ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ದಾರೆ.
ಆರೋಪಿ ತೀರ್ಥಹಳ್ಳಿ ಮೂಲದ ಬಿ.ಜೆ.ಗಿರೀಶ್ ಎಂದು ತಿಳಿದುಬಂದಿದೆ.
ಕಾಸರಗೋಡು ಮೂಲದ ಮಹಿಳೆಯೊಬ್ಬರ ವ್ಯಾನಿಟಿಬ್ಯಾಗ್ನ್ನು ಆರೋಪಿ ಕಳವು ಮಾಡಿದ್ದನು. ಕಳೆದ .ಜೂನ್ 04 ರಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ಆವರಣದಲ್ಲಿ ಕಳ್ಳತನ ನಡೆದಿತ್ತು.
ಈ ಪ್ರಕರಣ ಸಂಬಂಧ ಆರೋಪಿಯನ್ನ ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ಧಾರೆ. ಆರೋಪಿ ತೀರ್ಥಹಳ್ಳಿಯ ಕಂಧಕ ಗ್ರಾಮದ ನಿವಾಸಿಯಾಗಿದ್ಧಾನೆ.
ಈತನ ಬಳಿಯಿಂದ 4,75,000 ರೂ. ಮೌಲ್ಯದ 108 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.