Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ಹೊಸನಗರ : BCM ಹಾಸ್ಟೆಲ್ ಸೀಟು ಸೌಲಭ್ಯಕ್ಕೆ ಆಗ್ರಹಿಸಿ ಶಾಸಕ ಬೇಳೂರು ಕಚೇರಿಗೆ ಪೋಷಕರ ಲಗ್ಗೆ

ಬಿಸಿಎಂ ಹಾಸ್ಟೆಲ್ ಸೀಟು ಸೌಲಭ್ಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಶಾಸಕರ ಕಚೇರಿಗೆ ಪೋಷಕರ ಲಗ್ಗೆ ಹೊಸನಗರ – ಕಳೆದ ಜೂನ್ ತಿಂಗಳಲ್ಲೇ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿದ್ದು  ಜುಲೈ 10 ಆದರೂ ಬಿಸಿಎಂ ಹಾಸ್ಟೆಲ್ ನಲ್ಲಿ ಅರ್ಜಿ ಸಲ್ಲಿಸಿದರು ಯಾವುದೇ ಭರವಸೆ ಈವರೆಗೆ ದೊರಕಿಲ್ಲ. ತತಕ್ಷಣ ನಮ್ಮ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ದೊರಕಿಸಕೊಡಬೇಕೆಂದು ಪೋಷಕರು ಒತ್ತಾಯಿಸಿ ಶಾಸಕರ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಹೊಸನಗರದಲ್ಲಿರುವ ಶಾಸಕ ಬೇಳೂರು ಗೋಪಾಲಕೃಷ್ಣರವರ ಕಚೇರಿಗೆ ಲಗ್ಗೆ ಇಟ್ಟ ಪೋಷಕರು ಮಕ್ಕಳ ಸಮಸ್ಯೆ…

Read Full News

ಕುತೂಹಲ ಘಟ್ಟದತ್ತ ಹುಂಚ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ – ಆರ್ ಎಂಎಂ ಗೆ ಪ್ರತಿಷ್ಟೆಯ ಚುನಾವಣೆ..!!!RMM

ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಚುನಾವಣೆ. ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅರ್ ಎಮ್ ಎಮ್ ಗೆ ಪ್ರತಿಷ್ಟೆ, ಪ್ರಸಕ್ತ ಸದಸ್ಯರ ಹೊಂದಾಣಿಕೆ ಅಸ್ತ್ರ, ಹಲವಾರು ಹೊಸಬರ ನಾಮಪತ್ರ ಸಲ್ಲಿಕೆ ಪ್ರತ್ಯಾಸ್ತ್ರ ಕುತೂಹಲ ಘಟ್ಟದತ್ತ ಹುಂಚಾ ಸೊಸೈಟಿ ಚುನಾವಣೆ ಹುಂಚ : ಸದಾ ಒಂದಿಲ್ಲೊಂದು ವಿವಾದಗಳಿಂದ ಹೊಸನಗರ ತಾಲ್ಲೂಕಿನ ಬಹು ವಿವಾದಿತ ಸೊಸೈಟಿ ಎಂಬ ಹೆಸರಾಗಿದ್ದ ಹುಂಚಾ ವ್ಯವಸಾಯ  ಸಹಕಾರ ನಿಯಮಿತದ ಚುನಾವಣ ಕಣ ರಂಗೇರಿದ್ದು ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಚುನಾವಣೆಯೂ…

Read Full News

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ|Araga

ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ  ರಿಪ್ಪನ್ ಪೇಟೆ – ಜು.7 ರಂದು ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸಿದರು. ಅದು ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಕೇಂದ್ರ ಹಾಗೂ ರಾಜ್ಯದ ಹಳೆಯ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಪುಸ್ತಕ.14 ನೇ ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ರು. ಆದರೆ ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೂಡ ಇತಿಹಾಸದಲ್ಲಿ ಸೇರಿರುವ ಘಟನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು….

Read Full News

ಜೋಗ ಜಲಪಾತ ವೀಕ್ಷಣೆಗೆ ಹರಿದುಬಂದ ಜನಸಾಗರ!!jog falls

ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ ವೀಕ್ಷಣೆಗೆ, ಭಾನುವಾರ ಪ್ರವಾಸಿಗರ ದಂಡೇ ಜಲಪಾತಕ್ಕೆ ಹರಿದುಬಂದಿತ್ತು. ಹಲವು ದಿನಗಳ ನಂತರ ಜೋಗವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆಗಾಗ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು  ಪ್ರವಾಸಿಗರ ಮನಸೂರೆಗೊಂಡಿತು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದ ಕಾರಣದಿಂದ ಜಲಪಾತದಲ್ಲಿ ಜಲಧಾರೆಯ ವೈಭೋಗ…

