Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಮೇ 13 ರಿಂದ ಬಿದನೂರಿನ ಇತಿಹಾಸ ಪ್ರಸಿದ್ದ ಮಾಷುಂಷಾ ವಲಿಯುಲ್ಲಾ ದರ್ಗಾದ ಉರೂಸ್ ಸಮಾರಂಭ :

ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಮಾಷುಂಷಾ ವಲಿಯುಲ್ಲಾ ದರ್ಗಾದ 2022-23 ರ ಉರೂಸ್‌ ಸಮಾರಂಭದ ದಿನಾಂಕ ನಿಗದಿಯಾಗಿದೆ. ಇಂದು ದರ್ಗಾ ಸಮಿತಿ ಅಧ್ಯಕ್ಷರಾದ ಜೆ ಮಹಮ್ಮದ್ ಸಾಬ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಮೇ 13,14,15,16 ರ ನಾಲ್ಕು ದಿನ ಉರೂಸ್ ಕಾರ್ಯಕ್ರಮ ನಡೆಸಲು, ಉರೂಸ್ ಸಮಾರಂಭಕ್ಕೆ ಮಂತ್ರಿಗಳು ಹಾಗೂ ಶಾಸಕರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಉರೂಸ್ ಸಮಾರಂಭವನ್ನು ಸರ್ಕಾರ ಸುತ್ತೋಲೆಯಂತೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ವಿನಾಯಕ ಉಡುಪ…

Read Full News

ರಿಪ್ಪನ್ ಪೇಟೆ ಪಂಚಾಯತ್ ದಿವಸ್ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಹರತಾಳು ಹಾಲಪ್ಪ : ಗೊಂದಲಗಳ ನಡುವೆ ನಡೆದ ಕಾರ್ಯಕ್ರಮ

ರಿಪ್ಪನ್‌ಪೇಟೆ: ಜನರು ತಮ್ಮ ಕೆಲಸಕಾರ್ಯಗಳಿಗಾಗಿ ಕಛೇರಿಗಳಿಗೆ ಬರುವ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಅಸಡ್ಡೆ ತೋರಬಾರದು. ಜನರೇ ಇಲ್ಲದಿದ್ದರೆ ಜನಪ್ರತಿನಿಧಿಗಳ ಅಸ್ಥಿತ್ವವೇ ಇರುತ್ತಿರಲಿಲ್ಲವೆಂಬ ಸತ್ಯ ಮನದಲ್ಲಿಟ್ಟುಕೊಳ್ಳಬೇಕೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದ ಗ್ರಾ.ಪಂ. ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಪಂಚಾಯತ್ ರಾಜ್ ದಿವಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮ ಪಂಚಾಯತಿಗಳು ಸ್ಥಳೀಯ ಸರಕಾರವಾಗಿದೆ. ಜನರು ಕೆಲಸವಿಲ್ಲದೆ ಕಛೇರಿಗೆ ಬರುವುದಿಲ್ಲ. ಸುಮ್ಮನೆ ಬರಲು ಸರ್ಕಾರಿ ಕಛೇರಿಗಳು ಅವರ ಮಾವನ ಮನೆಯೂ ಅಲ್ಲ, ಅತ್ತೆ ಮನೆಯೂ ಅಲ್ಲ ಕೆಲಸವಿದ್ದಾಗ ಮಾತ್ರ…

Read Full News

ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಪ್ರಯಾಣಿಕ ಬಸ್ ನಿಂದ ಕೆಳಗೆ ಬಿದ್ದು ಸಾವು : ಚಾಲಕನ ಬಂಧನ

ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರೊಬ್ಬರು ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಹಿರೇಕಬ್ಬೂರು ಗ್ರಾಮದಲ್ಲಿ ನಡೆದಿದೆ. ಬಸ್ ನಿಂದ ಇಳಿಯುವಾಗ ಬಸ್ ಮುಂದೆ ಚಲಾಯಿಸಿದ ಪರಿಣಾಮ ಪ್ರಯಾಣಿಕ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಏ.19 ರಂದು ರಾತ್ರಿ ಶಿಕಾರಿಪುರದಿಂದ ಕೃಷ್ಣ ಬಸ್ ನಲ್ಲಿ ಪ್ರಯಾಣಿಸಿದ ಫಕೀರಪ್ಪ (44) ಎಂಬುವರು ಹಿರೇಕಬ್ಬೂರು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಇಳಿಯಲು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಚಾಲಕ ಬಸ್ ಚಲಾಯಿಸಿದ್ದಾನೆ. ಬಸ್ ಚಲಿಸುತ್ತಿದ್ದಂತೆ ಬ್ಯಾಲೆನ್ಸ್ ಕಳೆದುಕೊಂಡ ಫಕೀರಪ್ಪ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ…

Read Full News

5 ಕೆಜಿ ಉಚಿತ ಅಕ್ಕಿಯನ್ನು ಮುಂದುವರೆಸುವ ಮೂಲಕ ಸರ್ಕಾರ ಬಡ ಹಾಗೂ ಸಾಮಾನ್ಯ ವರ್ಗದ ಜನರ ಬೆನ್ನಿಗೆ ನಿಂತಿದೆ : ಮಂಜುಳಾ ಕೆ ರಾವ್

