ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು : ಹರತಾಳು ಹಾಲಪ್ಪ – ಗಣೇಶೋತ್ಸವದಲ್ಲಿ ಇರುವ ಐಕ್ಯತೆ ಕನ್ನಡ ಹಬ್ಬದಲ್ಲಿ ಯಾಕಿಲ್ಲ – ಕೆ ಎಸ್ ಪ್ರಶಾಂತ್|Ripponpet

ರಿಪ್ಪನ್‌ಪೇಟೆ : ಕನ್ನಡ ನಾಡು ನುಡಿ ಜಲ ಸಂಸ್ಕ್ರತಿಯನ್ನು ನಾಡಿನ ಪ್ರತಿಯೊಬ್ಬರು ಪ್ರೀತಿಸಿ ಬೆಳೆಸಿದಾಗ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳುತ್ತದೆ. ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಇಂದು ಪಟ್ಟಣದ ಭೂಫಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗರು ನಾಡು ನುಡಿ ಜಲ ಭಾಷೆಯ ರಕ್ಷಣೆಗೆ ಮುಂದಾಗಬೇಕು ಹಾಗೇಯೆ ಗೌರವಿಸಬೇಕು,ಭಾಷೆಗೆ ಗೌರವವನ್ನು ನೀಡಿದಾಗ ಅದು ಜನ ಸಮೂಹದಲ್ಲಿ ವೇಗವಾಗಿ ತನ್ನ ಭಾಷಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ರಾಜ್ಯ ಭಾಷೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುತ್ತದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಗರದ ಕೆ ಎಸ್ ಪ್ರಶಾಂತ್ ರಿಪ್ಪನ್‌ಪೇಟೆಯ ನಾಗರೀಕರು ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ ಸಮಾರಂಭಗಳನ್ನು ಆಯೋಜಿಸುವಾಗ ಜಾತಿ ಮತ ಪಂಥಗಳ ಭೇದಗಳ ಮರೆತು ಸದ್ಬಾವನೆಯಿಂದ ಎಲ್ಲರಲ್ಲೂ ಬೆರೆತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾರೆ. ಗಣೇಶ ಹಬ್ಬದಲ್ಲಿ ತೋರುವ ಐಕ್ಯತೆ ಈ ಬಾರಿ ಕನ್ನಡ ಹಬ್ಬದಲ್ಲಿ ತೋರದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜನಂದಿನಿ ಮಾತನಾಡಿ ಪರಭಾಷಿಕರೊಂದಿಗೆ ಕನ್ನಡ ಭಾಷೆಯನ್ನು ಮಾತನಾಡಿ ಅವರಿಗೂ ಭಾಷೆ ಕಲಿಯುವಂತೆ ಪ್ರೇರೆಪಿಸಬೇಕು ಎಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಹಾಗೂ ಗ್ರಾಪಂ ಸದಸ್ಯ ನಿರೂಪ್ ಕುಮಾರ್ ವಹಿಸಿದ್ದರು.

ಈ ಸಂಧರ್ಭದಲ್ಲಿ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್,ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ,ಜಿಪಂ ಮಾಜಿ ಸದಸ್ಯರುಗಳಾದ ಬಿ‌ ಪಿ ರಾಮಚಂದ್ರ ,ಎ ಟಿ ನಾಗರತ್ನ ,ಸಮಿತಿಯ ಪ್ರಮುಖರಾದ ಆರ್ ಟಿ ಗೋಪಾಲ್ , ಎನ್ ಸತೀಶ್ ,ಎಂ ಬಿ ಮಂಜುನಾಥ್ ,ಸುರೇಶ್ ಸಿಂಗ್‌ , ಯುವ ಉದ್ಯಮಿ ಪವನ್ ಶೆಟ್ಟಿ ಇದ್ದರು.
 
ಲೀಲಾ ಶಂಕರ್ ಸ್ವಾಗತಿಸಿ ,ಶಿಕ್ಷಕಿ ಅಂಬಿಕಾ ನಿರೂಪಿಸಿ ,ಕಲಾ ಕೌಸ್ತುಭ ಕನ್ನಡ ಸಂಘದ ಗೌರವಾಧ್ಯಕ್ಷೆ ಉಮಾ ಸುರೇಶ್ ವಂದನಾರ್ಪಣೆಯನ್ನು ಸಲ್ಲಿಸಿದರು.

ಈ ಸಮಾರಂಭದಲ್ಲಿ ಹರಟೆ ಕಾರ್ಯಕ್ರಮದ ರೂವಾರಿಗಳಾದ ರಿಚರ್ಡ್ ಲೋಹಿಸ್, ಕಿರ್ಲೋಸ್ಕರ್ ಸತ್ಯ, ಉಮೇಶ್ ಗೌಡ ಇವರಿಂದ ಹಾಸ್ಯೋತ್ಸವ  ಹಾಗೂ  ಕಾಮಿಡಿ ಕಿಲಾಡಿ ಪ್ರಖ್ಯಾತಿಯ ಕಲಾವಿದರಾದ ಮಂಥನಾ, ಸಿರುಂಡೆ ರಘು, ಸದಾ ಇವರಿಂದ  ಹಾಸ್ಯ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *