ಶಿವಮೊಗ್ಗ : ಮಂಡಗದ್ದೆ ರಸ್ತೆಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಓರ್ವರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಕೆಎ 14 ಪಿ 2982 ಕ್ರಮ ಸಂಖ್ಯೆಯ ಟಾಟಾ ಸಂಸ್ತೆಯ ಕಾರಿಗೆ ಸಕ್ರೇಬೈಲಿನ ಬಳಿಯ ತಿರುವಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ 11-7360 ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತ ನಡೆದ ಸ್ಥಳದಿಂದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿ ಇಬ್ಬರು ಇದ್ದಾರೆ ಎಂಬ ಮಾಹಿತಿ ಇದ್ದು ಅದರಲ್ಲಿ ಆಶಾ( 35) ಎಂಬುವರಿಗೆ ತಲೆಗೆ ಪೆಟ್ಟಾಗಿದೆ. ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಕಾರು ನುಜ್ಜುಗುಜ್ಜಾಗಿದೆ. ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.