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 5 ಕೆಜಿ ಉಚಿತ ಅಕ್ಕಿಯನ್ನು ಮುಂದುವರಿಸಿರುವ ಸಲುವಾಗಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಮಾತಾ ಮಹಿಳಾ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ರವರು ಉದ್ಘಾಟಿಸಿದರು. ಈ ಸಂರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವ ಮೂಲಕ ಬಡ ಹಾಗೂ ಸಾಮಾನ್ಯ ವರ್ಗದ ಜನರ ಬೆನ್ನಿಗೆ ನಿಂತಿದೆ.ಈಗ ಸರ್ಕಾರ ಸೀಮೆ ಎಣ್ಣೆ ವಿತರಣೆ ನಿಲ್ಲಿಸಿದ್ದು ಮಲೆನಾಡು…

Read Full News

ಮನೆ ಮೇಲೆ ಬಿದ್ದ ಮರ : ಅದೃಷ್ಟವಶಾತ್ ಪ್ರಾಣಾಪಾಯದಿಂದ ತಾಯಿ ಮತ್ತು ಮಗು ಪಾರು

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇ ಮೈತಿ ಎಂಬ ಗ್ರಾಮದಲ್ಲಿ ಮೊನ್ನೆ ಸುರಿದ ವಿಪರೀತ ಗಾಳಿ ಸಿಡಿಲು ಮಳೆಗೆ ಮನೆಯ ಪಕ್ಕದಲ್ಲೇ ಇದ್ದ ಬೃಹದಾಕಾರವಾದ ಮರವೊಂದು ಮಧ್ಯರಾತ್ರಿ ಮನೆಯ ಮೇಲೆ ಬಿದ್ದು ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದ ಚಿಕ್ಕ ಮಗು ತಾಯಿ ಅವಘಡದಿಂದ ಪಾರಾಗಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಕುಟುಂಬ ನಾಗರತ್ನ ಎಂಬುವರ ಮನೆ ಈ ದುರಂತಕ್ಕೆ ಕಾರಣವಾಗಿದೆ.ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಟ್ಟು ಸ್ಥಳ…

Read Full News

ಸಿದ್ದಿವಿನಾಯಕ ದೇವಸ್ಥಾನದ 5ನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ :

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀವರಸಿದ್ದಿವಿನಾಯಕ ಸ್ವಾಮಿ ಮತ್ತು ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಐದನೇ ವರ್ಷದ ಪ್ರತಿಪ್ಠಾವರ್ಧಂತ್ಯುತ್ಸವದ ಎರಡು ದಿನದ ವಿಶೇಷ ಧಾರ್ಮಿಕ ಸಮಾರಂಭ ಪೂಜಾ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಆಗಮಿಕ ಪರಿವಾರದವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಗತಿಸಲಾಯಿತು. ನಂತರ ಶಿವಮೊಗ್ಗದ ವೇದ ಬ್ರಹ್ಮಶ್ರೀ ವಸಂತಭಟ್ ನೇತೃತ್ವದಲ್ಲಿ ಅಗಮಿಕ ಪರಿವಾರದವರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ ವಾಚನನಾಂದಿ ಸಮಾರಾಧನೆ ಮಹಾಸಂಕಲ್ಪ, ಋತ್ವಿಗ್ವರಣ, ಸಾಮೂಹಿಕ ಷಣ್ ನಾರೀಕೇಳ ಗಣಹೋಮ, ನವಗ್ರಹ ಹೋಮ, ತೀರ್ಥಪ್ರಸಾದ ವಿನಿಯೋಗ…

Read Full News

ಹೊಸನಗರ ಪೊಲೀಸ್ ಇನ್ಸ್ ಪೆಕ್ಟರ್ ಮಧುಸೂದನ್ ಸೇರಿದಂತೆ ಜಿಲ್ಲೆಯ ಮೂವರು ಪಿ ಐ ಗಳ ವರ್ಗಾವಣೆ :

ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಮಧುಸೂದನ್ ಸೇರಿದಂತೆ ಜಿಲ್ಲೆಯ ಮೂವರು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಪಿಐ ಮಧುಸೂಧನ್ ಜಿ.ಕೆ ರವರು ಬೆಂಗಳೂರಿನ‌ ಸದಾಶಿವ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಜಿಲ್ಲೆಯ ಮೂರು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಆಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ‌ ಗುರುರಾಜ್ ಕೆ.ಟಿ, ಹೊಸನಗರ ಪೊಲೀಸ್ ಅಧಿಕಾರಿ ಮಧುಸೂಧನ್ ಮತ್ತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಚೈತನ್ಯ ಸಿ.ಜೆ. ವರ್ಗವಣೆಗೊಂಡಿರುವ ಪಿಐಗಳಾಗಿದ್ದಾರೆ ಪಿಐ ಗುರುರಾಜ್ ಕೆ.ಟಿ ಕಡೂರು…

