ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ ಕಿಮ್ಮನೆ ಜಿಜ್ಞಾಸೆಯಿಂದ ಹತಾಶೆಯ ಹೇಳಿಕೆ ನೀಡುತಿದ್ದಾರೆ‌ : ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ : ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ   ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ರವರಿಗೆ ಸಹಿಸಲು ಸಾಧ್ಯವಿಲ್ಲದೇ ಇತಿ-ಮಿತಿ ಮೀರಿ ಆರೋಪಿಸುತ್ತಿದ್ದಾರೆ.ಆರ್.ಎಂ.ಮಂಜುನಾಥ ಗೌಡರಿಂದಾಗಿ ಮುಂದಿನ ಭಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸೀಗುತ್ತದೋ? ಎಂಬ ಜಿಜ್ಞಾಸೆಯಿಂದ ಈ ರೀತಿಯಲ್ಲಿ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅರೋಪಿಸಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ಐದು ವರ್ಷದ ಅವಧಿಯಲ್ಲಿ 1000 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತರಲಾಗಿದೆ.ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರವಾಗಿದೆ ಎಂಬುದರ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ನಾನೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಮ್ಮ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಸಿಐಡಿ ತನಿಖೆಗೆ ವಹಿಸಿರುವುದಾಗಿ ಹೇಳಿದರು.


ನಾನು ಅನಿರೀಕ್ಷಿತವಾಗಿ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ನನಗೆ ಟೀ ಕುಡಿಯಲು ಮನೆಗೆ ಬರಬೇಕು ಎಂದು ಒತ್ತಾಯಿಸಿದ ಕಾರಣ ಹೋಗಬೇಕಾಯಿತು ನಮಗೆ ಪಕ್ಷದ ಕಾರ್ಯಕರ್ತರಾರು ಬೇರೆಯವರು ಯಾರು ಎಂದು ಗೊತ್ತಾಗುವುದಿಲ್ಲ ಕಾರಣ ಎಲ್ಲರೂ ಬಂದು ಸೆಲ್ಪಿ ತಗೆಸಿಕೊಳ್ಳುತ್ತಾರೆ. ಆದರಲ್ಲಿ ಭ್ರಷ್ಟಾಚಾರಿಗಳು ಯಾರು ?? ಒಳ್ಳೆಯವರು ಯಾರು ??? ಎಂದು ಗೊತ್ತಾಗುತ್ತದೆಯೇ ಹೇಳಿ ಎಂದರು.

ಕಾಂಗ್ರೆಸ್‌ನವರು ಗೃಹ ಸಚಿವರನ್ನು ಡಮ್ಮಿಯಾಗಿ ಮಾಡಿಕೊಂಡಿದ್ದರೂ ಆದರೆ ನಮ್ಮ ಸರ್ಕಾರದಲ್ಲಿ ಅಂತಹ ಯಾವುದೇ ನಿರ್ಬಂಧ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ ಹೇಳಿ ಎಂದರು.


ಈ ಸಂಧರ್ಭದಲ್ಲಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಎನ್.ಸತೀಶ್, ಸುಧೀಂದ್ರ ಪೂಜಾರಿ,ನಿರೂಪ್, ನಿಂಗಪ್ಪ ಅರಸಾಳು, ಟಿ.ಆರ್.ಕೃಷ್ಣಪ್ಪ, ವಾಸುಶೆಟ್ಟಿ, ಪುಟ್ಟರಾಜ್ ಹಾಲುಗುಡ್ಡೆ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *