ಅರಸಾಳು ಮಾಲ್ಗುಡಿ , ಅಮ್ಮನಘಟ್ಟ , ಗುಳುಗುಳಿಶಂಕರ ಸೇರಿದಂತೆ ಈ ಸ್ಥಳಗಳು ಅಧಿಕೃತ ಪ್ರವಾಸಿ ತಾಣಗಳು – ರಾಜ್ಯ ಸರ್ಕಾರ ಘೋಷಣೆ
ರಾಜ್ಯ ಸರ್ಕಾರದ ಹೊಸ ಪ್ರವಾಸೋದ್ಯಮ ನೀತಿ 2024–29ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ 64 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಿ ಅಧಿಕೃತ ಘೋಷಣೆ ಮಾಡಲಾಗಿದೆ.ರಿಪ್ಪನ್ ಪೇಟೆ ಸಮೀಪದ ಮಾಲ್ಗುಡಿ ಮ್ಯೂಸಿಯಂ , ಗುಳುಗುಳಿಶಂಕರ , ಅಮ್ಮನಘಟ್ಟ ದೇವಸ್ಥಾನ ಸೇರಿದಂತೆ ಮಲೆನಾಡಿನ ಸೊಬಗುಳ್ಳ ತಾಣಗಳು ಶೀಘ್ರದಲ್ಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುವ ನಿರೀಕ್ಷೆಯಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ , ಹೊಸನಗರ ತಾಲ್ಲೂಕಿನ 25 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಸರ್ಕಾರ ಘೋಷಿಸಿದೆ. ಈ ನೀತಿಯಡಿ ಅಭಿವೃದ್ದಿಗೆ ಅನುದಾನ ಬಳಕೆಗೂ ಸೂಚಿಸಿದೆ.
ಇವುಗಳಲ್ಲಿ ಶಿವಮೊಗ್ಗ ಜಿಲ್ಲೆಯ 64 ಸ್ಥಳಗಳು ಸೇರಿದ್ದರೇ, ಸಾಗರ ತಾಲ್ಲೂಕಿನ 15, ಸೊರಬ ತಾಲ್ಲೂಕಿನ 4 ,ಹೊಸನಗರ ತಾಲೂಕಿನ 06 ಸೇರಿದೆ. ಇವುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಅನುದಾನ ಲಭ್ಯತೆಯ ಅನುಸಾರ ವಿವರವಾದಂತ ಕ್ರಿಯಾಯೋಜನೆಯನ್ನು ರೂಪಿಸೋದಕ್ಕೆ ತಿಳಿಸಿದೆ.
ಅಂದಾಜು ಪಟ್ಟಿ, ನಕ್ಷೆಗಳನ್ನು ಸಿದ್ಧಪಡಿಸಿ, ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ, ಟೆಂಡರ್ ಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವಂತೆಯೂ ಸೂಚಿಸಿದೆ.
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಹೊಸನಗರ ತಾಲ್ಲೂಕಿನ ಸ್ಥಳಗಳು
ಅಮ್ಮನಘಟ್ಟ ದೇವಸ್ಥಾನ
ಮಾಲ್ಗುಡಿ ಮ್ಯೂಸಿಯಂ ಅರಸಾಳು
ಗುಳುಗುಳಿ ಶಂಕರ
ನಗರ ಕೋಟೆ
ಸಾವೇಹಕ್ಲು ಡ್ಯಾಂ
ಕೊಡಚಾದ್ರಿ
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸೊರಬದ ಸ್ಥಳಗಳು
ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ
ಬಂಗಾರಧಾಮ
ಕೈತಭೇಶ್ವರ ಕೋಟಿಪುರ ದೇವಸ್ಥಾನ
ಗುಡವಿ ಪಕ್ಷಿಧಾಮ
ಹೀಗಿವೆ ಪ್ರವಾಸಿ ತಾಣಗಳಾಗಿ ಘೋಷಿಸಿದ ಸಾಗರ ತಾಲ್ಲೂಕಿನ ಸ್ಥಳಗಳು
ಜೋಗ ಜಲಪಾತ
ಸಿಗಂದೂರು ಚೌಡೇಶ್ವರಿ ದೇವಸ್ಥಾನ
ವರದಹಳ್ಳಿ ಶ್ರೀ ಶೀಧರ ಸ್ವಾಮಿ ಆಶ್ರಮ
ಬಳೆ ಪದ್ಮಾವತಿ ದೇವಸ್ಥಾನ ವಡಂಬೈಲು
ಇಕ್ಕೇರಿ ಅಘೋರೇಶ್ವರ ದೇವಸ್ಥಾನ
ಕಾನೂರು ಕೋಟೆ
ಹೊನ್ನೆಮರಡು ಜಲಕ್ರೀಡೆ
ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನ
ಕೂಗಾರು ಭೀಮೇಶ್ವರ ದೇವಸ್ಥಾನ, ಸಾಗರ
ಶ್ರೀ ಉಮಾ ಮಹೇಶ್ವರ ದೇವಸ್ಥಾನ, ಹೊಸಗುಂದ
ವರದಾಮೂಲ, ವರದ ನದಿ ಜನ್ಮಸ್ಥಳ
ಲಿಂಗನಮಕ್ಕಿ ಜಲಾಶಯ
ನಾಡಕಲಸಿ ನೀಲಕಂಠೇಶ್ವರ ದೇವಸ್ಥಾನ
ಹೆಗ್ಗೋಡು ನೀನಾಸಂ
ಕೆಳದಿ ರಾಮೇಶ್ವರ ದೇವಸ್ಥಾನ