ತೀರ್ಥಹಳ್ಳಿ: ಮಲೆನಾಡಿನ ತವರೂರು, ಸುಸಂಸ್ಕೃತರ ನಾಡು ಎಂದೇ ಖ್ಯಾತಿ ಪಡೆದಿದ್ದ ತೀರ್ಥಹಳ್ಳಿ ಇತ್ತೀಚೆಗೆ ಅಶ್ಲೀಲ ವಿಡಿಯೋ ಪ್ರಕರಣಗಳಿಂದ ಸುದ್ದಿ ಮಾಡುತ್ತಲಿದೆ.
ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಯುವತಿಯರ ಅಶ್ಲೀಲ ವಿಡಿಯೋಗಳು ಬಾರಿ ಸದ್ದು ಮಾಡುತ್ತಿದೆ. ಈಗ ಮತ್ತೊಂದು ವಿಡಿಯೋ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು ಸತ್ಯಾಸತ್ಯತೆ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕಾಗಿದೆ.
ತೀರ್ಥಹಳ್ಳಿಯ ಯುವಕನು ಯುವತಿಯೊಬ್ಬಳೊಂದಿಗೆ ವಾಟ್ಸಪ್ ಚಾಟ್ ನಲ್ಲಿ ಅಶ್ಲೀಲವಾಗಿ ನೆಡೆದುಕೊಂಡಿರುವ ವಿಡಿಯೋ ಹರಿದಾಡುತ್ತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಈ ಹಿಂದೆ ಎಬಿವಿಪಿ ಅಧ್ಯಕ್ಷನೊಬ್ಬನ ವಿಡಿಯೋ ವೈರಲ್ ಆಗಿ ತಾಲೂಕಿನಲ್ಲಿ ಬಾರಿ ಚರ್ಚೆಯಾಗಿತ್ತು.ಆ ವಿಚಾರವಾಗಿ NSUI ಪ್ರತಿಭಟನೆ ಕೂಡ ಮಾಡಿತ್ತು.ಆ ನಂತರದ ಯುವಕನ ಬಂಧನವಾಗಿತ್ತು.