Read Full News

ಹೊಸನಗರ ಸಮೀಪದಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :

ಹೊಸನಗರ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ 31 ಮಂದಿ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ಕರಕೆ ಹಕ್ಲು ಗ್ರಾಮದ ಬಳಿ ನಡೆದಿದೆ. ಇಂದು ಬೆಳಗಿನ ಜಾವ 5 ಗಂಟೆಗೆ ಬೆಂಗಳೂರಿನಿಂದ ಭಟ್ಕಳಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಬಸ್ ಬೆಂಗಳೂರಿನಿಂದ ತೀರ್ಥಹಳ್ಳಿ ಮೂಲಕ ಭಟ್ಕಳಕ್ಕೆ ತೆರಳುತ್ತಿತ್ತು. ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿ ಬಸ್ ಚಾಲಕ ನಿಯಂತ್ರಣ ತಪ್ಪಿ ಬಸ್​ ಪಲ್ಟಿ ಹೊಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹೊಸನಗರ ಹಾಗೂ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಯಿತು. ಪ್ರಯಾಣಿಕರಿಗೆ…

Read Full News

ರಿಪ್ಪನ್ ಪೇಟೆ : ಶುಂಠಿ ವ್ಯಾಪಾರದಲ್ಲಿ ನಷ್ಟ , ವಿಷ ಸೇವಿಸಿ ಕೃಷಿಕ ಆತ್ಮಹತ್ಯೆ :

ರಿಪ್ಪನ್ ಪೇಟೆ:ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವಾಪುರ ಗ್ರಾಮದ ವಸಂತ (34) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಕಳೆದ ಐದು ವರ್ಷದಿಂದ   ಜಾಗ ಬಾಡಿಗೆ ಪಡೆದು ಶುಂಠಿ ಬೆಳೆ ಹಾಕಿದ್ದು, ಸತತ ಮೂರು ವರ್ಷಗಳಿಂದ ಶುಂಠಿ ಧಾರಣೆ ಕುಸಿತ ಕಂಡು ನಷ್ಟ ಅನುಭವಿಸಿ ದ ಈತ ಸಂಘ ಸಂಸ್ಥೆ ಹಾಗೂ ಇತರೆ ಕೈಗಡ ಸೇರಿದಂತೆ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು ಸಾಲಗಾರರ ಕಾಟಕ್ಕೆ ಹೆದರಿ ಈತ ಚಿಕ್ಕ ಜೇನಿ ಗ್ರಾಮ…

Read Full News

ಪಂಚರತ್ನ ಕಾರ್ಯಕ್ರಮ ನೆರವೇರಿಸದೆ ಇದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ : ಹೆಚ್ ಡಿ ಕುಮಾರಸ್ವಾಮಿ

ನಮ್ಮಪಕ್ಷದ ಪಂಚರತ್ನ ಕಾರ್ಯಕ್ರಮವನ್ನ ಅಧಿಕಾರಕ್ಕೆ ಬಂದ ಮೇಲೆ ನೆರವೇರಿಸದಿದ್ದರೆ ನನ್ನ ಪಕ್ಷವನ್ನ ವಿಸರ್ಜಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಘೋಷಿಸಿದ್ದಾರೆ. ಅವರು ತಾಲೂಕಿನ ಕೂಡ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ಶಿಕ್ಷಣ,ಆರೋಗ್ಯ ವಸತಿ ಉದ್ಯೋಗ ಮತ್ತು ಸ್ವಾಲಂಬಿ ಜೀವನಕ್ಕೆ ರೂಪು ರೇಷ ಹಮ್ಮಿಕೊಂಡಿದ್ದೇನೆ. ಈ ಕಾರ್ಯಕ್ರಮವನ್ನ ಜನತಾ ಜಲಧಾರೆಯ ನಂತರ ಪ್ರಕಟಿಸುವೆ ಎಂದರು. ಯಾವುದೇ ಖಾಯಿಲೆ ಕಾಣಿಸಿಕೊಂಡರೂ ಗ್ರಾಪಂ ವ್ಯಾಪ್ತಿಯಲ್ಲಿ 24 ಗಂಟೆ ವೈದ್ಯರ ಸೇವೆ, ಮತ್ತು ಆಸ್ಪತ್ರೆ ವ್ಯವಸ್ಥೆ ಮಾಡಲಾಗುತ್ತದೆ. ರೈತ…

Read Full News

ಮಕ್ಕಳ ಅಶ್ಲೀಲ ವೀಡಿಯೋ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದ್ದ ಯುವಕನಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್:

ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ನೀಡಿದೆ. ಶಿವಮೊಗ್ಗ ತಾಲೂಕಿನ ದಮ್ಮಳ್ಳಿ ಗ್ರಾಮದ ರಘು (25) ಶಿಕ್ಷೆಗೆ ಒಳಗಾದವನು. ಈತ 2020ರ ಮೇ 6ರಂದು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದ. ಈ ಸಂಬಂಧ ಸಿಐಡಿ ಘಟಕದ ಸೈಬರ್ ಟಿಪ್ ಲೈನ್ ಮಾಹಿತಿ ನೀಡಿತ್ತು.  ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಸಿಇಎನ್ ಠಾಣೆ ಇನ್ಸ್ ಪೆಕ್ಟರ್…

