ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆಯ ಯುವ ಗಾನ ಪ್ರತಿಭೆ ಪ್ರಣತಿ ಅಣ್ಣಪ್ಪನವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸನ್ಮಾನಿಸಿ ಗೌರವಿಸಿದರು.
ತೀರ್ಥಹಳ್ಳಿಯಲ್ಲಿ ನಡೆದ ಶಬ್ದ ಟ್ರಸ್ಟ್ ನ ಹಾಗೂ ವಿದ್ಯಾ ಸಿರಿ ಸಂಸ್ಥೆ ಅವರ  ಸಹ ಯೋಗದೊಂದಿಗೆ ನಡೆದ 50 ಶಾಲೆಗಳಿಗೆ ನೋಟ್ ಬುಕ್ ವಿತರಣೆ ,ನುಡಿನಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಕ್ಕವಯಸ್ಸಿನಲ್ಲೇ ಅದ್ಭುತ ಸಾಧನೆ ತೋರಿದ ತನ್ನ ಕಂಠಸಿರಿಯಿಂದ ಗಾಯನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಂಗೀತ ಲೋಕದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ನಾಡಿನಾದ್ಯಂತ ಗಾನ ಸುಧೆಯನ್ನು ಹರಿಸಿ ಸಂಗೀತ ಪ್ರಿಯರಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಪ್ರತಿಭೆ ರಿಪ್ಪನ್ ಪೇಟೆಯ ಪ್ರಣತಿ ಅಣ್ಣಪ್ಪ ರವರನ್ನು ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ನಿನ್ನೆ ನಡೆದ ವಿದ್ಯಾಸಿರಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು. 
ನಮ್ಮೂರಿನ ಪ್ರತಿಭೆ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಉತ್ತುಂಗಕ್ಕೆ ಏರಲಿ ಎಂದು ಈ ಸಂದರ್ಭದಲ್ಲಿ ಗೃಹ ಸಚಿವರು ಶುಭ ಹಾರೈಸಿದರು. 
ಕುಮಾರಿ ಪ್ರಣತಿ ಅಣ್ಣಪ್ಪ ರಿಪ್ಪನ್ ಪೇಟೆಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಹಾಗೂ ಪ್ರವೀಣ್ ದಂಪತಿಗಳ ಪುತ್ರಿ ಯಾಗಿದ್ದಾರೆ. 
ಈ ಕಾರ್ಯಕ್ರಮದಲ್ಲಿ ಸಂಗೀತಪ್ರಿಯರು, ಶಬ್ದ ಟ್ರಸ್ಟ್ ನ ಪದಾಧಿಕಾರಿಗಳು, ರಾಜಕಾರಣಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
		 
                         
                         
                         
                         
                         
                         
                         
                         
                         
                        
