ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ – ಕೆ ಟಿ ಈಶ್ವರ್

ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

“ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ” – ಕೆ ಟಿ ಈಶ್ವರ್

ರಿಪ್ಪನ್ ಪೇಟೆ :ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ. ಮರಗಳು ಉಸಿರಾಟಕ್ಕೆ ಆಮ್ಲಜನಕ ನೀಡುತ್ತವೆ, ನದಿಗಳು ನಮಗೆ ನೀರು ನೀಡುತ್ತವೆ, ಮಣ್ಣು ಆಹಾರ ಬೆಳೆಸುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ನಾವು ಈ ಸಂಪತ್ತುಗಳನ್ನು ದುರ್ಬಳಕೆ ಮಾಡುತ್ತಿದ್ದೇವೆ. ಎಂದು ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕ  ಕೆ. ಟಿ.ಈಶ್ವರ್ ಹೇಳಿದರು.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಅರಣ್ಯ ನಾಶ, ಜಲಮೂಲಗಳ ಒಣಗಿಕೆ, ಪ್ಲಾಸ್ಟಿಕ್ ಮಾಲಿನ್ಯ – ಇವೆಲ್ಲ ಮಾನವನ ಅನಾದರದ ಪರಿಣಾಮಗಳು ಎಂದು  ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಕೃಷ್ಣಮೂರ್ತಿ  “ಭೂಮಿಯ ಪುನಶ್ಚೇತನ – ನಮ್ಮ ಜವಾಬ್ದಾರಿ.”
ಇದು ನಮಗೆ ಒಂದು ಸಂಕೇತ – ಪರಿಸರ ಉಳಿಸುವ ಹೊಣೆ ಎಲ್ಲರದು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.ಪ್ರತಿಯೊಬ್ಬರೂ ಒಂದು ಮರ ನೆಡೋಣ.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ.ನೀರನ್ನು ಹುರಿದುಂಬಿಸದೆ ಬಳಸದಿರೋಣ.ಪರಿಸರ ಶುದ್ಧತೆ ಕಾಯ್ದುಕೊಳ್ಳೋಣಸಣ್ಣ ಸಣ್ಣ ಹೆಜ್ಜೆಗಳು, ದೊಡ್ಡ ಬದಲಾವಣೆ ತರುತ್ತವೆ.

ಪರಿಸರ ನಮ್ಮ ಆಧಾರ. ಅದನ್ನು ಉಳಿಸುವುದು ನಮ್ಮ ಧರ್ಮ. ನಾವಿಲ್ಲದಿದ್ದರೂ ಈ ಜಗತ್ತು ಸಾಗುತ್ತದೆ, ಆದರೆ ಪ್ರಕೃತಿ ಇಲ್ಲದಿದ್ದರೆ ನಾವು ಜೀವಿಸೋಕೆ ಸಾಧ್ಯವಿಲ್ಲ ಎಂದು ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ  ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ   ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಗೋಪಿಕಾ, ಜನಾರ್ದನ್ ನಾಯಕ್, ಸೇರಿದಂತೆ ಉಪನ್ಯಾಸಕರಾದ ಅರುಣ್ ರಾಜ್, ಸುಬ್ರಹ್ಮಣ್ಯ ಅಂಬಿಕಾ,ಸುಜಯ್ ನಾಡಿಗ್, ಸಬಾಸ್ಟಿನ್, ಇನ್ನಿತರರಿದ್ದರು.

Leave a Reply

Your email address will not be published. Required fields are marked *