೆ ತೆರಳಿ ಮನೆಯೊಳಗಿದ್ದ ಐವರನ್ನು ಬಂಧಿಸಿದ್ದಾರೆ.
ತನಿಖೆಗೆ ಗ್ರಾಮಕ್ಕೆ ತೆರಳಿದ್ದ ಪೊಲೀಸರು ಮನೆಯೊಳಗಿದ್ದ ಪ್ರೇಮಾಬಾಯಿ, ಜಾನಿಬಾಯಿ, ಕಿರಣ್, ಮಲ್ಲೇಶ್, ಶೀಲಾಬಾಯಿ ಎಂಬವರನ್ನು ಬಂಧಿಸಿದ್ದಾರೆ.
ಕಡೂರು ಪಿಎಸ್ ಐ ರಮ್ಯಾ ಸ್ಪಷ್ಟನೆ :
ಪಿಎಸ್ಸೈ ರಮ್ಯಾ ಇದರ ಬಗ್ಗೆ ಸ್ಪಷ್ಟೀಕರಣ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದೇವೆ. ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ’ ಎಂದು ತಿಳಿಸಿದ್ದಾರೆ.
‘ಚಾವಣಿಯ ಹೆಂಚು ತೆಗೆದು, ಬಾಗಿಲು ಮುರಿದು ಮನೆಯೊಳಕ್ಕೆ ನುಗ್ಗಿ ಬಂಧಿಸಿದ್ದೇವೆಂದು ಆರೋಪಿಗಳು ಕಥೆ ಕಟ್ಟಿದ್ದಾರೆ. ಅದರಲ್ಲಿ ಹುರುಳಿಲ್ಲ’ ಎಂದು ಪಿಎಸ್ಐ ರಮ್ಯಾ ತಿಳಿಸಿದ್ದಾರೆ.
ಒಟ್ಟಾರೆ ಪೊಲೀಸರ ಹೇಳಿಕೆ ಸರಿಯೋ ಅಥವಾ ಕುಟುಂಬದ ಸದಸ್ಯರ ಹೇಳಿಕೆ ಸರಿಯೋ ಎಂಬುದು ಉನ್ನತ ತನಿಖೆಯಿಂದ ಸಾರ್ವಜನಿಕರಿಗೆ ತಿಳಿಯಬೇಕಿದೆ.