ವಿದ್ಯಾರ್ಥಿನಿಯೊಬ್ಬಳು SSLC ಪರೀಕ್ಷೆ ಬರೆದು ಹೋರಬಂದು, ತಂದೆ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ವೀಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್ ತಂದೆಯನ್ನು ಕಳೆದುಕೊಂಡ ದುರ್ದೈವಿಯಾಗಿದ್ದಾರೆ.
ಕೊಪ್ಪಳ ಮೂಲದ ವಿದ್ಯಾರ್ಥಿನಿ ಅರ್ಶಿಯಾ ಳ ತಂದೆ ಅಬಿದ್ ಪಾಷಾ. ಕಳೆದ ರಾತ್ರಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.ವಿಷಯ ತಿಳಿದ ಶಿಕ್ಷಕರು ರಾತ್ರಿಯೇ ವಿದ್ಯಾರ್ಥಿನಿಯನ್ನು ಕೊಪ್ಪಳಕ್ಕೆ ಕರೆದುಕೊಂಡು ಹೋಗಿ ಮೃತದೇಹದ ದರ್ಶನ ಮಾಡಿಸಿ ಇಂದು ಬೆಳಿಗ್ಗೆ ಪರೀಕ್ಷೆಯ ವೇಳೆಗೆ ಕರೆದುಕೊಂಡು ಬಂದಿದ್ದಾರೆ.
ನಂತರ ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮೂಲಕ ತಂದೆಯ ಶವ ಸಂಸ್ಕಾರ ವೀಕ್ಷಣೆಗೆ ಶಾಲೆಯ ಶಿಕ್ಷಕರು ಅನುವು ಮಾಡಿಕೊಟ್ಟಿದ್ದಾರೆ.
ಮೊಬೈಲ್ ನಲ್ಲಿ ತಂದೆಯ ಶವ ಸಂಸ್ಕಾರವನ್ನು ವೀಕ್ಷಿಸಿದ ವಿದ್ಯಾರ್ಥಿನಿ ಕಣ್ಣೀರಿಟ್ಟಾಗ ಸ್ನೇಹಿತೆಯರು ಸಂತೈಸುತಿದ್ದ ದೃಶ್ಯ ಮನಕಲುಕುವಂತೆ ಭಾಸವಾಗುತಿತ್ತು.
700 ಕಿಮೀ ದೂರ ಪ್ರಯಾಣಿಸಿ ಮೃತದೇಹದ ದರ್ಶನ ಮಾಡಿಸಿ ಮತ್ತೆ ಪರೀಕ್ಷೆ ಬರೆಯಲು ಸಹಕರಿಸಿದ ಶಿಕ್ಷಕರಿಗೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ.