ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ|kimmane

ಶಿವಮೊಗ್ಗ : ಕಾಂಗ್ರೆಸ್ ಗ್ಯಾರೆಂಟಿಯ ಬಗ್ಗೆ ಮಾತನಾಡುವ ಮತ್ತು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಮೋದಿಯವರು ಅಧಿಕಾರ ಹಿಡಿಯುವಾಗ ನೀಡಿದ್ದ ಭರವಸೆಯಲ್ಲಿ  15 ಲಕ್ಷ ರೂ ಜನರ ಅಕೌಂಟ್ ಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆಯನ್ನ ನೀಡಿದ್ದರು. ಆದರೆ 9 ವರ್ಷದಿಂದ ಇದ್ಯಾವುದನ್ನು ಈಡೇರಿಸಿಲ್ಲ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು.




ಕೇಂದ್ರದ ಮೋದಿ ಸರ್ಕಾರವನ್ನು ವಿರೋಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಗರದ ಗಾಂಧಿ ಪಾರ್ಕ್ ನಲ್ಲಿ ಗಾಂಧಿ ಪ್ರತಿಮೆಯ ಕೆಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿ ಕಾಂಗ್ರೆಸ್ ಗ್ಯಾರೆಂಟಿ ವಿಚಾರವಾಗಿ ಬಿಜೆಪಿಯವರು ಡಿಸೆಂಬರ್ ತನಕ ಸುಮ್ಮನಿರಬೇಕಿತ್ತು. ಅಲ್ಲಿಯವರೆಗೆ ಯಾವುದೇ ಗ್ಯಾರೆಂಟಿಯನ್ನ ಈಡೇರಿಸದಿದ್ದರೆ ಪ್ರತಿಭಟನೆ ನಡೆಸಬೇಕಿತ್ತು. ಆದರೆ ಬಿಜೆಪಿ ಈಗ ಆತುರಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಕಳೆದ ಮೂರುವರೆ ವರ್ಷದಿಂದ ಉತ್ತಮ ಆಡಳಿತ ನಡೆಸದೆ ಭ್ರಷ್ಠಾಚಾರ ನೆಡೆಸಿ ಈಗ ಹತಾಶೆಯಾಗಿದೆ ಎಂದರು.


ಬಿಜೆಪಿ ಪ್ರಣಾಳಿಕೆಯಂತೆ 15 ಲಕ್ಷ ಕೊಟ್ರಾ, ಅಕ್ಕಿ ಕೊಟ್ರಾ, ಮನೆಯನ್ನ ಕೊಟ್ರಾ ಉದ್ಯೋಗ ಕೊಟ್ರಾ ಮೂರು ಗ್ರಾಂ ಬಂಗಾರ ಕೊಟ್ರಾ, ದೇಶ ಈಗ ಸುರಕ್ಷಿತವಾಗಿದೆಯಾ? ಎಂಬ ಪ್ರೆಶ್ನೆಗೆ ಇಲ್ಲ… ಇಲ್ಲ.. ಎಂದು ಪ್ರತಿಭಟನಾಕಾರರು ಕೂಗಿದರು.

ಪ್ರತಿಭಟನೆಯಲ್ಲಿ ಆರ್.ಎಂ.ಮಂಜುನಾಥ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಆರ್ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಹೆಚ್ ಎಂ ಯೋಗೀಶ್, ವಿಶ್ವನಾಥ್ ಕಾಶಿ ಮೊದಲಾದವರು ಉಪಸ್ಥಿತರಿದ್ದರು.





Leave a Reply

Your email address will not be published. Required fields are marked *