BREAKING NEWS | ಕೆಂಚನಾಳ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ದಿಡೀರ್ ರಾಜಿನಾಮೆ!

BREAKING NEWS | ಕೆಂಚನಾಳ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ದಿಡೀರ್ ರಾಜಿನಾಮೆ!
ರಿಪ್ಪನ್ ಪೇಟೆ : ಇಲ್ಲಿನ ಕೆಂಚನಾಳ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ ಸಾಗರ ಉಪವಿಭಾಗ ಕಛೇರಿಗೆ ತೆರಳಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಂದು ಸಾಗರದ ಉಪವಿಭಾಗಧಿಕಾರಿ ಕಛೇರಿಯಲ್ಲಿ ಎಸಿ ರವರ ಅನುಪಸ್ಥಿತಿಯಲ್ಲಿ ಸಾಗರ ತಹಶೀಲ್ದಾರ್ ಮಂಜುಳಾ ಭಜಂತ್ರಿ ರವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಕೆಂಚನಾಲ ಗ್ರಾಮ ಪಂಚಾಯ್ತಿನ ಮೊದಲನೆ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರಮೇಶ್ ವಿರುದ್ದ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಗೆ 2023 ರ ಆಗಸ್ಟ್ 10 ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಬೇದುಲ್ಲಾ ಷರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಡಿಸೆಂಬರ್ ತಿಂಗಳಿನಲ್ಲಿ ಗ್ರಾಪಂ ಅವಧಿ ಮುಗಿಯುತಿದ್ದು ದಿಡೀರ್ ರಾಜೀನಾಮೆ ಸಲ್ಲಿಸಲು ನಿಖರವಾದ ಕಾರಣ ತಿಳಿದುಬಂದಿಲ್ಲ ಬಲ್ಲ ಮೂಲಗಳ ಪ್ರಕಾರ ಕೆಂಚನಾಳ ಗ್ರಾಪಂ ಕೆಂಚನಾಳ ವಾರ್ಡ್ ಸದಸ್ಯರಾದ ಮಹಮ್ಮದ್ ಷರೀಫ್ ರವರಿಗೆ ಅಧ್ಯಕ್ಷ ಹುದ್ದೆ ನೀಡುವಂತೆ ಸ್ಥಳೀಯ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಒತ್ತಾಯದ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಈ ಸಂಧರ್ಭದಲ್ಲಿ ಮುಖಂಡರಾದ ರಾಮಪ್ಪ , ಕೆ ಎಲ್ ವಿಜಯ್ , ಮಂಜುನಾಥ್ , ಕೃಷ್ಣೋಜಿರಾವ್ ಹಾಗೂ ಇನ್ನಿತರರಿದ್ದರು.