ಜಮೀನು ವ್ಯಾಜ್ಯದಲ್ಲಿ ಕನ್ನಡ ಚಲನಚಿತ್ರ ರಂಗದ ನಟಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ನಡೆದಿದೆ.
ಸಾಕಷ್ಟು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿಸಿರುವ ನಟಿ ಅನಿತಾ ಗೌಡ @ ಅನೂಗೌಡ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಹೆಸರು ಗಳಿಸಿದ್ದಾರೆ.
ಘಟನೆಯ ಹಿನ್ನಲೆ :
ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿವಾಸಿಯಾದ ಇವರಿಗೆ ಸಾಗರ ತಾಲೂಕಿನ ಕಾಸ್ಪಡಿಯಲ್ಲಿ ಜಮೀನು ಇತ್ತು. ಆ ಜಮೀನ ಅನುಗೌಡ ರವರ ಅಪ್ಪ ಅಮ್ಮ ವಾಸವಾಗಿದ್ದರು.
ಜಮೀನಿನ ವಿಚಾರದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ವ್ಯಾಜ್ಯವಿದ್ದು ಇದೇ ವಿಚಾರದಲ್ಲಿ ಅನೂ ಗೌಡ ಅವರಿಗೆ ಸ್ಥಳೀಯ ನಿವಾಸಿಗಳು ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ನಟಿ ಅನು ಗೌಡ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಅನು ಗೌಡ ತಮಿಳಿನಲ್ಲಿ ‘ಮೌನಮಾನ ನೇರಂ’, ಕಲಕಲ್, ‘ಶಂಕರ’, ‘ಆಡಾದ ಆಟಮೆಲ್ಲ…’ ಕನ್ನಡದಲ್ಲಿ ಸವಿಸವಿ ನೆನಪು’, ‘ಭೂಗತ’ ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಸುದೀಪ್ ರವರೊಂದಿಗೆ ಕೆಂಪೇಗೌಡ, ರಮ್ಯಾಗೆ ಅಕ್ಕನಾಗಿ ದಂಡಂ ದಶಗುಣಂ, ಶಿವರಾಜ್‌ಕುಮಾರ್‌ರ ಸುಗ್ರೀವ, ಪುನೀತ್ ಚಿತ್ರವಾದ ಹುಡುಗರು ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ಛಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬೃಂದಾವನ’ದಲ್ಲಿ ದರ್ಶನ್ ಮನೆಯ ಸೊಸೆಯಾಗಿ ನಟಿಸಿದ್ದಾರೆ.