ಸಾಗರ-ಹೊಸನಗರ ಕ್ಷೇತ್ರಕ್ಕೆ ಬಿ.ಯುವರಾಜ್‌ರವರು ಬಿ.ಜೆ.ಪಿ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಸಭೆಯ ಚುನಾವಣೆಗೆ ಸ್ಪರ್ದಿಸುವುದಾಗಿ ತಿಳಿಸಿದ್ದಾರೆ.
ಅವರು ಹೊಸನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹಾಲಿ ಬಿ.ಜೆ.ಪಿ ಜಿಲ್ಲಾ ಸಮಿತಿ ಸದಸ್ಯರು ಹಾಲಿ ಜಿಲ್ಲಾ ಅಖಿಲ ಭಾರತ ವೀರಶೈವ ಮಾಹಾಸಭಾ ಕಾರ್ಯದರ್ಶಿಗಳು ಆಗಿದ್ದು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ತಾಲೂಕು ಬಿ.ಜೆ.ಪಿ. ಅಧ್ಯಕ್ಷರಾಗಿ, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ತಾಲೂಕ ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷರಾಗಿ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ನನಗೆ ಬಿಜೆಪಿ ಪಕ್ಷ ಇಲ್ಲಿಯವರೆಗೆ ಸರಿಯಾಗಿ ಗೌರವಯುತವಾಗಿ ನಡೆದುಕೊಂಡಿಲ್ಲ ಹಾಗೂ ಬಿಜೆಪಿ ಶಾಸಕ ಹರತಾಳು ಹಾಲಪ್ಪನವರು ಸೌಜನ್ಯಕ್ಕೂ ಗೌರವಿಸುತ್ತಿಲ್ಲ.
ನಾನು ಕಳೆದ ಮೂವತ್ತು ವರ್ಷಗಳಿಂದ ಮಲ್ಲವ ವೀರಶೈವರು ಸೊರಬ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಎಲ್ಲಾ ಚುನಾವಣೆಗಳಲ್ಲಿ ಬೆಂಬಲಿಸಿಕೊಂಡು ಬಂದಿದ್ದರೂ ಸಹ ಸಮಾಜದ ಯಾರೊಬ್ಬರಿಗೂ ವಿಧಾನಸಭೆಗಾಗಲಿ ವಿಧಾನ ಪರಿಷತ್‌ಗಾಗಲಿ ಯಾವುದೇ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿಯಾಗಲಿ ನೇಮಕ ಮಾಡದಿರುವದನ್ನು ಖಂಡಿಸಿ ಸಾಗರ ವಿಧಾನ ಸಭೆಗೆ ಸ್ಪರ್ಧಿಸಲು ಸಂಕಲ್ಪ ಮಾಡಿರುವುದಾಗಿ ಹಾಗೂ ಬಿಜೆಪಿಯ ಹಾಲಿ ಸದಸ್ಯರ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಯ ಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.