Read Full News

ರೈಲಿಗೆ ಸಿಲುಕಿ ಯುವಕನ ಕಾಲು‌ ಮುರಿತ|train accident

ಯಶವಂತಪುರ – ಶಿವಮೊಗ್ಗ (16581 Town Express)  ರೈಲಿಗೆ ಸಿಲುಕಿ ತರಬೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ.  ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.  ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ಗೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು…

Read Full News

12 ದೇವಸ್ಥಾನದಲ್ಲಿ ಹುಂಡಿ ಕಳುವು ಮಾಡಿದ್ದ ಅಂತರ್ ಜಿಲ್ಲಾ ಹುಂಡಿ‌ ಕಳ್ಳರ ಬಂಧನ :

ಶಿವಮೊಗ್ಗ: ಅಂತರ ಜಿಲ್ಲಾ ದೇವಾಲಯಗಳಲ್ಲಿ ಕಳವು ಮಾಡಿದ್ದ ಇಬ್ಬರು ಹುಂಡಿ ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ, ಹಾವೇರಿ ದಾವಣಗೆರೆ ಜಿಲ್ಲೆಯ ಒಟ್ಟು 12 ದೇವಾಲಯಗಳಲ್ಲಿ ಹುಂಡಿಗಳ ಕಳ್ಳತನ ಮಾಡಿರುವುದು ಬಯಲಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಹೂನ್ನಾಳಿ ತಾಲೂಕು ಬುಳ್ಳಾಪುರ ಗ್ರಾಮದ ಚಿನ್ನು ಅಲಿಯಾಸ್ ಡಿ.ಜೆ (26) ಹಾಗೂ ಶಿವಮೊಗ್ಗ ತಾಲೂಕು ತರಗನಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಮಣಿ(26) ಬಂಧಿತ ಕಳ್ಳರು. ಕಳೆದ ತಿಂಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ದೇವಾಲಯದ ಹುಂಡಿ…

Read Full News

ಕ್ರಿಕೆಟ್ ಬೆಟ್ಟಿಂಗ್ ನಿಂದ ಜೀವ ಕಳೆದುಕೊಂಡನಾ ತೀರ್ಥಹಳ್ಳಿಯ ಯುವಕ !???TTH

ಕ್ರಿಕೆಟ್ ಬೆಟ್ಟಿಂಗ್ ನಿಂದ ಜೀವ ಕಳೆದುಕೊಂಡನಾ ತೀರ್ಥಹಳ್ಳಿಯ ಯುವಕ !? ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲಿನಲ್ಲಿ ಮೊಬೈಲ್ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಿಥುನ್ ಶೆಟ್ಟಿ ( 22 ವರ್ಷ) ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾನೆ. ಮಿಥುನ್ ಶೆಟ್ಟಿ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾಗಿರುವುದಾಗಿ ನೆರೆಹೊರೆಯವರ ಆರೋಪವಾಗಿದೆ. ಆನ್ ಲೈನ್ ಬೆಟ್ಟಿಂಗ್ ನಿಂದಾಗಿ ಸಾಲವನ್ನು…

Read Full News

ಸೂಡೂರು ಸೇತುವೆ ಬಳಿ ರಸ್ತೆ ಮಧ್ಯೆ ಲಾರಿ ಅಪಘಾತ : ಸಂಚಾರ ಅಸ್ತವ್ಯಸ್ತ|accident

ಸೂಡೂರು ಸೇತುವೆ ಬಳಿ ರಸ್ತೆ ಮಧ್ಯೆ ಲಾರಿ ಅಪಘಾತ : ಸಂಚಾರ ಅಸ್ತವ್ಯಸ್ತ ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಸೂಡೂರು ಸೇತುವೆ ಸಮೀಪ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಒಂದು ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಕುಂದಾಪುರ ಕಡೆಯಿಂದ ಆಗಮಿಸಿದ ಕಲ್ಲಿದ್ದಲು ತುಂಬಿದ ಲಾರಿಯೊಂದು ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ…

Read Full News

ಗೋಪಾಲಕೃಷ್ಣ ಬೇಳೂರನ್ನು ಮೆಚ್ಚಿಸಲು ನಮ್ಮ ಉಚ್ಚಾಟನೆ; ಡಾ.ರಾಜನಂದಿನಿ ವ್ಯಂಗ್ಯ|sagara

ಸಾಗರ : ಬಿಜೆಪಿ ಸೇರುವ ಮೊದಲು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ನನ್ನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದಾಗಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಪಕ್ಷದ ತಾಲೂಕು ಪ್ರಮುಖರಾದ ಡಾ.ರಾಜನಂದಿನಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪರ ಕೆಲಸ ಮಾಡಿದ್ದರೆ ಉಚ್ಚಾಟನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಪಕ್ಷಕ್ಕೆ ರಾಜಿನಾಮೆ ನೀಡಿ ಎರಡು ತಿಂಗಳ ನಂತರ ಉಚ್ಚಾಟನೆ ಮಾಡಿದ್ದಾಗಿ…