Read Full News

ದೇಶದಲ್ಲಿ ಹಿಂದೂ ಮುಸ್ಲಿಂ ಇಬ್ಬರೂ ಸಹೋದರರಂತೆ ಬಾಳಬೇಕು ಎನ್ನುವುದು ಎಲ್ಲರ ಆಶಯ : ಶಾಸಕ ಹರತಾಳು ಹಾಲಪ್ಪ

ಸಾಗರ: ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ನೀವು ಪಾಕ್‌ಗೆ ಹೋಗಿ ಎನ್ನುವುದು ಅನಿವಾರ್ಯವಾಗುತ್ತದೆ. ಹಿಂದೂ ಮುಸ್ಲಿಂ ಇಬ್ಬರ ಬಾಂಧವ್ಯ ಬೆಸೆಯಬೇಕಾದರೆ ಭಾರತ ನಮ್ಮ ಮಾತೃಭೂಮಿ ಎಂದು ಒಪ್ಪಿಕೊಳ್ಳುವುದು ಅಗತ್ಯ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಹೇಳಿದ್ದಾರೆ. ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಫಲಾನುಭವಿಗಳಿಗೆ ವಸತಿ ಕಾಮಗಾರಿ ಕಾರ್ಯಾದೇಶ ಮತ್ತು ಶೇ. 5 ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ಭದ್ರತಾ ಠೇವಣಿ ಬಾಂಡ್ ವಿತರಣೆ ಮಾಡಿ ಅವರು ಮಾತನಾಡಿದರು. ಮೋದಿಯವರು ದೇಶದ ಸಮಗ್ರತೆಗಾಗಿ…

Read Full News

ಮಳೆ ಬಂದಾಗ ಕೆಸರು ಗದ್ದೆಯಂತಾಗುವ ಬೆನವಳ್ಳಿ – ಮಸರೂರು ರಸ್ತೆ : ಜನಪ್ರತಿನಿಧಿಗಳೇ ಇನ್ನಾದರೂ ಇತ್ತ ಗಮನಹರಿಸಿ!!!!!

ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ-ಮಸರೂರು-ಆಚಾಪುರ ಸಂಪರ್ಕದ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯ್ತಿ ರಸ್ತೆಮಳೆ ಬಂದಾಗ ಕೆಸರು ಗದ್ದೆಯಂತಾಗಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ.  ಬೆನವಳ್ಳಿಯಿಂದ ಮಸರೂರು, ಮಾಣಿಕರೆ, ಹಾಲಬಾವಿ, ಕೆಂಚನಾಲ, ಆಲುವಳ್ಳಿ, ಗಾಳಿಬೈಲು, ವಿರಕ್ತಮಠ, ಕಮದೂರು, ಮಾದಾಪುರ, ಕುರುಬರಜಡ್ಡು, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಮುರುಘಾಮಠ ಆಚಾಪುರ ಇಸ್ಲಾಂಪುರ ಅಂದಾಸುರ ಹೀಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಸಂಪರ್ಕದ ರಸ್ತೆಯಾಗಿದ್ದು ಈ ರಸ್ತೆಯನ್ನು ಕಳೆದ ಹಲವಾರು ವರ್ಷಗಳಿಂದ ಈ…

Read Full News

ಪೋಸ್ಟ್ ಮ್ಯಾನ್ ನ್ಯೂಸ್ ವರದಿಗೆ ಎಚ್ಚೆತ್ತ ಇಲಾಖೆ : ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ “ನಲ್ಲಿ” ಸ್ಥಳಾಂತರ

ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಮಪಂಚಾಯಿತಿ ಜೋಡುಕಟ್ಟೆ ಬಯಲು ಎಸ್. ಸಿ ( SC) ಕಾಲೋನಿಯಲ್ಲಿ ಗೊಚ್ಚೆ ಗುಂಡಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ “ನಲ್ಲಿ” ಇದ್ದು  ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಿಸಲಿ ಎಂಬ ವರದಿಯನ್ನು ಮಂಗಳವಾರ ಸಂಜೆಯ ವೇಳೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಮಾಡಿತ್ತು. ವರದಿಯಾದ 24 ಗಂಟೆಯೊಳಗೆ ಕೊಚ್ಚೆ ಗುಂಡಿಯಲ್ಲಿ ಇದ್ದ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ “ನಲ್ಲಿ”ಯನ್ನು ಸೂಕ್ತ  ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.  ಜನರ ಆರೋಗ್ಯದ…

Read Full News

ಸ್ನೇಹಿತರಿಬ್ಬರು KGF 2 ಚಲನಚಿತ್ರ ನೋಡಿಕೊಂಡು ಹಿಂದಿರುಗುತಿದ್ದಾಗ KTM ಬೈಕ್ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು

