ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಬ್ಯಾಡರ ಕೊಪ್ಪದ ರೈತ ಮರಿಯಪ್ಪ ಸಾವನ್ನಪ್ಪಿರುವ ದುರ್ದೈವಿ ರೈತ.
ಶುಂಠಿಗೆ ಹೊಡೆಯುವ ಕಳೆನಾಶಕವನ್ನು ಸೇವಿಸಿದ್ದ ಮರಿಯಪ್ಪ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಎಂಬತ್ತು ಸಾವಿರ ರೂಪಾಯಿ ಸಾಲ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಇವರ ಮಗ ಲಿಂಗರಾಜು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.