Read Full News

ನಿರಾಶಾದಾಯಕ ಬಜೆಟ್ – ಅರ್ ಎ ಚಾಬುಸಾಬ್|budget 23-24

ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದ್ದು, ಅತಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನಿಡುವಲ್ಲಿ ಎಡವಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ವಿಶ್ಲೇಷಿಸಿದ್ದಾರೆ. ಪಟ್ಟದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹವಿಲ್ಲದ ಪ್ರಗತಿಹೀನ ಬಜೆಟ್ ಆಗಿದ್ದು ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು…

Read Full News

ಕೋಣಂದೂರು : ಮಳೆಯಲ್ಲೇ ಶವ ಸಂಸ್ಕಾರ – ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಇದೆಂತಹ ಅಮಾನವೀಯ ಘಟನೆ !!!!cremation

ಮಳೆಯಲ್ಲೇ ಶವ ಸಂಸ್ಕಾರ – ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಇದೆಂತ ಅಮಾನವೀಯ ಘಟನೆ !? ತೀರ್ಥಹಳ್ಳಿ :  ತಾಲೂಕಿನ ಕೋಣಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆ ಗ್ರಾಮದಲ್ಲಿರುವ ಸ್ಮಶಾನದಲ್ಲಿ ಗ್ರಾಮಪಂಚಾಯಿತಿಯ ಬೇಜವಾಬ್ದಾರಿಯಿಂದ ಸ್ಮಶಾನದ ಮೇಲ್ಭಾಗದ ಶೀಟುಗಳು ಇದ್ದರೂ ಸೋರುತ್ತಿದ್ದು ಅದರಲ್ಲೇ ಮೃತಪಟ್ಟ ವ್ಯಕ್ತಿಯೋರ್ವರ ಶವವನ್ನು ಕುಟುಂಬವರ್ಗ ಹಾಗೂ ಸ್ಥಳೀಯರು ಮಳೆ ನೀರಿನಲ್ಲಿ ಸಂಸ್ಕಾರ ನೆಡೆಸುತ್ತಿರುವ ಅಮಾನವೀಯ ಘಟನೆ ಮಾಜಿ ಗೃಹಸಚಿವರ ಸ್ವ ಕ್ಷೇತ್ರದಲ್ಲಿ ಶುಕ್ರವಾರ ನೆಡೆದಿದೆ. ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ…

Read Full News

ಶಾಲಾ ವಾಹನ ಅಪಘಾತ – ಬಸ್ ಗಾಗಿ ಕಾಯುತಿದ್ದ ವ್ಯಕ್ತಿ ಸಾವು|accident

ಶಾಲಾ ವಾಹನಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮದಲ್ಲಿ ನಡೆದಿದೆ.  ಅಪಘಾತದಲ್ಲಿ ವಿಶ್ವನಾಥ ಕೊಟ್ರಪ್ಪ ಬಾಜಿಗೊಂಡರ್ (37) ಸಾವನ್ಬಪ್ಪಿರುವ ದುರ್ದೈವಿಯಾಗಿದ್ದಾನೆ. ಬಾಜಿಗೊಂಡರ್  ಹಾವೇರಿ ಜಿಲ್ಲೆಯ ಬೆಳವಗಿ ಗ್ರಾಮದ ನಿವಾಸಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ವಾಸಿಯಾದ ಬಾಜಿಗೊಂಡರ್ ಶಿವಮೊಗ್ಗದಲ್ಲಿ ಚಾಲಕ ‌ವೃತ್ತಿ ನಿರ್ವಹಿಸುತ್ತಿದ್ದ. ದಾವಣಗೆರೆ ಕಡೆ‌ ಹೋಗಲು ‌ಕೂಡ್ಲಿಗೆರೆಯ ಗ್ರಾಮ ಪಂಚಾಯಿತಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದನು. ಭದ್ರಾವತಿಗೆ ಬಂದು ಭದ್ರಾವತಿಯ ಮೂಲಕ ದಾವಣಗೆರೆಕಡೆ ಹೊರಡಲು ಸಜ್ಜಾಗಿದ್ದ ಬಾಜಿಗೊಂಡರ್ ಗೆ…

Read Full News

ಯುವಕನ ಕೊಲೆ ಪ್ರಕರಣ – ನಾಲ್ವರಿಗೆ ಜೀವಾವಧಿ ಶಿಕ್ಷೆ|court

ಯುವಕನ ಕೊಲೆ ಪ್ರಕರಣ – ನಾಲ್ವರಿಗೆ ಜೀವಾವಧಿ ಶಿಕ್ಷೆ ಶಿವಮೊಗ್ಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2017 ಫೆ.8 ರಂದು ಶಿವಮೊಗ್ಗದ ಅಣ್ಣಾನಗರದಲ್ಲಿ ಯುವಕ ಅಯಾತ್ ಹುಮಾಯುನ್ ನನ್ನು ಕ್ಷುಲ್ಲಕ ಕಾರಣಕ್ಕೆ ಅರ್ಬಾಜ್, ಶಾರುಖ್ ಖಾನ್, ಶಾಬಾದ್ ಹಾಗು ಅಲ್ಯಾಜ್ ಎಂಬ ನಾಲ್ವರು ಕೊಲೆ ಮಾಡಿದ್ದರು. ಘಟನೆ ನಂತರ ಹತ್ಯೆಯಾದ ಯುವಕನ ಕುಟುಂಬಸ್ಥರು ದೊಡ್ಡಪೇಟೆ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ್ದ…

Read Full News

ರಿಪ್ಪನ್‌ಪೇಟೆ : ಮಳೆ ಕೊರತೆ ನಡುವೆಯೂ ಬಿರುಸುಗೊಂಡ ಕೃಷಿ ಚಟುವಟಿಕೆ|Agricultural activity

ಹೊಸನಗರ ತಾಲ್ಲೂಕಿನಲ್ಲಿ 9300 ಹೆಕ್ಟೇರ್ ಕೃಷಿ ಭೂ ಪ್ರದೇಶದಲ್ಲಿ ಕಬ್ಬು, ಮೆಕ್ಕೆಜೋಳ ಮತ್ತು ಭತ್ತ ಬೆಳೆಯುವ ಭೂಮಿ ಇದ್ದು ಜೂನ್ ಅಂತ್ಯದೊಳಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಕೃಷಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ಹೊಸನಗರ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್‌ ಹೆಗಡೆ ತಿಳಿಸಿದರು. ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಭತ್ತ ಬಿತ್ತನೆಗೆ 8600 ಹೆಕ್ಟೇರ್ ಗುರಿ ಹೊಂದಿದ್ದು ಮಳೆ ವಿಳಂಬದ ಕಾರಣ ಭತ್ತದ ಸಸಿಮಡಿ ತಯಾರಿ ಪ್ರಗತಿಯಲ್ಲಿದೆ. ಅಲ್ಲದೆ ಮೆಕ್ಕೆಜೋಳ…

Read Full News

ಕಾಗೋಡು ತಿಮ್ಮಪ್ಪ ಪುತ್ರಿ ಡಾ ರಾಜಾನಂದಿನಿ ಕಾಂಗ್ರೆಸ್ ನಿಂದ ಉಚ್ಚಾಟನೆ|Expulsion

ಸಾಗರ : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಸೇರಿದಂತೆ 13 ಜನರನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಉಸ್ತುವಾರಿ ಸಿ.ಎಸ್.ಚಂದ್ರಭೂಪಾಲ್ ಉಚ್ಛಾಟನೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರು ಪಕ್ಷವನ್ನು ಬಿಟ್ಟು ಇನ್ನಿತರ ಪಕ್ಷಗಳಿಗೆ ಪಕ್ಷಾಂತರ ಮಾಡಿರುವುದು ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ…

Read Full News

ಭಾರಿ ಮಳೆಗೆ ಕುಸಿದು ಬಿದ್ದ ಶಾಲೆಯ ಕಾಂಪೌಂಡ್ – ತಪ್ಪಿದ ಭಾರಿ ಅನಾಹುತ|Rain

ಸಾಗರ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೆಹರೂ ನಗರದಲ್ಲಿರುವ ಅರಳಿಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗುರುವಾರ ಕುಸಿದು ಬಿದ್ದಿದ್ದು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ.ಹದಿನೈದು ದಿನಗಳ ಹಿಂದೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೋಷಕರು ಶಾಲೆಯ ದುಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಪೋಷಕರು, ಶಾಲಾಭಿವೃದ್ಧಿ ಸಮಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗ್ಯೂ…

Read Full News

ಹಲವು ವರ್ಷಗಳ ಹಿಂದೆ ಮಳೆಗಾಗಿ ಪ್ರಾರ್ಥಿಸಿ ಡ್ಯಾಮ್ ಗೆ ಬಿಟ್ಟಿದ್ದ ದೇವರ ಮೂರ್ತಿ ದಿಡೀರ್ ಪ್ರತ್ಯಕ್ಷ|linganamakki

