ಮೂಡಿಗೆರೆ : ಗೋಮಾಂಸ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಭಜರಂಗದಳದ ಕಾರ್ಯಕರ್ತರು ಸೆರೆಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಪ್ರತೀ ಶುಕ್ರವಾರದಂದು ಗೋಮಾಂಸ ಸಾಗಾಟ ನಡೆಸಿ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಅಲಿ ಎಂಬ 35 ವರ್ಷದವನ್ನು, ಮುತ್ತಿಗೆಪುರದ ಹಂಡಗುಳಿ ದಾರಿಯಲ್ಲಿ ಭಜರಂಗದಳದ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತನು ಈ ಹಿಂದೆ ಸಾಗಾಟ ನಡೆಸಿದ ಆರೋಪದ ಮೇರೆಗೆ ಭಜರಂಗದಳದ ಕಾರ್ಯಕರ್ತರು ಈತನನ್ನು ಬಹಳ ಸಮಯ ಕಾದು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆರೋಪಿಯನ್ನು ಹಾಗೂ ಸಾಗಾಟ ನಡೆಸುತ್ತಿದ್ದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿಚಾರಣೆ ಆರಂಭವಾಗಿದ್ದು ತನಿಖೆಯ ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ರಾಜ್ಯದಲ್ಲಿ ಗೋಹತ್ಯಾ ನಿಷೇಧದ ಕಾಯ್ದೆಯು ಜಾರಿಯಲ್ಲಿದ್ದರೂ ಕೂಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಗೋವುಗಳ ಹತ್ಯೆ ಹಾಗೂ ಮಾಂಸದ ಭಕ್ಷಣೆ ನಡೆಯುತ್ತಲೇ ಇದೆ. ಕಾನೂನಿನ ಕಠಿಣ ಶಿಕ್ಷೆಗಳು ಆರೋಪಿಗಳಿಗೆ ಇನ್ನೂ ಅರಿವಾಗದೇ ಇರುವುದು ಈ ರೀತಿಯ ಘಟನೆಗಳಿಗೆ ಕಾರಣವಾಗಿದೆ.