Ripponpete | ದೇಶಕ್ಕೆ ಒಳಿತಾಗಲಿ , ಸಿದ್ದರಾಮಯ್ಯ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ

Ripponpete | ದೇಶಕ್ಕೆ ಒಳಿತಾಗಲಿ , ಸಿದ್ದರಾಮಯ್ಯ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ

ರಿಪ್ಪನ್‌ಪೇಟೆ : ಪ್ರಧಾನಿ ನರೇಂದ್ರ ಮೋದಿಗೆ ಒಳಿತಾಗಲಿ ಹಾಗೂ ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಪ್ರಕರಣದಿಂದ ಹೊರಬರಬೇಕು, ಅವರು ಮತ್ತು ಅವರ ಕುಟುಂಬಕ್ಕೆ ಒಳಿತಾಗಬೇಕು ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ತಮ್ಮಡಿಕೊಪ್ಪ ಗ್ರಾಮದ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಒಳಿತಾಗಲಿ ಹಾಗೂ ಮುಡಾ ಪ್ರಕರಣದಿಂದ ಸಂಕಷ್ಟಗೊಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟದಿಂದ  ಪಾರಾಗಲಿ ಎಂದು ಪ್ರಾರ್ಥಿಸಿ ವಿಶೇಷವಾಗಿ ಶ್ರೀ ದುರ್ಗಾಹೋಮ ಹಾಗೂ ಶ್ರೀ ಗುರುವಿಗೆ ನವಕಲಶಾಭಿಷೇಕ ,ಕಲಾಹೋಮ ಗಳು ಶ್ರೀ ಕ್ಷೇತ್ರದ ಧರ್ಮದರ್ಶಿ ಪ್ರಕಾಶ್ ಇತರೆ ಭಕ್ತರೊಂದಿಗೆ ಸಂಪನ್ನಗೊಂಡಿತ್ತು.

ಇದೇ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ, ಸಂಸದ ಬಿ ವೈ ರಾಘವೇಂದ್ರ , ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ ಮಾಜಿ ಶಾಸಕರಾದ ಹರತಾಳು ಹಾಲಪ್ಪ ,ಕಿಮ್ಮನೆ ರತ್ನಾಕರ್ , ಕಾಗೋಡು ತಿಮ್ಮಪ್ಪ ಹಾಗೂ ಇನ್ನಿತರರ ಒಳಿತಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು‌

ಮಂಗಳವಾರ ಮಂದಾರ್ತಿಯ ವೆಂಕಟೇಶ್ ಮಯ್ಯ ರವರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಇದ್ದರು.

Leave a Reply

Your email address will not be published. Required fields are marked *