ಶಿಕಾರಿಪುರ : ಮಲೆನಾಡಿನಲ್ಲಿ ಮಳೆಯ ಕೊರತೆ ಹಿನ್ನೆಲೆ ಲಿಂಗನಮಕ್ಕಿ ಒಡಲು ಬರಿದಾಗಿದ್ದು ಮಾಲಿಕಾಂಬ ದೇವರ ಮೂರ್ತಿ ಲಿಂಗನಮಕ್ಕಿ ಹಿನ್ನೀರಿನಲ್ಲಿ ಕಾಣಿಸಿಕೊಂಡಿದೆ.  ಮಾಲಿಕಾಂಬ ದೇವರ ಮೂರ್ತಿ ಶಿಕಾರಿಪುರದ ಚಿಕ್ಕ ಸಾಲೂರು ಗ್ರಾಮದ ಗ್ರಾಮ ದೇವತೆಯಾಗಿದೆ. ಕಳೆದ 12 ವರ್ಷಗಳ ಹಿಂದೆ ಮಾಲೀಕಾಂಬ ದೇವತೆಯ ಮೂರ್ತಿಯನ್ನ ಹಿನ್ನಿರಿನಲ್ಲಿ ಬಿಡಲಾಗಿತ್ತು. ಹಿನ್ನಿರಿನಲ್ಲಿ ನೀರು ಬರಿದಾದ ಹಿನ್ನೆಲೆ ದೇವರ ಮೂರ್ತಿ ಗೋಚರಗೊಂಡಿದೆ.  12 ವರ್ಷ ಕಳೆದರೂ ಸಹ ಯಾವುದೇ ಹಾನಿಯಾಗದೆ ಮಾಲಿಕಾಂಬ ದೇವರ ಮೂರ್ತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು…

Read Full News

ದೇವಸ್ಥಾನದಲ್ಲಿ ಭಕ್ತರ ಚಿನ್ನ ಕದ್ದಿದ್ದ ತೀರ್ಥಹಳ್ಳಿ ಮೂಲದ ಕಳ್ಳ ಬಂಧನ|arrested

ಕೊಲ್ಲೂರು‌ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ  ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿ ತೀರ್ಥಹಳ್ಳಿ ಮೂಲದ ಬಿ.ಜೆ.ಗಿರೀಶ್ ಎಂದು ತಿಳಿದುಬಂದಿದೆ. ಕಾಸರಗೋಡು ಮೂಲದ ಮಹಿಳೆಯೊಬ್ಬರ ವ್ಯಾನಿಟಿಬ್ಯಾಗ್​ನ್ನು ಆರೋಪಿ ಕಳವು ಮಾಡಿದ್ದನು. ಕಳೆದ .ಜೂನ್ 04 ರಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ಆವರಣದಲ್ಲಿ ಕಳ್ಳತನ ನಡೆದಿತ್ತು.   ಈ ಪ್ರಕರಣ ಸಂಬಂಧ ಆರೋಪಿಯನ್ನ ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ಧಾರೆ. ಆರೋಪಿ ತೀರ್ಥಹಳ್ಳಿಯ ಕಂಧಕ ಗ್ರಾಮದ ನಿವಾಸಿಯಾಗಿದ್ಧಾನೆ. ಈತನ  ಬಳಿಯಿಂದ 4,75,000 ರೂ. ಮೌಲ್ಯದ 108…

Read Full News

ಸಂಸದ ಬಿವೈ ರಾಘವೇಂದ್ರ ಮನೆಗೆ ಯುವ ಕಾಂಗ್ರೆಸ್ ನಿಂದ ಮುತ್ತಿಗೆ ಯತ್ನ – ಕಾರ್ಯಕರ್ತರು ವಶಕ್ಕೆ|protest

ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಬಿಜೆಪಿ ಸರ್ಕಾರ ನಿರಾಕರಿಸಿದೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಸಂಸದ ಬಿ ವೈ ರಾಘವೇಂದ್ರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ಈ ವೇಳೆ 35ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 9 ವರ್ಷದಿಂದ ಕೇಂದ್ರದಲ್ಲಿ ಅಧಿಕಾರ ನಡೆಸುವ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡುತ್ತಾ ಬಂದಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ 650ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸದೆ…

Read Full News

ಭರ್ತಿಯಾದ ಗಾಜನೂರಿನ ತುಂಗಾ ಡ್ಯಾಂ – ಸಂಜೆಯೊಳಗೆ ಗೇಟ್ ಓಪನ್ : ನದಿಪಾತ್ರದ ಜನರಿಗೆ ಎಚ್ಚರಿಕೆ|tunga

ಶಿವಮೊಗ್ಗ : ಮುಂಗಾರು ಮಳೆಯ ಅವಧಿಯಲ್ಲಿ ರಾಜ್ಯದಲ್ಲಿ ಮೊದಲಿಗೆ ಭರ್ತಿಯಾಗುವ ಹಾಗೂ ಕಡಿಮೆ ವ್ಯಾಪ್ತಿ – ವಿಸ್ತೀರ್ಣ ಹೊಂದಿರುವ, ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಗರಿಷ್ಠ ಮಟ್ಟಕ್ಕೆ ಬಂದಿದೆ. ಬುಧವಾರ ಬೆಳಿಗ್ಗೆ 8.30 ರ ಮಾಹಿತಿಯಂತೆ, ಡ್ಯಾಂ ಗರಿಷ್ಠ ಮಟ್ಟವಾದ 588.24 ಅಡಿ ತಲುಪಲು ಇನ್ನೂ ಕೇವಲ 2 ಅಡಿಯಷ್ಟು ನೀರು ಹರಿದು ಬರಬೇಕಾಗಿದೆ. ಪ್ರಸ್ತುತ 4830 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ.  ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಒಳಹರಿವಿನ ಪ್ರಮಾಣದಲ್ಲಿ ನಿರಂತರ ಏರಿಕೆ…

