ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ – ಇಬ್ಬರ ಬಂಧನ | ಅಷ್ಟಕ್ಕೂ ಹುಂಚ ಕಲ್ಲುಕ್ವಾರೆಯಲ್ಲಿ ನಡೆದಿದ್ದೇನು..!!?
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿ ಕಲ್ಲು ಕ್ವಾರೆಯೊಂದರಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನ ಮಾರಣಾಂತಿಕ ಹಲ್ಲೆ ನಡೆದಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ನಡೆದಿದ್ದೇನು..!!?
ಹುಂಚ ವ್ಯಾಪ್ತಿಯ ಹೊಂಡಲಗದ್ದೆ ಕಲ್ಲು ಕ್ರಷರ್ ನಲ್ಲಿ ದಿನಾಂಕ 08-03-2025 ರಂದು ಸಂಜೆ ಸಮಯದಲ್ಲಿ ಕ್ರಷರ್ ಗೆ ಬೈಕ್ ನಲ್ಲಿ ಬಂದ ನಾಲ್ಕೈದು ಜನ ಕ್ಷುಲ್ಲಕ ವಿಚಾರಕ್ಕೆ ಕ್ರಷರ್ ನ ಕಾರ್ಮಿಕ ಪ್ರತೀಷ್ ಕುಮಾರ್ ಎಂಬಾತನ ಮೇಲೆ ರಾಡು ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಈ ಸಂಧರ್ಭದಲ್ಲಿ ಯಾರೋ ಕಿಡಿಗೇಡಿಗಳು ಕಟ್ಟಡದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ,ಮತ್ತೊಬ್ಬ ಕಬ್ಬಿಣದ ರಾಡ್ ಹಿಡಿದುಕೊಂಡು ಪ್ರತೀಷ್ ಕುಮಾರ್ ನನ್ನು ಕೊಲೆ ಮಾಡುವ ಉದ್ದೇಶದಿಂದ ತಲೆ ಗೆ ಹೊಡೆಯಲು ಯತ್ನಿಸಿದ್ದಾನೆ ಈ ಸಂಧರ್ಭದಲ್ಲಿ ಅವರು ತಪ್ಪಿಸಿಕೊಂಡಿದ್ದಾರೆ.
ನಂತರದಲ್ಲಿ ಅಲ್ಲಿದ್ದ ಕಾರ್ಮಿಕರು ಬಂದು ಗಲಾಟೆ ತಪ್ಪಿಸಿದ್ದಾರೆ ಇದೇ ಸಂಧರ್ಭದಲ್ಲಿ ಕಿಡಿಗೇಡಿಗಳು ಈ ಬಾರಿ ತಪ್ಪಿಸಿಕೊಂಡಿದ್ದೀಯಾ ಮುಂದಿನ ಬಾರಿ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಗಾಯಾಳು ಪ್ರತೀಷ್ ಕುಮಾರ್ ದೂರು ಸಲ್ಲಿಸಿದ್ದಾರೆ.ಪ್ರಕರಣ ದಾಖಲಾಗುತಿದ್ದಂತೆ ಕಾರ್ಯಪ್ರವೃತ್ತರಾದ ಪಿಎಸ್‌ಐ ಪ್ರವೀಣ್ ಎಸ್ ಪಿ ಮತ್ತು ಸಿಬ್ಬಂದಿಗಳ ತಂಡ ಇಬ್ಬರನ್ನು ಬಂಧಿಸಿದ್ದಾರೆ.ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.