ಮಾರುತಿಪುರ , ಚಂದಾಳದಿಂಬದಲ್ಲಿ ಭಾರಿ ಮಳೆಗೆ ಮನೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು
ರಿಪ್ಪನ್ಪೇಟೆ : ಬಾಳೂರು ಗ್ರಾಪಂ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪದ ಚೆಂದಾಳದಿಂಬದಲ್ಲಿ ಹಾಗೂ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹೊಸಕೆಸರೆ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕರ ಪರವಾಗಿ ಆರ್ಥಿಕಾ ನೆರವು ನೀಡಲಾಗಿದೆ.
ಚೆಂದಾಳದಿಂಬ ಗ್ರಾಮದ ಅಮರ್ ಸಿಂಗ್ ಎಂಬುವವರ ಮನೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತ ಕಂಡಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ ಕೆಸರೆ ಗ್ರಾಮದ ಹೆಗ್ಗೆಬೈಲು ವೇದಾವತಿ ಅವರ ಮನೆ ಬಾರಿ ಮಳೆಯಿಂದಾಗಿ ಹಾನಿಗೆ ತುತ್ತಾಗಿತ್ತು. ಸ್ಥಳಕ್ಕೆ ಬೇಟಿ ನೀಡಿ ಹೆಗ್ಗೆಬೈಲು ವೇದಾವತಿ ಕುಟುಂಬದವರಿಗೆ ಸಾಂತ್ವನ ಹೇಳಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಲಾಯಿತು.
ನಂತರ ಮಾತನಾಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು  ಹೊಸನಗರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಲ್ಲಿ ವ್ಯಾಪಕ ಹಾನಿಯಾಗಿದೆ. ಬಡವರು ರಾತ್ರಿ ಬೆಳಗಾಗುವುದರೊಳಗೆ ನಿರ್ಗತಿಕರಾಗಿದ್ದಾರೆ. ಬಡ ಸಂತ್ರಸ್ಥರನ್ನು ಗುರುತಿಸಿ ನೈತಿಕ ಸ್ಥೈರ್ಯ ನೀಡುವ ಸಲುವಾಗಿ ಶಾಸಕರ ಪರ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಿದಂಬರ್ ಮಾರುತಿಪುರ, ಗ್ರಾಮ ಪಂಚಾಯತ್ ಸದಸ್ಯ ಇಂದ್ರೇಶ್ , ಪಿಡಿಒ ಜಾನ್ ಡಿಸೋಜ, ಸುದೀಪ್ ಬಿ.ಸಿ, ಚೇತನ್ ದಾಸ್ ಹೊಸಮನೆ ಇನ್ನಿತರರು ಉಪಸ್ಥಿತರಿದ್ದರು.
		 
                         
                         
                         
                         
                         
                         
                         
                         
                         
                        