Read Full News

ಹೊಸನಗರ – ತೀರ್ಥಹಳ್ಳಿ ತಾಲೂಕಿನಾದ್ಯಂತ ಅಬ್ಬರಿಸುತ್ತಿರುವ ವರ್ಷಧಾರೆ|Rain

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 82.30 ಮಿ.ಮೀ. ಮಳೆಯಾಗಿದ್ದು, ಸರಾಸರಿ 11.76 ಮಿ.ಮೀ. ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 44.57 ಮಿ.ಮೀ. ಮಳೆ ದಾಖಲಾಗಿದೆ. ಹೊಸನಗರ  ಹೊಸನಗರ ತಾಲೂಕಿನ ನಗರ, ಸಂಪೆಕಟ್ಚೆ, ನಿಟ್ಟೂರು, ಯಡೂರು, ಮಾಸ್ತಿಕಟ್ಚೆ, ಕೋಡೂರು, ಗರ್ತಿಕೆರೆ, ಹುಂಚ , ಬೆಳ್ಳೂರು, ಅಮೃತ, ಸೋನಲೆ, ತ್ರಿಣಿವೆ, ಮಂಬಾರು,ರಿಪ್ಪನ್‌ಪೇಟೆ, ಕೋಡುರು, ಚಿಕ್ಕಜೇನಿ, ಬಾಳೂರು, ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನದಿಂದ…

Read Full News

ಮಾದಾಪುರದ ಸರ್ಕಾರಿ ಶಾಲೆಗೆ ಯುವ ಟ್ರಸ್ಟ್ ವತಿಯಿಂದ ಬ್ಯಾಗ್,ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ|yuva trust

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸೋಮವಾರ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಬೆಂಗಳೂರು ಯುವ ಟ್ರಸ್ಟ್ ನ ಸಂಸ್ಥಾಪಕರಾದ ಜಿ ಕಿರಣ್ ಸಾಗರ್, ಟ್ರಸ್ಟಿಗಳಾದ ಸುನಿಲ್ ಬಿ. ವಿ, ಶ್ವೇತ ಎಸ್ ರಾವ್, ಅಶೋಕ್ ಬಿ ಯಾದವ್ ಇವರ ನೇತೃತ್ವದಲ್ಲಿ ಯುವ ಟ್ರಸ್ಟ್ ನ ಆಶಯದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮಾನ…

Read Full News

ಕಾರು ಮತ್ತು ನವದುರ್ಗ ಬಸ್ಸಿನ ನಡುವೆ ಭೀಕರ ಅಪಘಾತ – ಕಾರು ಚಾಲಕ ಸ್ಥಳದಲ್ಲಿಯೇ ಸಾವು,ಇಬ್ಬರು ಗಂಭೀರ..!!|accident

ಶಿವಮೊಗ್ಗ : ಸಕ್ರೆಬೈಲ್ ಆನೆ ಬಿಡಾರದ ಬಳಿ ಇಂದು ಸಂಜೆ ಐದು ಗಂಟೆ ಸುಮಾರಿಗೆ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ನವದುರ್ಗ ಬಸ್​ಗೆ ಶಿವಮೊಗ್ಗದ ಕಡೆಯಿಂದ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿಯಾಗಿ ನುಜ್ಜುಗುಜ್ಜಾಗಿದೆ. ಇನ್ನು ಖಾಸಗಿ ಬಸ್ ರಸ್ತೆಯ ಇನ್ನೊಂದು ಪಕ್ಕಕ್ಕೆ  ಸರಿದು ನಿಂತಿದೆ. ಸಂಜೆ ಐದು ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎಂದು…

