ಮೇಯಲು ಹೋಗಿದ್ದ ಜಾನುವಾರುಗಳಿಗೆ ಸಿಡಿಲು ಬಡಿದು ಮೂರು ಎಮ್ಮೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಗ್ರಾಮದ ಪುರುಮಠ ಎಂಬಲ್ಲಿ ನಡೆದಿದೆ.
ಪುರುಮಠ ಗ್ರಾಮದ ರಾಜು ಎಂಬವರಿಗೆ ಸೇರಿದ ಮೂರು ಸಾಕು ಎಮ್ಮೆಗಳು ಮನೆ ಸಮೀಪದ ಕಾಡಿನಲ್ಲಿ ಮೇಯಲು ಹೋದಾಗ ಈ ಘಟನೆ ನಡೆದಿದೆ.
ಗುರುವಾರ ಮೇಯಲು ಬಿಟ್ಟಿದ್ದ ಎಮ್ಮೆ ಮನೆಗೆ ಬಾರದ ಹಿನ್ನಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಮನೆ ಮಂದಿ, ಕೊನೆಗೆ ಮನೆ ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಎಮ್ಮೆಯ ಕಳೇಬರ ಪತ್ತೆಯಾಗಿದೆ.
ಈ ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಮೂರು ಎಮ್ಮೆಗಳು ಸಿಡಿಲಿನ ಬಡಿತಕ್ಕೆ ಮೃತಪ್ಪಟ್ಟಿರುವುದರಿಂದ ರೈತ ಕುಟುಂಬ ಆತಂಕಕ್ಕೀಡಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.