ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸೋಮವಾರ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಬೆಂಗಳೂರು ಯುವ ಟ್ರಸ್ಟ್ ನ ಸಂಸ್ಥಾಪಕರಾದ ಜಿ ಕಿರಣ್ ಸಾಗರ್, ಟ್ರಸ್ಟಿಗಳಾದ ಸುನಿಲ್ ಬಿ. ವಿ, ಶ್ವೇತ ಎಸ್ ರಾವ್, ಅಶೋಕ್ ಬಿ ಯಾದವ್ ಇವರ ನೇತೃತ್ವದಲ್ಲಿ ಯುವ ಟ್ರಸ್ಟ್ ನ ಆಶಯದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮಾನ ಅವಕಾಶ, ಸಬಲೀಕರಣ, ಬಡತನದ ಚಕ್ರವನ್ನು ಮುರಿಯುವುದು, ಸರ್ಕಾರಿ ಶಾಲೆಗಳನ್ನು ಬೆಂಬಲಿಸುವುದು ಹಾಗೂ ಸಮುದಾಯದ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಶಾಲಾ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದಾಪುರದ ಎಸ್ ಟಿ ಎಂ ಸಿ ಅಧ್ಯಕ್ಷರಾದ ಹಾಲಪ್ಪ ರವರು ವಹಿಸಿದ್ದರು.
ಮಾದಾಪುರ ಶಾಲೆಯ ಶಿಕ್ಷಕಿಯಾದ ಫೌಜಿಯ ಸರವತ್ ಶಿಕ್ಷಕರು ಪ್ರಾಸ್ತಾವಿಕ ನುಡಿಯಲ್ಲಿ ಯುವ ಬೆಂಗಳೂರು ಟ್ರಸ್ಟ್ ನ ಪರಿಚಯ ಹಾಗೂ ಉದ್ದೇಶಗಳನ್ನು ತಿಳಿಸಿದರು.
ನಾಗರಾಜ್ ಸಮೂಹ ಸಂಪನ್ಮೂಲ ವ್ಯಕ್ತಿಗಳು ಅರಸಾಳು ಕ್ಲಸ್ಟರ್ ರವರು ಮಾತನಾಡಿ ಯುವ ಟ್ರಸ್ಟ್ ನೀಡಿರುವ ಸಾಮಗ್ರಿಗಳ ಸಮರ್ಪಕ ಬಳಕೆ ಆಗಬೇಕು ಎಂದು ತಿಳಿಸಿದರು.
ಈ ಸುಸಂದರ್ಭದ ನೆನಪಿಗಾಗಿ ಹೊಸನಗರ ತಾಲೂಕ್ ವೃಕ್ಷ ಜಾಗೃತಿ ಸಂಘದ ಅಧ್ಯಕ್ಷರಾದ ಮಂಜುನಾಥ್ ನೇತೃತ್ವದಲ್ಲಿ 50 ಅಡಿಕೆ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ ಗಣಪತಿ, ವಿಜಿಯಣ್ಣ,ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ,ಸಹ ಶಿಕ್ಷಕಿ ಶಶಿಕಲಾ, ಎಸ್. ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರು ಉಪಸ್ಥಿತರಿದ್ದರು.