KGF 2 ಚಲನಚಿತ್ರವನ್ನು ಶಿವಮೊಗ್ಗದಲ್ಲಿ ನೋಡಿಕೊಂಡು ಹಿಂದಿರುಗುತ್ತಿದ್ದ ಬೈಕ್ ಭದ್ರಾವತಿ ಬಳಿ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ನಿನ್ನೆ ಸಂಜೆ kgf2 ಚಿತ್ರ ನೋಡಲು ಎನ್ ಆರ್ ಪುರದಿಂದ ಶಿವಮೊಗ್ಗಕ್ಕೆ ಬಂದಿದ್ದ ಇಬ್ಬರು ಸ್ನೇಹಿತರು ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಎನ್ ಆರ್ ಪುರ ನಿವಾಸಿ ಶಿವಕುಮಾರ್(28) ಮೃತ ದುರ್ದೈವಿಯಾಗಿದ್ದು ಆತನ ಸ್ನೇಹಿತ ಎನ್ ಆರ್ ಪುರ ವಾಸಿ ಮನೋಜ್ ಎಂಬುವವನಿಗೂ ಸಹ ಗಂಭೀರ ಗಾಯಗಳಾಗಿದ್ದು ಎನ್…

Read Full News

ಪಿಎಫ಼್ ಐ & ಎಸ್ ಡಿಪಿಐ ನಿಷೇದಕ್ಕೆ ಎಲ್ಲಾ ತಯಾರಿ ನಡೆದಿದೆ : ಶಿಕ್ಷಣ ಸಚಿವ ಡಾ| ಅಶ್ವತ್ ನಾರಾಯಣ್

ಶಿವಮೊಗ್ಗ: ಪಿಎಫ್‌ಐ, ಎಸ್‌ ಡಿಪಿಐ ಸಂಘಟನೆ ನಿಷೇಧ ಮಾಡುವ ದಿಕ್ಕಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆದಿದೆ. ಅದಕ್ಕೆ ಬೇಕಾದ ಪೂರ್ವಭಾವಿ ತಯಾರಿ, ದಾಖಲೆಗಳ ಸಂಗ್ರಹ ಆಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ್ ನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ, ಎಸ್‌ಡಿಪಿಐ ಸಂಸ್ಥೆಗಳು ಸಮಾಜದಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಮಾಡ್ತಿವೆ. ಈ ಬಗ್ಗೆ ಮೇಲ್ನೋಟಕ್ಕೆ ಹೇಳಿಕೆ ಕೊಡೋದಲ್ಲ. ಕಾಂಗ್ರೆಸ್‌ ಸರಕಾರವಿದ್ದಾಗ ಅವರ ಬದ್ಧತೆ ಏನಿತ್ತು. ಅಧಿಕಾರದಲ್ಲಿ ಇದ್ದಾಗ ಅವರ ಮೇಲಿದ್ದ ಕೇಸ್‌ ಹಿಂಪಡೆದು ಈಗ…

Read Full News

ಇಂದು ರಾತ್ರಿ 9.15 ಕ್ಕೆ ಕೆಂಪುಕೋಟೆಯ ಮೇಲೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ :

ಪ್ರಧಾನಿ ಮೋದಿ ಅವರು ಗುರುವಾರ ರಾತ್ರಿ 9:15 ಕ್ಕೆ ಕೆಂಪು ಕೋಟೆಯ ಮೇಲೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಸ್ವಾತಂತ್ರ್ಯ ದಿನಾಚರಣೆ ಹೊರತುಪಡಿಸಿ, ಸ್ಮಾರಕದ ಮೇಲೆ ಮೋದಿ ಭಾಷಣ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ.  ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗುರು ತೇಜ್ ಬಹದ್ದೂರ್ ಜಿ ಅವರ ಜೀವನವನ್ನು ಬಿಂಬಿಸುವ ಭವ್ಯವಾದ ಬೆಳಕು ಮತ್ತು ಧ್ವನಿ ಪ್ರದರ್ಶನವೂ…

Read Full News

ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ ಕಿಮ್ಮನೆ ಜಿಜ್ಞಾಸೆಯಿಂದ ಹತಾಶೆಯ ಹೇಳಿಕೆ ನೀಡುತಿದ್ದಾರೆ‌ : ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ : ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ   ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ರವರಿಗೆ ಸಹಿಸಲು ಸಾಧ್ಯವಿಲ್ಲದೇ ಇತಿ-ಮಿತಿ ಮೀರಿ ಆರೋಪಿಸುತ್ತಿದ್ದಾರೆ.ಆರ್.ಎಂ.ಮಂಜುನಾಥ ಗೌಡರಿಂದಾಗಿ ಮುಂದಿನ ಭಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸೀಗುತ್ತದೋ? ಎಂಬ ಜಿಜ್ಞಾಸೆಯಿಂದ ಈ ರೀತಿಯಲ್ಲಿ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅರೋಪಿಸಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ಐದು ವರ್ಷದ ಅವಧಿಯಲ್ಲಿ 1000 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತರಲಾಗಿದೆ.ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರವಾಗಿದೆ…

Read Full News

ಶಾಂತ ರೀತಿಯಲ್ಲಿದ್ದ ಕರ್ನಾಟಕದಲ್ಲಿ ಗಲಭೆ,ದೊಂಬಿ ಎಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ,ಇದು ಖಂಡನಾರ್ಹ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

 ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ.ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋಧಿಸುವ ಹೇಳಿಕೆ‌ ಕೊಡುತ್ತಾರೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯುವುದನ್ನು ನೋಡುತ್ತಿದ್ದಾರೆ. ಆಸ್ಪತ್ರೆ,…

Read Full News

ಕೊಚ್ಚೆ ಗುಂಡಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ನಲ್ಲಿ !!!!

