Headlines

ತೀರ್ಥಹಳ್ಳಿಯಲ್ಲಿ ಗುಂಡಿನ ಸದ್ದು : ನೊಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಸಾವು

ಬೇಟೆಯಾಡಲು ಹೋದವರಿಂದ ಹಾರಿದ ಗುಂಡೊಂದು ಮಾಜಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನನ್ನ ಬಲಿಪಡೆದಿದೆ.ಈ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿಯ‌ ನೊಣಬೂರು ಮತ್ತು ಅರಳಸುರಳಿ ಗ್ರಾಮ ಪಂಚಾಯಿತಿ ನಡುವಿನ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಬಂದಿದ್ದವರಿಂದ ಹಾರಿದ ಗುಂಡೊಂದು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ನಿಗೆ ತಗುಲಿದೆ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕಾಂತರಾಜು(38) ಎಂಬುವರು ಗುಂಡಿಗೆ ಬಲಿಯಾಗಿದ್ದಾರೆ. 12 ಜನರ ಗುಂಪೊಂದು ಬೆಟೆಯಾಡಲು ಹೋಗಿ ಮಿಸ್ ಫೈರ್ ಆಗಿ ಕಾಂತರಾಜು ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಗುಂಡು ಹಾರಿಸಿದ 12 ಜನರು ಯಾರು ಏನು ಎಂಬುದು ಇನ್ನೂ ಹೊರಬಂದಿಲ್ಲ. 

ಗೃಹ ಸಚಿವ ಆರಗ‌ಜ್ಞಾನೇಂದ್ರ ಗರ್ತಿಕೆರೆ ಶಾಲೆಯ ಕಾರ್ಯಕ್ರಮದಲ್ಲಿದ್ದು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ತೆರಳಿದ್ದಾರೆ. 

ಸ್ಥಳದಲ್ಲಿ ಮಾಧ್ಯಮದವರು ಫೋಟೊ ಹಾಗೂ ವೀಡಿಯೋ ತೆಗೆಯುವುದನ್ನ ನಿರ್ಬಂಧಿಸಿರುವುದರಿಂದ ಘಟನೆಯ ಬಗ್ಗೆ ಇನ್ನಷ್ಟು ಅನುಮಾನಗಳು ಮೂಡಿ ಬರುತ್ತಿದೆ.

ಇನ್ನೂ ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


Leave a Reply

Your email address will not be published. Required fields are marked *