Read Full News

ತೀರ್ಥಹಳ್ಳಿಯಲ್ಲಿ ಮತ್ತೊಂದು ಅಶ್ಲೀಲ ವೀಡಿಯೋ ವೈರಲ್|crime news

ತೀರ್ಥಹಳ್ಳಿ: ಮಲೆನಾಡಿನ ತವರೂರು, ಸುಸಂಸ್ಕೃತರ ನಾಡು ಎಂದೇ ಖ್ಯಾತಿ ಪಡೆದಿದ್ದ ತೀರ್ಥಹಳ್ಳಿ ಇತ್ತೀಚೆಗೆ ಅಶ್ಲೀಲ ವಿಡಿಯೋ ಪ್ರಕರಣಗಳಿಂದ ಸುದ್ದಿ ಮಾಡುತ್ತಲಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಯುವತಿಯರ ಅಶ್ಲೀಲ ವಿಡಿಯೋಗಳು ಬಾರಿ ಸದ್ದು ಮಾಡುತ್ತಿದೆ. ಈಗ ಮತ್ತೊಂದು ವಿಡಿಯೋ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು ಸತ್ಯಾಸತ್ಯತೆ  ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕಾಗಿದೆ. ತೀರ್ಥಹಳ್ಳಿಯ ಯುವಕನು ಯುವತಿಯೊಬ್ಬಳೊಂದಿಗೆ ವಾಟ್ಸಪ್ ಚಾಟ್ ನಲ್ಲಿ  ಅಶ್ಲೀಲವಾಗಿ ನೆಡೆದುಕೊಂಡಿರುವ ವಿಡಿಯೋ ಹರಿದಾಡುತ್ತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ…

Read Full News

ರಿಪ್ಪನ್‌ಪೇಟೆ : NSS ಶಿಬಿರಾರ್ಥಿಗಳಿಂದ ಪ್ಲಾಸ್ಟಿಕ್ ಬಳಕೆ ವಿರುದ್ದ ಅರಿವು ಜಾಥಾ

ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2 ರ ವಿಶೇಷ ವಾರ್ಷಿಕ ಶಿಬಿರದ ಸ್ವಯಂ ಸೇವಕರು ಬೆಳ್ಳೂರು ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಅರಿವು ಜಾಥಾ ಕಾರ್ಯಕ್ರಮವನ್ನು ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಯಿತು. ಪ್ಲಾಸ್ಟಿಕ್ ವಿರುದ್ಧ ಅರಿವು ಕಾರ್ಯಕ್ರಮವನ್ನು ಕಲ್ಲುಹಳ್ಳ ಸರ್ಕಾರಿ ಶಾಲೆಯಿಂದ ಆರಂಭವಾಗಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ವಿರುದ್ಧ ಘೋಷಣೆ ಕೂಗುತ್ತಾ ಜನಸಮುದಾಯಕ್ಕೆ ಅರಿವು ಮೂಡಿಸಿದರು. ಜಾಥ ನಡೆಸುವುದರೊಂದಿಗೆ ರಸ್ತೆಯ ಇಕ್ಕೆಲಗಳಲಿದ್ದ ಸುಮಾರು…

Read Full News

ಚಿತ್ರ ನಟಿ ಅನು ಗೌಡ ಮೇಲೆ ಮಾರಣಾಂತಿಕ ಹಲ್ಲೆ – ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲು|assault

ಜಮೀನು ವ್ಯಾಜ್ಯದಲ್ಲಿ ಕನ್ನಡ ಚಲನಚಿತ್ರ ರಂಗದ ನಟಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ನಡೆದಿದೆ. ಸಾಕಷ್ಟು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿಸಿರುವ ನಟಿ ಅನಿತಾ ಗೌಡ @ ಅನೂಗೌಡ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಹೆಸರು ಗಳಿಸಿದ್ದಾರೆ. ಘಟನೆಯ ಹಿನ್ನಲೆ : ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿವಾಸಿಯಾದ ಇವರಿಗೆ ಸಾಗರ ತಾಲೂಕಿನ ಕಾಸ್ಪಡಿಯಲ್ಲಿ ಜಮೀನು ಇತ್ತು. ಆ ಜಮೀನ ಅನುಗೌಡ ರವರ ಅಪ್ಪ ಅಮ್ಮ ವಾಸವಾಗಿದ್ದರು….

Read Full News

ರಿಪ್ಪನ್‌ಪೇಟೆ : ಸಿಡಿಲು ಬಡಿದು ಮೂರು ಎಮ್ಮೆ ಸಾವು|lighting

ಮೇಯಲು ಹೋಗಿದ್ದ ಜಾನುವಾರುಗಳಿಗೆ ಸಿಡಿಲು ಬಡಿದು ಮೂರು ಎಮ್ಮೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಗ್ರಾಮದ ಪುರುಮಠ ಎಂಬಲ್ಲಿ ನಡೆದಿದೆ. ಪುರುಮಠ ಗ್ರಾಮದ ರಾಜು ಎಂಬವರಿಗೆ ಸೇರಿದ ಮೂರು ಸಾಕು ಎಮ್ಮೆಗಳು ಮನೆ ಸಮೀಪದ ಕಾಡಿನಲ್ಲಿ ಮೇಯಲು ಹೋದಾಗ ಈ ಘಟನೆ ನಡೆದಿದೆ. ಗುರುವಾರ ಮೇಯಲು ಬಿಟ್ಟಿದ್ದ ಎಮ್ಮೆ ಮನೆಗೆ ಬಾರದ ಹಿನ್ನಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಮನೆ ಮಂದಿ, ಕೊನೆಗೆ ಮನೆ ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಎಮ್ಮೆಯ…

