ಶಿವಮೊಗ್ಗ : ಕೂಡ್ಲಿಯಲ್ಲಿ ನೀರುಪಾಲಾಗಿದ್ದ ಹರೀಶ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.
ನೀರುಪಾಲಾದ ಹರೀಶ್ ಮೃತದೇಹ ಮೂರು ದಿನಗಳವರೆಗೆ ಪತ್ತೆಯಾಗಿರಲಿಲ್ಲ.ಸತತ ಶೋಧಕಾರ್ಯದ ಪರಿಣಾಮ ಇಂದು ಸಂಜೆ ಆತನ ಮೃತದೇಹ ಪತ್ತೆಯಾಗಿದೆ.
ಮಡಿಕೆ ಚೀಲೂರಿನ ಬಳಿ ಹರೀಶ್ ಮೃತದೇಹ ಪತ್ತೆಯಾಗಿದೆ.
ಭಾನುವಾರ ಪಿತೃಪಕ್ಷದ ಸ್ನಾನಕ್ಕೆ ಕೂಡಲಿಯ ಸಂಗಮಕ್ಕೆ ಬಂದಿದ್ದ ಬೀರೂರಿನ ಪಿನಿಯಾಚಾರ್ ಕುಟುಂಬದ ಹರೀಶ್ (24) ನೀರಿಗೆ ಇಳಿದಾಗ ಕೊಚ್ಚಿಹೋಗಿದ್ದನು.
ಮೃತದೇಹವನ್ನು ಅಗ್ನಿಶಾಮಕ ದಳದವರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ.