ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬೇಳೂರು
ಮೃತ ರೈತನ ಮನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ
ಅರಣ್ಯ ಇಲಾಖೆಯವರು ಮಲೆನಾಡಿನ ಭಾಗದಲ್ಲಿನ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪವಿದ್ದು ಕೂಡಲೆ ನಿಮ್ಮ ನಡುವಳಿಕೆಯನ್ನು ಬದಲಾಯಿಸಿಕೊಂಡು ರೈತನಾಗರೀಕರಿಗೆ ಸಹಕರಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರಣ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತಲಿಜಡ್ಡು ಬಳಿ ಇತ್ತೀಚೆಗೆ ಡೈರಿಗೆ ಹಾಲುಹಾಕಿ ದ್ವಿಚಕ್ರವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಕಂದಕ್ಕೆ ಉರುಳಿ ಸಾವನ್ನಪ್ಪಿದ ರೈತ ದೇವೇಂದ್ರಪ್ಪನವರ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಆರ್ಥಿಕ ನೆರವು ನೀಡಿ ಅವಘಡದ ಸ್ಥಳಕ್ಕೆ ಭೇಟಿ ನೀಡಿ ಆರಣ್ಯಾಧಿಕಾರಿಗಳೊಂದಿಗೆ ಪರಿಶೀಲಸಿ ಮಾತನಾಡಿ ರಸ್ತೆ ಸರಿಯಿಲ್ಲದಿದ್ದರಿಂದಲೆ ರೈತ ಮೃತಪಟ್ಟಿದ್ದಾರೆ.ಎಂಬ ಆರೋಪ ಗ್ರಾಮಸ್ಥರರಲ್ಲಿದೆ.ಸಾಗುವಾನಿ ಮರಗಳ ಕಡಿತಲೆ ಪ್ರಕರಣದಲ್ಲಿ ಅಮಾಯಾಕರ ಬಿಟ್ಟು ಪ್ರಚೋದನೆ ನೀಡಿದ ಹಾಗೂ ನೈಜ ಅರೋಪಿಗಳ ವಿರುದ್ದ ತನಿಖೆ ನಡೆಸಿ ಪ್ರಕರಣ ದಾಖಲಿಸಿ ಕಾಡಾನೆಗಳ ಹಾವಳಿ ಬಗ್ಗೆಯುವ ಜನರಿಗೆ ಅತಂಕ ಮೂಡಿದ್ದು ನಿಮ್ಮ ಸಿಬ್ಬಂದಿಗಳೊಂದಿಗೆ ಪರಿಣತರನ್ನು ಕರೆಯಿಸಿಕೊಂಡು ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಎಂದು ಆರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ್‌ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿಹಾಲೇಶಪ್ಪ,ಕಂದಾಯ ನಿರೀಕ್ಷಕ ಆಪ್ರೋಜ್,ಸಿರಿಗೆರೆ ವಲಯ ಅರಣ್ಯಾಧಿಕಾರಿ ಅರವಿಂದ್,ಮುಗುಡ್ತಿ ವಲಯ ಅರಣ್ಯಾಧಿಕಾರಿ ಪವನಕುಮಾರ್,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡಹಾರೋಹಿತ್ತಲು,ನಾರಾಯಣಪ್ಪ,ಬೆಳ್ಳೂರು ಗ್ರಾಮ ಪಂಚಾಯ್ತಿ ಮಾಜಿ ಆಧ್ಯಕ್ಷ ಯೋಗೀಶ್, ಡಿ.ಈ.ಮಧುಸೂಧನ್,ಆಶೀಫ್ ಭಾಷಾ,ಉಂಡಗೋಡು ನಾಗಪ್ಪ,ಶ್ರೀಧರ, ಕಟ್ಟೆನಾಗಪ್ಪ,ಅವಡೆ ಶಿವಪ್ಪ,ಇನ್ನಿತರ ಹಲವರು ಹಾಜರಿದ್ದರು.