ಶಿಕಾರಿಪುರ : ಮಲೆನಾಡಿನಲ್ಲಿ ಮಳೆಯ ಕೊರತೆ ಹಿನ್ನೆಲೆ ಲಿಂಗನಮಕ್ಕಿ ಒಡಲು ಬರಿದಾಗಿದ್ದು ಮಾಲಿಕಾಂಬ ದೇವರ ಮೂರ್ತಿ ಲಿಂಗನಮಕ್ಕಿ ಹಿನ್ನೀರಿನಲ್ಲಿ ಕಾಣಿಸಿಕೊಂಡಿದೆ.
ಮಾಲಿಕಾಂಬ ದೇವರ ಮೂರ್ತಿ ಶಿಕಾರಿಪುರದ ಚಿಕ್ಕ ಸಾಲೂರು ಗ್ರಾಮದ ಗ್ರಾಮ ದೇವತೆಯಾಗಿದೆ.
ಕಳೆದ 12 ವರ್ಷಗಳ ಹಿಂದೆ ಮಾಲೀಕಾಂಬ ದೇವತೆಯ ಮೂರ್ತಿಯನ್ನ ಹಿನ್ನಿರಿನಲ್ಲಿ ಬಿಡಲಾಗಿತ್ತು. ಹಿನ್ನಿರಿನಲ್ಲಿ ನೀರು ಬರಿದಾದ ಹಿನ್ನೆಲೆ ದೇವರ ಮೂರ್ತಿ ಗೋಚರಗೊಂಡಿದೆ.
12 ವರ್ಷ ಕಳೆದರೂ ಸಹ ಯಾವುದೇ ಹಾನಿಯಾಗದೆ ಮಾಲಿಕಾಂಬ ದೇವರ ಮೂರ್ತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ಮೂರ್ತಿಗೆ ಪೂಜೆ ನೆರವೇರಿಸಿದ್ದಾರೆ.