Headlines

ಬೈಕ್‌ಗಳ ನಡುವೆ ಡಿಕ್ಕಿ – ರಸ್ತೆಗೆ ಬಿದ್ದ ಯುವತಿ ಮೇಲೆ ಬಸ್ ಹರಿದು ದಾರುಣ ಅಂತ್ಯ

ಬೈಕ್‌ಗಳ ನಡುವೆ ಡಿಕ್ಕಿ – ರಸ್ತೆಗೆ ಬಿದ್ದ ಯುವತಿ ಮೇಲೆ ಬಸ್ ಹರಿದು ದಾರುಣ ಅಂತ್ಯ

15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿಯ ದಾರುಣ ಸಾವು.!

ಬೈಕ್‌ಗಳ ನಡುವೆ ಡಿಕ್ಕಿ – ರಸ್ತೆಗೆ ಬಿದ್ದ ಯುವತಿ ಮೇಲೆ ಬಸ್ ಹರಿದು ದಾರುಣ ಅಂತ್ಯ

15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿಯ ದಾರುಣ ಸಾವು.!

ಶಿವಮೊಗ್ಗ ತಾಲ್ಲೂಕಿನ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆ ಮೇಲೆ ಬಿದ್ದ ಯುವತಿಯ ಮೇಲೆ ಖಾಸಗಿ ಬಸ್ ಹರಿದು, ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತರನ್ನು ದುಮ್ಮಳ್ಳಿ ತಾಂಡಾದ ಕವಿತಾ (27) ಎಂದು ಗುರುತಿಸಲಾಗಿದೆ. ಮನೆಯಿಂದ ಕೆಲಸಕ್ಕಾಗಿ ಶಿವಮೊಗ್ಗಕ್ಕೆ ಅಣ್ಣನೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದು, ಕವಿತಾ ಹಾಗೂ ಅಣ್ಣ ರಸ್ತೆ ಮೇಲೆ ಬಿದ್ದರು. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಕವಿತಾಳ ಮೇಲೆ ಹರಿದುಕೊಂಡು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಿಯಂತ್ರಣ ತಪ್ಪಿದ ಆಕೆಯ ಸಹೋದರ ಫುಟ್ ಬಾತ್ ಮೇಲೆ ಬಿದ್ದರೆ , ಆಕೆ ರಸ್ತೆಗೆ ಬಿದ್ದಿದ್ದಾಳೆ. ಪರಿಣಾಮ ವೇಗವಾಗಿ ಬರುತ್ತಿದ್ದ ಸಿಟಿ ಬಸ್ ಆಕೆಯ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಕವಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದು, ಮದುವೆಯ ಸಂಭ್ರಮದಲ್ಲಿದ್ದ ಕವಿತಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.