ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್ ಮತ್ತು ಆರ್ ಎಂ ಮಂಜುನಾಥ್ ಗೌಡ ನೇತೃತ್ವದ ಕಾಂಗ್ರೆಸ್ ಬಸ್ ಹತ್ತಲೂ ಕ್ಷೇತ್ರದಾದ್ಯಂತ ನೂಕುನುಗ್ಗಲು ಪ್ರಾರಂಭವಾಗಿದೆ.ಇಂದು ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.
ಕಾಂಗ್ರೆಸ್ ನ ತತ್ವ ಸಿದ್ದಾಂತ ಮತ್ತು ಕಿಮ್ಮನೆ ರತ್ನಾಕರ್ ಅವರ ನಾಯಕತ್ವವನ್ನು ಮೆಚ್ಚಿ ಪಟ್ಟಣದ ಯಡೇಹಳ್ಳಿಕೆರೆ ಬಾಲರಾಜ್ ಮತ್ತು ಅವರ 50 ಕ್ಕೂ ಹೆಚ್ಚು ಸ್ನೇಹಿತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಸಮೀಪದ ಕಚೇರಿಯಲ್ಲಿ, ಆಮ್ರಪಾಲಿ ಸುರೇಶ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ 50 ಕ್ಕೂ ಹೆಚ್ಚು ಮಂದಿ ಯುವಕರು ಈ ಬಾರಿ ಕಿಮ್ಮನೆ ರತ್ನಾಕರ್ ಅವರನ್ನು ಗೆಲ್ಲಿಸುವ ಪ್ರತಿಜ್ಞೆಮಾಡಿದರು.
ಈ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ , ಆಮ್ರಪಾಲಿ ಸುರೇಶ್, ಅಮರಾನಾಥ್ ಶೆಟ್ಟಿ, ಪೂರ್ಣೇಶ್ ಕೆಳಕೆರೆ, ಗಣಪತಿ, ವೈ ನಾಗೇಂದ್ರ, ಸುಜಿತ್ ಸೇರಿ ಹಲವರು ಉಪಸ್ಥಿತರಿದ್ದರು.