ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 82.30 ಮಿ.ಮೀ. ಮಳೆಯಾಗಿದ್ದು, ಸರಾಸರಿ 11.76 ಮಿ.ಮೀ. ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 44.57 ಮಿ.ಮೀ. ಮಳೆ ದಾಖಲಾಗಿದೆ.
ಹೊಸನಗರ
ಹೊಸನಗರ ತಾಲೂಕಿನ ನಗರ, ಸಂಪೆಕಟ್ಚೆ, ನಿಟ್ಟೂರು, ಯಡೂರು, ಮಾಸ್ತಿಕಟ್ಚೆ, ಕೋಡೂರು, ಗರ್ತಿಕೆರೆ, ಹುಂಚ , ಬೆಳ್ಳೂರು, ಅಮೃತ, ಸೋನಲೆ, ತ್ರಿಣಿವೆ, ಮಂಬಾರು,ರಿಪ್ಪನ್‌ಪೇಟೆ, ಕೋಡುರು, ಚಿಕ್ಕಜೇನಿ, ಬಾಳೂರು, ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನದಿಂದ ಅಬ್ಬರಿಸುತ್ತಿರುವ ವರ್ಷಧಾರೆ.
ಮಳೆ ಇಲ್ಲದೆ ಕಂಗೆಟ್ಚಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಳೆ ಸುರಿಯುತ್ತಿರುವ ಪರಿಣಾಮ ಜಮೀನ ಕಡೆ ಮುಖ ಮಾಡಿದ ರೈತಾಪಿ ವರ್ಗ,ಗರಿಗೆದರಿದ ಕೃಷಿ ಚಟುವಟಿಕೆಗಳು,ಕೃಷಿ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಖರೀದಿ ಮುಗಿಬಿದ್ದ ರೈತರು.
ಜಿಲ್ಲಾದ್ಯಂತ ಮಳೆ ಇಲ್ಲದೆ ಹಳ್ಳ-ಕೊಳ್ಳಗಳು, ಹೊಳೆ-ನದಿಗಳು, ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದವು.
ತೀರ್ಥಹಳ್ಳಿ
ತೀರ್ಥಹಳ್ಳಿ ತಾಲೂಕಿನ ಬಿದರಗೋಡು, ಹೊನ್ನೇತಾಳು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಹೊಸಹಳ್ಳಿ, ಮೇಗರವಳ್ಳಿ. ಹೊಸನಗರ ತಾಲೂಕಿನ ಸುಳಗೋಡು, ನಗರ, ಹೊಸೂರು ಸಂಪೇಕಟ್ಟೆಯಲ್ಲಿ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ತೀರ್ಥಹಳ್ಳಿಯ ಸಾಲ್ಗಡಿ, ಮಾಳೂರು, ಭಾಂಡ್ಯ ಕುಕ್ಕೆ, ಬೆಜ್ಜವಳ್ಳಿ, ಕುಡುಮಲ್ಲಿಗೆ, ಹೊದಲ ಅರಳಾಪುರ, ಆರಗ, ನೊಣಬೂರು, ದೇಮ್ಲಾಪುರ, ತ್ರಿಯಂಬಕಪುರ, ಮಂಡಗದ್ದೆ, ಹಣಗೆರೆಯಲ್ಲಿ ಸಂಜೆಯಿಂದ ಜೋರು ಮಳೆ ಆರಂಭವಾಗಿದೆ.
ಸಾಗರ
ಸಾಗರದ ಆಚಾಪುರ, ಆನಂದಪುರಂ, ಭೀಮನಕೋಣೆ, ಕಲ್ಮನೆ, ಭೀಮನೇರಿ, ಕೆಳದಿ, ತ್ಯಾಗರ್ತಿಯಲ್ಲಿ ಜೋರು ಮಳೆಯಾಗುತ್ತಿರವುದಾಗಿ ವರದಿಯಾಗಿದೆ.
ಶಿವಮೊಗ್ಗದ ಸಂತೆ ಕಡೂರು, ಬಿದರೆ ವ್ಯಾಪ್ತಿಯಲ್ಲಿ ಮಳೆ ಜೋರಿದೆ. ಭದ್ರಾವತಿ ತಾಲೂಕಿನಾದ್ಯಂತ ಸಾಧಾರಣೆ ಮಳೆಯಾಗುತ್ತಿದೆ. ಶಿಕಾರಿಪುರ, ಸೊರಬ ತಾಲೂಕಿನಲ್ಲಿ ಸಾಮಾನ್ಯ ಮಳೆಯಾಗುತ್ತಿದೆ ಎಂದು ತಿಳಿದು ಬಂದಿದೆ.