Read Full News

ರೌಡಿ ಶೀಟರ್ ಸೈಫು ಕಾಲಿಗೆ ಪೊಲೀಸರ ಗುಂಡೇಟು|firing

ಶಿವಮೊಗ್ಗ : ಕೊಲೆ ಯತ್ನ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ನಡೆದಿದೆ. ಮಾರ್ಕೆಟ್ ಫೌಜನ್​​ ಗ್ಯಾಂಗ್​ನ ಸದಸ್ಯನಾಗಿರುವ ರೌಡಿಶೀಟರ್​ ಸೈಫುಲ್ಲಾ ಖಾನ್​ ಅಲಿಯಾಸ್ ಸೈಫುಗೆ ಜಯನಗರ ಠಾಣೆ ಪಿಎಸ್​ಐ ನವೀನ್​ರಿಂದ ಫೈರಿಂಗ್​​ ಮಾಡಲಾಗಿದೆ.  ಕೊಲೆ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದಾಗ ಕಾನ್ಸ್​ಟೇಬಲ್​ ನಾಗರಾಜ್ ಮೇಲೆ ಸೈಫುಲ್ಲಾ ಖಾನ್​ನಿಂದ ಹಲ್ಲೆ ಮಾಡಲಾಗಿದೆ. ಆತ್ಮರಕ್ಷಣೆಗಾಗಿ ಸೈಫು ಕಾಲಿಗೆ ಗುಂಡು ಹಾರಿಸಲಾಗಿದೆ. ಸದ್ಯ ಗಾಯಾಳು ಸೈಫುಲ್ಲಾ ಸೇರಿದಂತೆ ಪೊಲೀಸರಿಗೆ ಮೆಗ್ಗಾನ್…

Read Full News

JDS ಪಕ್ಷದಿಂದ ವಿಧಾನಸಭೆ ಉಪ ನಾಯಕಿಯಾಗಿ ಶಾರದಾ ಪೂರ್ಯಾ ನಾಯಕ್ ಆಯ್ಕೆ|

ವಿಧಾನಸಭೆಯ ಜೆಡಿಎಸ್ ಪಕ್ಷದಿಂದ ನಾಯಕರಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ನಾಯಕಿಯನ್ನಾಗಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ಪಕ್ಷದ ವರಿಷ್ಠರು ವಿಧಾನಸಭೆಯ ನಾಯಕರನ್ನಾಗಿ ನೇಮಿಸಿದ್ದರೇ, ಉಪ ನಾಯಕಿಯನ್ನಾಗಿ ಶಿವಮೊಗ್ಗ ಗ್ರಾಮಾಂತರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕಿಯಾಗಿರುವಂತ ಶಾರದ ಪೂರ್ಯಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ಪಕ್ಷದ ಏಕೈಕ ಮಹಿಳಾ ಶಾಸಕಿಯಾಗಿರುವಂತ ಶಾರಾ ಪೂರ್ಯಾ ನಾಯಕ್ ಅವರನ್ನು ವಿಧಾನಸಭೆಯ ಉಪ ನಾಯಕಿಯನ್ನಾಗಿ…

Read Full News

ಗಂಡು ಕರುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಅಪರಿಚಿತರು|bull calf

ಸಾಗರ : ಮಿಶ್ರ ತಳಿ ದನಗಳ ಒಟ್ಟು ನಾಲ್ಕು ಎಳೆಯ ಗಂಡು ಕರುಗಳನ್ನು ಯಾರಿಗೂ ಗೊತ್ತಾಗದಂತೆ ರಸ್ತೆ ಮಧ್ಯೆ ಅನಾಥವಾಗಿ ಬಿಟ್ಟು ಪರಾರಿಯಾದ ಘಟನೆ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ವೃತ್ತದ ಬಳಿ ನಡೆದಿದೆ. ಪಶುಸಂಗೋಪನೆಯಲ್ಲಿ ಲಾಭದಾಯಕವಲ್ಲದ ಹೋರಿ ಕರುಗಳು ಒಂದು ವರ್ಷದೊಳಗಿನ ಪ್ರಾಯದಾಗಿದ್ದು, ಇವುಗಳಿಂದ ಯಾವುದೇ ಫಲವಿಲ್ಲ ಎಂಬ ಕಾರಣಕ್ಕೆ ಹೀಗೆ ಬಿಟ್ಟುಹೋಗಲಾಗಿದೆ ಎಂದು ಭಾವಿಸಲಾಗಿದೆ. ಈ ಹಂತದಲ್ಲಿ ಮಾಹಿತಿ ತಿಳಿದ ಸ್ಥಳೀಯ ಯುವಕರು ಸ್ಥಳಕ್ಕೆ ಆಗಮಿಸಿ, ಕರುಗಳಿಗೆ ನೀರು, ತಿಂಡಿ ಒದಗಿಸಿದರು….

Read Full News