Headlines

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು

ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಕೆಳಗೆ ಬಿದ್ದ ಮಂಜಯ್ಯ ನವರಿಗೆ ತೀವ್ರ ರಕ್ತಸ್ರಾವವಾಗಿತ್ತು ಕೂಡಲೇ ಸ್ಥಳೀಯರು ಆಟೋ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಅಷ್ಟರಲ್ಲಾಗಲೇ ಮಂಜಯ್ಯ ನವರ ಪ್ರಾಣಪಕ್ಷಿ ಹಾರಿಹೋಗಿತ್ತು.ಘಟನೆಯಲ್ಲಿ ಇನ್ನೊಂದು ಬೈಕ್ ನ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ

ರಿಪ್ಪನ್ ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರ ಸಮೀಪದಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ  ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅರಸಾಳು ಗ್ರಾಮದ ನಿವಾಸಿ ಮಂಜಯ್ಯ ಟಿ(59) ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಕೊಟೇತಾರಿಗ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದ ಟಿ ಮಂಜಯ್ಯ ಮೂಲತಃ ಹರಮಘಟ್ಟ ಗ್ರಾಮದವರು.

ನಡೆದಿದ್ದೇನು..!??

ಶಾಲೆಯ ಕರ್ತವ್ಯ ಮುಗಿಸಿಕೊಂಡು ರಿಪ್ಪನ್ ಪೇಟೆಯಿಂದ ಅರಸಾಳು ಕಡೆಗೆ ತೆರಳುತಿದ್ದ ಮಂಜಯ್ಯ ರವರ ಸ್ಟಾರ್ ಸಿಟಿ ಬೈಕ್ ( KA14 Z 6775) ಬೈಕ್ ಗೆ ಎದುರಿನಿಂದ ಬಂದ ಹಿರೋ ಹೋಂಡಾ ಸ್ಪೆಂಡರ್ (KA15 V 0159) ಬೈಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಕೆಳಗೆ ಬಿದ್ದ ಮಂಜಯ್ಯ ನವರಿಗೆ ತೀವ್ರ ರಕ್ತಸ್ರಾವವಾಗಿತ್ತು ಕೂಡಲೇ ಸ್ಥಳೀಯರು ಆಟೋ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಅಷ್ಟರಲ್ಲಾಗಲೇ ಮಂಜಯ್ಯ ನವರ ಪ್ರಾಣಪಕ್ಷಿ ಹಾರಿಹೋಗಿತ್ತು.ಘಟನೆಯಲ್ಲಿ ಇನ್ನೊಂದು ಬೈಕ್ ನ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತದೇಹವನ್ನು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

ಸ್ಥಳಕ್ಕೆ ರಿಪ್ಪನ್ ಪೇಟೆ ಪಿಎಸ್‌ಐ ರಾಜುರೆಡ್ದಿ ಹಾಗೂ ಸಿಬ್ಬಂದಿಗಳು ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೆಲ್ಮೆಟ್ ಇದ್ದರೂ ಧರಿಸದೇ ಜೀವಕ್ಕೆ ಕುತ್ತು ತಂದುಕೊಂಡ ಮಂಜಯ್ಯ ಮಾಸ್ಟರ್

ಬೈಕ್ ಚಲಾಯಿಸುವಾಗ ಯಾವಾಗಲೂ ಹೆಲ್ಮೆಟ್ ಧರಿಸುವ ಶಿಕ್ಷಕ ಮಂಜಯ್ಯ ನವರು ಇಂದು ಹೆಲ್ಮೆಟ್ ಧರಿಸದೇ ಇದ್ದ ಕಾರಣ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.ಒಂದು ವೇಳೆ ಘಟನೆ  ನಡೆಯುವಾಗ ಹೆಲ್ಮೆಟ್ ಧರಿಸದೇ ಮಿರರ್ ಗೆ ಸಿಲುಕಿಸಿಕೊಂಡಿದ್ದಾರೆ ಒಂದು ವೇಳೆ ಹೆಲ್ಮೆಟ್ ಧರಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲವೇನೋ..

ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ :

ಅಪಘಾತ ಸಂಭವಿಸಿದಾಗ ಹೆಲ್ಮೆಟ್ ಇಲ್ಲದಿದ್ದರೆ ತಲೆಗೆ ತೀವ್ರ ಪೆಟ್ಟಾಗಿ ಪ್ರಾಣಕ್ಕೆ ಅಪಾಯವಾಗಬಹುದು. ಮಿರರ್‌ಗೆ ಸಿಲುಕಿಸಿದ ಹೆಲ್ಮೆಟ್ ಯಾವುದೇ ಕಾರಣಕ್ಕೂ ನಿಮ್ಮ ಪ್ರಾಣ ರಕ್ಷಿಸುವುದಿಲ್ಲ, ಕೆಲವು ಬಾರಿ ಮಿರರ್‌ಗೆ ಸಿಲುಕಿಸಿದ ಹೆಲ್ಮೆಟ್ ಸಡಿಲವಾಗಿ ಬಿದ್ದು, ಹಿಂಬದಿಯಿಂದ ಬರುವ ವಾಹನ ಸವಾರರಿಗೆ ತೊಂದರೆಯಾಗಬಹುದು. ಹೆಲ್ಮೆಟ್ ಧರಿಸುವುದು ನಿಮ್ಮ ಸುರಕ್ಷತೆಗಾಗಿ. ನಿಮ್ಮ ಜೀವದ ಮೌಲ್ಯವನ್ನು ಅರಿತುಕೊಳ್ಳಿ.ನೆನಪಿಡಿ, ಹೆಲ್ಮೆಟ್ ಎಂಬುದು ಕೇವಲ ದಂಡ ತಪ್ಪಿಸಿಕೊಳ್ಳುವ ಸಾಧನವಲ್ಲ, ಅದು ನಿಮ್ಮ ಜೀವ ಉಳಿಸುವ ರಕ್ಷಾಕವಚ. ಜವಾಬ್ದಾರಿಯುತ ಚಾಲಕರಾಗಿ, ನಿಮ್ಮ ಮತ್ತು ಇತರರ ಸುರಕ್ಷತೆಗೆ ಆದ್ಯತೆ ನೀಡಿ. ಸುರಕ್ಷಿತವಾಗಿ ಚಲಾಯಿಸಿ, ಜೀವ ಉಳಿಸಿ.