Headlines

ರಿಪ್ಪನ್‌ಪೇಟೆ : ದಾಖಲಾತಿ ದುರುಪಯೋಗ ಆರೋಪ – ನವೋದಯ ಬ್ಯಾಂಕ್ ಮ್ಯಾನೇಜರ್ ವಿರುದ್ದ ದೂರು|Abuse of Enrollment

ರಿಪ್ಪನ್‌ಪೇಟೆ : ಇಲ್ಲಿನ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತಿದ್ದ ಮ್ಯಾನೇಜರ್ ಮಿಥುನ್ ವಿರುದ್ಧ ಬಟ್ಟೆಮಲ್ಲಪ್ಪ ನಿವಾಸಿ ಮಂಜುನಾಥ್ ಬ್ಯಾಣದ ಪೊಲೀಸ್ ಠಾಣೆಯಲ್ಲಿ ದಾಖಲಾತಿ ದುರುಪಯೋಗದ ವಿರುದ್ಧ ದೂರು ದಾಖಲಿಸಿದ್ದಾರೆ.




ಉದ್ದಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಮಂಜುನಾಥ್ ಬ್ಯಾಣದ ನವೋದಯ ವಿವಿದ್ದೋದ್ದೇಶ ಸೌಹಾರ್ಧ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಒಂದು ಲಕ್ಷ ರೂ ಎಫ್ ಡಿ ಇಟ್ಟು ತಮ್ಮ OD ಖಾತೆಯಲ್ಲಿ 1.5 ಲಕ್ಷ ರೂ.ಸಾಲ ಪಡೆದಿದ್ದರು.

2017 ರಲ್ಲಿ ಸಾಲ ಪಡೆದ ಬ್ಯಾಣದ ರವರು ಕೊರೋನ ವೇಳೆ ಸಾಲ ತೀರಿಸಲು ಕಷ್ಟವಾಗಿತ್ತು.  ಹಿಂದಿನ ಮ್ಯಾನಜರ್ ಅವರ ಚೆಕ್ ಮತ್ತು ಬರೆದುಕೊಟ್ಟಿದ್ದ ಪತ್ರಗಳನ್ನ ದುರುಪಯೋಗ ಪಡಿಸಿಕೊಂಡು ಅವರ ಓಡಿ ಸಾಲವನ್ನ 2.5 ಗೆ ಹೆಚ್ಚಿಸಿದ್ದು ಇವರ ದಾಖಲಾತಿಗಳನ್ನ ದುರುಪಯೋಗ ಪಡಿಸಿಕೊಂಡಿರುವುದಾಗಿ ಬ್ಯಾಣದ್ ಎಫ್ಐಆರ್ ನಲ್ಲಿ ಆರೋಪಿಸಿದ್ದಾರೆ.




ಸಾಲ ಪಡೆಯುವಾಗ ಬ್ಯಾಂಕ್ ನಲ್ಲಿಟ್ಟಿದ್ದ  ದಾಖಲಾತಿಯನ್ನ ವಾಪಾಸ್ ಕೇಳಿದರೂ ಈಗಿನ ಮ್ಯಾನೇಜರ್ ಕೊಡುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿದ್ದ ಇವರ ಪತ್ನಿ ಹೆಸರಿನಲ್ಲಿರುವ ಚೆಕ್ ನ್ನ ಬೌನ್ಸ್ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.



Leave a Reply

Your email address will not be published. Required fields are marked *