ತೀರ್ಥಹಳ್ಳಿ : ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಳ್ಳಿಗಳ ಜನರ ಪ್ರತಿಯೊಬ್ಬರ ಆರೋಗ್ಯ ದೃಷ್ಠಿಯಿಂದ  ಶುದ್ಧ ನೀರು ಕುಡಿಯಬೇಕ್ಕೆನ್ನುವ ವಿಶೇಷ ಕಾಳಜಿಯಿಂದ ಕೋಟ್ಯಂತರ ರೂ ವೆಚ್ಚದಲ್ಲಿ ಪ್ರತಿ ಮನೆ ಮನೆಗೆ,, ಗಂಗೆ ( ಜೆ ಜೆ ಎಂ ) ಶುದ್ಧ ಕುಡಿಯುವ ನಲ್ಲಿ ನೀರಿನ ಯೋಜನೆ ನೀಡಿರುತ್ತಾರೆ.  ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರ ವಿಶೇಷ ಪರಿಶ್ರಮದಿಂದ ಕೋಟ್ಯಂತರ ರೂಪಾಯಿಗಳ ಅನುದಾನ ಹರಿದು ಬಂದಿದ್ದು ಕಾಮಗಾರಿಗಳು ಭರದಿಂದ ನೆಡೆಯುತ್ತಿದೆ. ಆದರೆ ಕೆಲವು ಗ್ರಾಮೀಣ…

Read Full News

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ ಎಸ್ ಯಡಿಯೂರಪ್ಪ ರವರ ಹೆಸರು ನಾಮಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ

ಶಿವಮೊಗ್ಗ: ನಗರದಲ್ಲಿನ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಸಂಬಂಧ ವಿವಿಧ ಹೆಸರು ಇಡುವ ಬಗ್ಗೆ ಒತ್ತಾಯ ಕೇಳಿ ಬಂದಿತ್ತು. ಆದ್ರೇ ಕೊನೆಗೂ ಶಿವಮೊಗ್ಗ ಏರ್ ಪೋರ್ಟ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಅವರ ಹೆಸರನ್ನೇ ಇಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಇದ್ದಂತ ಏರ್ಪೋರ್ಟ್ ಹೆಸರಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇಂದು ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದಂತ ಅವರು, ವಿಮಾನ ನಿಲ್ದಾಣಕ್ಕೆ…

Read Full News

ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ರವರಿಗೆ ಹುಟ್ಟೂರಿನಲ್ಲಿ ಆತ್ಮೀಯ ಸನ್ಮಾನ :

ರಿಪ್ಪನ್‌ಪೇಟೆ: ಜಿ.ಪಂ. ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರರವರನ್ನು ಕಾಂಗ್ರೇಸ್ ಪಕ್ಷ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿಯನ್ನಾಗಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಕೋಡೂರಿನ ಗ್ರಾಮಸ್ಥರು ಮತ್ತು ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು. ಕೋಡೂರಿನ ಶ್ರೀಶಂಕ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ, ಕಾರ್ಯಕ್ರಮದಲ್ಲಿ ಕಲಗೋಡು ರತ್ನಾಕರರವರು ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಬೆಳವಣಿಗೆಗೆ ಗ್ರಾಮದ ಎಲ್ಲಾ ಹಿರಿಯರ ಆಶೀರ್ವಾದ, ಕಿರಿಯರ ಸಹಕಾರವಿದೆ. ಕಾಂಗ್ರೇಸ್ ಪಕ್ಷದಲ್ಲಿ ಭೂತ್ ಮಟ್ಟದ ಕಾರ್ಯದರ್ಶಿಯಿಂದ ರಾಜ್ಯ ಮಟ್ಟದ ಪ್ರಧಾನಕಾರ್ಯದರ್ಶಿಯವರೆಗೆ ಬೆಳೆಸಿದವರು ನಮ್ಮೂರಿನ ಜನ. ಪಕ್ಷನಿಷ್ಠೆ, ಸಂಘಟನೆ ಮತ್ತು…

Read Full News

ರಿಪ್ಪನ್ ಪೇಟೆ : ಟ್ಯಾಂಕರ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವು..!!!

ರಿಪ್ಪನ್ ಪೇಟೆ : ಪಟ್ಟಣದ ವಿಶ್ವ ಮಾನವ ಸಭಾಭವನದ ಸಮೀಪ ಲಾರಿ  ಚಾಲಕನೊಬ್ಬ ವಿಶ್ರಾಂತಿ ಪಡೆಯುವ ಸಂಧರ್ಭದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಯಲ್ಲಾಪುರ ನಿವಾಸಿ ಮಧು (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಯಲ್ಲಾಪುರದಿಂದ ತೀರ್ಥಹಳ್ಳಿಗೆ  ಡಾಂಬರ್ ತುಂಬಿದ ಟ್ಯಾಂಕರ್ (KA-20-D-7055) ಚಲಾಯಿಸುತ್ತಿದ್ದ ಚಾಲಕನು  ಮಾರ್ಗ ಮದ್ಯೆ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ವಿಶ್ರಾಂತಿ ಪಡೆಯಲು ರಿಪ್ಪನ್ ಪೇಟೆಯ ವಿಶ್ವ ಮಾನವ ಸಭಾ ಭವನದ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆದಿದ್ದಾನೆ. ನೆನ್ನೆ ರಾತ್ರಿಯಿಂದ  ಚಾಲಕನು ಪೋನ್ ಸಂಪರ್ಕಕ್ಕೆ ಸಿಗದಿದ್ದಕ್ಕೆ…

Read Full News

ಒಂಬತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 50 ವರ್ಷದ ವ್ಯಕ್ತಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್:

ಒಂಭತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಶಿವಮೊಗ್ಗದ ಮಂಜಪ್ಪ (49) ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. 2020ರ ಡಿಸೆಂಬರ್ 5ರಂದು 9 ವರ್ಷದ ಬಾಲಕಿ ಬೆಂಕಿ ಪೊಟ್ಟಣ ಕೇಳಿಕೊಂಡು ಮಂಜಪ್ಪನ ಮನೆಗೆ ಬಂದಿದ್ದಳು. ಆಕೆಯ ಮೇಲೆ ಮಂಜಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ ಹೇಳಿಕೆ ಆಧಾರದಲ್ಲಿ ಮಹಿಳಾ…

Read Full News

ಪಕ್ಷ ಅವಕಾಶ ನೀಡಿದರೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವೆ : ಶಾಸಕ ಹರತಾಳು ಹಾಲಪ್ಪ

 ನಾನು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇರಿಸಿಲ್ಲ. ಆದರೆ ಸಚಿವ ಸ್ಥಾನವನ್ನು ಪಕ್ಷ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು. ಇಲ್ಲಿನ ತಹಶೀಲ್ದಾರ್ ಕಚೇರಿ ಸಮುಚ್ಛಯವನ್ನು ಮಂಗಳವಾರ ಪರಿಶೀಲನೆ ನಡೆಸಿ ಪತ್ರಕರ್ತರ ಜೊತೆ ನಡೆಸಿ ಮಾತನಾಡಿದ ಅವರು, ಅಂತಿಮವಾಗಿ ನಾನು ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದರು. ಜಿಲ್ಲೆಯಲ್ಲಿ ಆರಗ ಜ್ಞಾನೇಂದ್ರ ಮತ್ತು ಕೆ.ಎಸ್.ಈಶ್ವರಪ್ಪರಂತಹ ಇಬ್ಬರು ದಕ್ಷ ಸಚಿವರು ಇದ್ದರು. ಆದರೆ ರಾಜಕೀಯ ಮೇಲಾಟ ಮತ್ತು ವಿರೋಧಿಗಳ ಷಡ್ಯಂತ್ರದಿಂದ ಈಶ್ವರಪ್ಪ ಅವರು…

Read Full News

ಒಬ್ಬಂಟಿ ಮಹಿಳೆಯರಿರುವ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು:

ರಾತ್ರಿ ವೇಳೆ ಒಂಟಿ ಮಹಿಳೆಯರಿದ್ದ ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಯುವಕನನ್ನ್ನು ಗ್ರಾಮಸ್ಥರೇ ಹಿಡಿದು ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಕೋಟೆ ತಾಂಡದಲ್ಲಿ‌ ನಡೆದಿದೆ.ಕೋಟೆ ತಾಂಡದ ಸುಂದರ್ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ತಾಂಡದ ಮಹಿಳೆಯೋರ್ವರ ಪತಿ ನಾಲ್ಕು ದಿನದಿಂದ ಮನೆಯಲ್ಲಿಲ್ಲದಿರುವುದನ್ನು ಗಮನಿಸಿದ್ದ ಸುಂದರ್ ನಾಯ್ಕ, ನಿನ್ನೆ ರಾತ್ರಿ ಆ ಮನೆಗೆ ನುಗ್ಗಿದ್ದಾನೆ. ಮಹಿಳೆಯ ಮನೆಗೆ ನುಗ್ಗಿದ ಸುಂದರ್ ನಾಯ್ಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ….

Read Full News

ಸೋಲಾರ್ ರಿಪೇರಿಗೆ ಬಂದವರಂತೆ ನಟಿಸಿ, ನೀರು ಕೇಳುವ ನೆಪದಲ್ಲಿ ಮಾದಕ ನಶೆಯ ವಸ್ತುವನ್ನು ಎರಚಿ ದರೋಡೆಗೆ ವಿಫಲ ಯತ್ನ..!

