Headlines

ರಿಪ್ಪನ್‌ಪೇಟೆಯಲ್ಲಿ ನೂತನ ಕಿರಣ್ ಹೆಲ್ತ್ ಕೇರ್ ಪ್ರಾರಂಭ : ಲಕ್ಷಾಂತರ ಸಂಬಳ ತಿರಸ್ಕರಿಸಿ ಹುಟ್ಟೂರಲ್ಲೇ ಸೇವೆ ಸಲ್ಲಿಸಲು‌ ಮುಂದಾದ MBBS ವೈದ್ಯ

ರಿಪ್ಪನ್ ಪೇಟೆ: ಸಮಾಜದಲ್ಲಿನ ದುರ್ಬಲ ವರ್ಗದವರು ಮತ್ತು ಬಡವರ ಉತ್ತಮ ಆರೋಗ್ಯಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದೇನೆ ಎಂದು ಡಾ. ಕಿರಣ್ ಶಾಸ್ತ್ರಿ ಹೇಳಿದರು.
ರಿಪ್ಪನ್ ಪೇಟೆ ಪಟ್ಟಣ ವಿನಾಯಕ ವೃತ್ತದಲ್ಲಿ ನೂತನವಾಗಿ ಆರಂಭವಾಗಿರುವ ಕಿರಣ್ ಶಾಸ್ತ್ರಿ ಹೆಲ್ತ್ ಕೇರ್  ನಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ವೈದ್ಯಕೀಯ ವೃತ್ತಿಯು ಸಮಾಜದಲ್ಲಿ ಗೌರವಾನ್ವಿತ ವೃತ್ತಿಯಾಗಿದ್ದು, ಸಮಾಜದಲ್ಲಿನ ನಾಗರಿಕರಿಗೆ ಉತ್ತಮ ಆರೋಗ್ಯದ ಅರಿವನ್ನು ಮೂಡಿಸಲು ಈ ವೃತ್ತಿ ಸಹಕಾರಿಯಾಗಿದೆ ಎಂದ ಅವರು ರಿಪ್ಪನ್ ಪೇಟೆ ಪಟ್ಟಣದಲ್ಲಿ ಹುಟ್ಟಿ ಬೆಳೆದ ನಾನು ಪ್ರಾಥಮಿಕ ಶಿಕ್ಷಣವನ್ನು ರಿಪ್ಪನ್ ಪೇಟೆಯ ಶ್ರೀ ಬಸವೇಶ್ವರ ಕಾನ್ವೆಂಟ್ ನಲ್ಲಿ ಪಡೆದು  ವೈದ್ಯಕೀಯ ಪದವಿಯನ್ನು ಮಂಡ್ಯದ ಮೆಡಿಕಲ್ ಕಾಲೇಜಿನಲ್ಲಿ ಪಡೆದಿದ್ದೇನೆ.
ನನಗೆ ವಿದೇಶಗಳಲ್ಲಿ ಹಾಗೂ ನಗರ ಭಾಗಗಳಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಲು ದೊಡ್ಡ ದೊಡ್ಡ ನರ್ಸಿಂಗ್ ಹೋಂ ಗಳ ಮುಖ್ಯಸ್ಥರು ಲಕ್ಷಾಂತರ ಸಂಬಳದ ಅವಕಾಶವನ್ನು ನೀಡುತ್ತೇನೆ ಎಂದರು ಸಹ ನನಗೆ ಬಾಲ್ಯದಿಂದಲೇ ನನ್ನೂರು ರಿಪ್ಪನ್ ಪೇಟೆ ಜನತೆಯ ಸೇವೆ ಮಾಡಬೇಕು ಎನ್ನುವ ಆಸೆ ಇತ್ತು ಹಾಗೆಯೇ ಗ್ರಾಮೀಣ ಪ್ರದೇಶದ ಬಡ ಜನತೆಗೆ ಆರೋಗ್ಯ ಸೇವೆಯನ್ನು ನೀಡಬೇಕೆಂಬುವುದು ನನ್ನ ಅಜ್ಜ ಕೃಷ್ಣಯ್ಯ ಶಾಸ್ತ್ರಿರವರ ಅಭಿಲಾಷೆಯು ಕೂಡ ಆಗಿತ್ತು ಎಂದರು. 
ವೈದ್ಯಕೀಯ ಪದವಿ ಮುಗಿಸಿದ ನಂತರ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡಿದ್ದು. ನಂತರ ಸರ್ಕಾರಿ ವೃತ್ತಿಗೆ ರಾಜೀನಾಮೆ ನೀಡಿ ನನ್ನ ಬಾಲ್ಯದ ಅಭಿಲಾಷೆಯಂತೆ ತಂದೆಯವರ ಮನೋ ಇಚ್ಛೆಯಂತೆ ಗ್ರಾಮೀಣ ಭಾಗದ ನಾಗರಿಕರಿಗೆ ಹಾಗೂ ಬಡವರಿಗೆ ಉತ್ತಮ ವೈದ್ಯಕೀಯ ಸೇವೆಯನ್ನು ನೀಡಲು ರಿಪ್ಪನ್ ಪೇಟೆ ಪಟ್ಟಣದಲ್ಲಿ ಕಿರಣ್ ಶಾಸ್ತ್ರಿ ಹೆಲ್ತ್ ಕೇರ್  ಪ್ರಾರಂಭಿಸಿದ್ದೇನೆ ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಾ. ಕಿರಣ್ ಶಾಸ್ತ್ರಿಯವರ ತಂದೆ  ಜಿ.ಕೆ ಅನಂತ ಶಾಸ್ತ್ರಿಯವರು ಮಾತನಾಡಿ ರಿಪ್ಪನ್ ಪೇಟೆ ಪಟ್ಟಣದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯರುಗಳಲ್ಲಿ  ಎಂಬಿಬಿಎಸ್ ಪದವಿಯನ್ನು ಪಡೆದ ವೈದ್ಯರುಗಳು ಯಾರು ಇರಲಿಲ್ಲ. ನನ್ನ ಮಗ ಕಿರಣ್ ಶಾಸ್ತ್ರಿ ವೈದ್ಯಕೀಯ ಪದವಿಯನ್ನು ಪಡೆದು  ದೊಡ್ಡ ದೊಡ್ಡ ನಗರಗಳಲ್ಲಿ ಸೇವೆ ಮಾಡುವ ಅವಕಾಶಗಳು ಇದ್ದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಬಡಜನರ ಸೇವೆಗಾಗಿ ಮುಂದಾಗಿರುವುದು ನನಗೆ ಸಂತಸ ಮತ್ತು ಹೆಮ್ಮೆ ತಂದಿದೆ.  ಮುಂದಿನ ದಿನಗಳಲ್ಲಿ ಇವರ ಸೇವೆ ಪ್ರತಿಯೊಬ್ಬರಿಗೆ  ಸಿಗುವಂತಾಗಲಿ ಎಂದರು.
ಡಾ.ಕಿರಣ್ ಶಾಸ್ತ್ರೀಯವರ ಸಂದರ್ಶನದ ವೀಡಿಯೋ ಇಲ್ಲಿ ವೀಕ್ಷಿಸಿ👇

please subscribe our youtube channel “POSTMANNEWSKANNADA”—-

Leave a Reply

Your email address will not be published. Required fields are marked *