ತೀರ್ಥಹಳ್ಳಿ : ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಸರದಲ್ಲಿ ಮಂಡಗದ್ದೆ ಕ್ಯಾಂಪ್ ಮೀನುಗಾರರ ಮೇಲೆ ಕಳೆದ ಐದು ದಿನದ ಹಿಂದೆ ಹಲ್ಲೆ ನೆಡೆಸಿದ್ದ ನಿಹಾಲ್ ಕೋಬ್ರಾನಾ ಬಂಧನವಾಗಿದೆ.
ಇತ್ತೀಚಿಗೆ ಅನೇಕ ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ನಿಹಾಲ್ ಕೋಬ್ರಾ ಮತ್ತು ಅವನ ಸಹಚರರು ಮಂಡಗದ್ದೆ ಕ್ಯಾಂಪ್ ಯುವಕರ ಮೇಲೆ ಹಲ್ಲೆ ನೆಡೆಸಿ ಕಣ್ತಪ್ಪಿಸಿಕೊಂಡಿದ್ದರು.
ಕಳೆದ 5 ದಿನಗಳಿಂದ ಹಗಲು ರಾತ್ರಿ ನಿರಂತರವಾಗಿ ಕೋಬ್ರಾನಾ ಬೇಟೆಯಾಡಿದ ತೀರ್ಥಹಳ್ಳಿ ಪೊಲೀಸರು ಬೆಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ಓಡಾಡಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು, ತಲೆಮರೆಸಿಕೊಂಡು ತಿರುಗುತ್ತಿದ್ದ ಕೋಬ್ರಾ ಮತ್ತು ಆತನ ಸಹಚರರಾದ ರಾಹುಲ್,ಸಾಹಿಲ್ ಎಂಬ ಮೂವರಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.