ರಿಪ್ಪನ್ಪೇಟೆ : ನೇಣಿಗೆ ಶರಣಾದ ಆಟೋ ಚಾಲಕ
ರಿಪ್ಪನ್ಪೇಟೆ;- ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಆಟೋ ಚಾಲಕ ವೆಂಕಟೇಶ್ (೫೩)ಎಂಬುವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೋವಿಡ್ ಮುಂಜಾಗ್ರತಾ ಚುಚ್ಚುಮದ್ದು ಪಡೆದ ನಂತರ ದೇಹದ ಎಡಭಾಗ ಸ್ವಾದೀನ ಕಳೆದುಕೊಂಡಿದ್ದು ಮಣಿಪಾಲ ಸೇರಿದಂತೆ ವಿವಿಧಡೆಯಲ್ಲಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಬುಧವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಕೊರಳೊಡಿದ್ದಾರೆ ಎಂದು ಕುಟುಂಬ ವರ್ಗದವರು ದೂರು ದಾಖಲಿಸಿದ್ದಾರೆ.
ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.