ತೀರ್ಥಹಳ್ಳಿ:-ತಾಲ್ಲೂಕಿನ ನೆರಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿಯಲ್ಲಿ ಸೋಮವಾರ  ಸಂಜೆಯ ವೇಳೆಗೆ ಬುಲೆರೋ ಕಾರಿನಲ್ಲಿ  ಬಂದ 6 ಜನರ ದರೋಡೆಕೋರರ ತಂಡ ಮನೆಯೊಂದರ ಬಳಿ ಬಂದು ಸೋಲಾರ್  ರಿಪೇರಿ ಮಾಡುವ ಬಗ್ಗೆ ವಿಚಾರಿಸಿ  ನಂತರ ನೀರನ್ನು ಕೇಳಿದ್ದಾರೆ.  ಮನೆಯಲ್ಲಿದ್ದ ಗೃಹಿಣಿಯೋರ್ವರು  ನೀರು ತಂದಾಗ ಆಕೆಯ ಮೇಲೆ ಮಾದಕ ದ್ರವ್ಯದ ನಶೆಯ ವಸ್ತುವನ್ನು ಎರಚಿ ದರೋಡೆಗೆ ಮುಂದಾದಾಗ ಮನೆಯವರು ದರೋಡೆಗೆ ಯತ್ನಿಸಿದವರ ಕೈ ಕಚ್ಚಿ, ಕೊಡಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ನಂತರ ಕಿರುಚಾಡಿ, ಕೂಗಾಡಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ….

Read Full News

ಮಸೀದಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತದೆಯೋ??? ಇನ್ನೂ ಎಷ್ಟು ಕಾಲ ಅಂತ ನಾವು ತಗ್ಗಿಬಗ್ಗಿ ಇರಬೇಕು : ಪೇಜಾವರ ಶ್ರೀ

ಯಾವುದೇ ಕಾಲದಲ್ಲಿ ಬದಲಾವಣೆ ಒಂದೇ ಬದಿಯಿಂದ ಅಗಬಾರದು. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆದೂ ಸ್ವಾಗತ ಮಾಡಿದ್ದರು. ಆದರೆ ಯಾವುದೇ ಮಸೀದಿಗೆ ಯಾವ ಮಠಾಧೀಶರನ್ನು ಕರೆದು ಒಂದು ಸತ್ಯನಾರಾಯಣ ಪೂಜೆಯೋ, ಇನ್ನೋಂದು ಎಲ್ಲೂ ನಡೆದೇ ಇಲ್ಲ. ಹೀಗೆ ಯಾಕೆ ಒಂದೇ ಬದಿಯಲ್ಲಿ ಇನ್ನೂ ತಗ್ಗಬೇಕು, ಇನ್ನೂ ಬಗ್ಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು. ಮಾಜಿ ಸಚಿವ ಈಶ್ವರಪ್ಪರ ಮನೆಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲರೂ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ಬಯಸುವವರು….

Read Full News

ಮಧು ಬಂಗಾರಪ್ಪ ರಿಪ್ಪನ್ ಪೇಟೆಗೆ ದಿಢೀರ್ ಭೇಟಿ : ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷೋಲ್ಲಾಸ

ರಿಪ್ಪನ್ ಪೇಟೆ : ರಾಜ್ಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು ಹಾಗೂ ಸೊರಬ ಕ್ಷೇತ್ರದ ಮಾಜಿ ಶಾಸಕರಾದ ಮಧು ಬಂಗಾರಪ್ಪನವರು ಕಾರ್ಯನಿಮಿತ್ತ ಶೃಂಗೇರಿಗೆ ತೆರಳುವಾಗ ದಿಡೀರ್ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರನ್ನು ಭೇಟಿಯಾದರು. ಈ ಭೇಟಿಯಿಂದ ಸಂತಸ ಗೊಂಡ ರಿಪ್ಪನ್ ಪೇಟೆ ಕಾಂಗ್ರೆಸ್ ಕಾರ್ಯಕರ್ತರು ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು…

Read Full News

ಗೂಂಡಾ ಪ್ರವೃತ್ತಿ ಯಾವ ಮಟ್ಟಕ್ಕಿದೆ ಎನ್ನುವುದಕ್ಕೆ ಇದೇ ತಾಜಾ ಉದಾಹರಣೆ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ಯಾರ್ಯಾರು ಗಲಭೆಗೆ ಕಾರಣರಾಗಿದ್ದಾರೋ ಬಹುತೇಕ ಎಲ್ಲರ ಬಂಧನವಾಗಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ ಗಲಭೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಗಲಭೆ ಉಂಟುಮಾಡ್ತಿದ್ದಾರೆ. ಕೋಮು ಸೌಹಾರ್ದತೆ ಹಾಳು ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಅಂತಹವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡ್ತೇನೆ. ರಾಜ್ಯದ ಮುಖ್ಯಮಂತ್ರಿಗಳು ಸೂಕ್ತವಾದ ಹಾಗೂ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯಬಾರದು. ಆ ರೀತಿಯ ಬಿಗಿ…

Read Full News