ವಸತಿ ಶಾಲೆಯ ಪ್ರಾಂಶುಪಾರ ವಿರುದ್ಧ ವಿದ್ಯಾರ್ಥಿಗಳು ದಿಡೀರನೇ ಸಾಗರ ತಾಲೂಕು ಕಚೇರಿಯ ಎದುರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಸಾಗರದಲ್ಲಿ ನಡೆದಿದೆ.
ಜೋಸೆಫ್ ನಗರದ ಅಟಲ್ ಬಿಹಾರಿ ವಾಜಪೇಯಿ ವಿದ್ಯಾರ್ಥಿನಿಲಯದ ಸುಮಾರು 60 ರಿಂದ 70 ಜನ ವಿದ್ಯಾರ್ಥಿಗಳು ಸುಮಾರು 10 ರಿಂದ 11-30 ರವರೆಗೆ ಸಾಗರ ತಾಲೂಕು ಕಚೇರಿ ಎದುರು ಬಂದು ದಿಡೀರನೇ ಪ್ರತಿಭಟನೆ ನಡೆಸಿದರು.
ವಸತಿ ಶಾಲೆಯ ಪ್ರಾಂಶುಪಾಲರಾದ ರತ್ನಮ್ಮರವರು ಹಾಸ್ಟೆಲ್ ವಾರ್ಡನ್ ಐಸಾಕ್ ಅಹ್ಮದ್ ಮೇಲೆ ಹಲ್ಲೆ ಮಾಡಿದ್ದಾರೆ. ಬೈಯ್ಯುತ್ತಾರೆ ಎಂಬ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಪ್ರಾಂಶುಪಾಲರನ್ನು ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ರವರು ಮಕ್ಕಳ ಸಮಸ್ಯೆಯನ್ನು ಆಲಿಸಿ ಈ ಸಮಸ್ಯೆಯನ್ನು ಬೆಳಿಗ್ಗೆ ಬಗೆಹರಿಸೋಣ. ರಾತ್ರಿಯ ಹೊತ್ತು ಹಾಸ್ಟೆಲ್ ನಿಂದ ತಾಲೂಕು ಕಚೇರಿಗೆ ಬರೋದು ಸೂಕ್ತವಲ್ಲವೆಂದು ಬುದ್ದಿಮಾತು ಹೇಳಿದ್ದಕ್ಕೆ ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ.
ಈ ಸಂಧರ್ಭದಲ್ಲಿ ಸಾಗರ ಉಪ ತಹಶೀಲ್ದಾರ್ ಪರಮೇಶ್ವರಪ್ಪ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದ್ದರು.