ವೈದ್ಯರಿಲ್ಲದ ಜಗತ್ತು ಊಹಿಸಲು ಅಸಾಧ್ಯ – ಪಿಎಸ್‌ಐ ನಿಂಗರಾಜ್ ಕೆ ವೈ
ವೈದ್ಯರು ಎಂದರೆ ಜೀವ ಉಳಿಸುವ ದೇವರಿದ್ದಂತೆ. ಸತತ ಪರಿಶ್ರಮ ಮತ್ತು ದಣಿವರಿಯದ ಕಾರ್ಯ ತತ್ಪರತೆಗೆ ಮತ್ತೊಂದು ಹೆಸರೇ ವೈದ್ಯರು. ಅವರಿಲ್ಲದ ಜಗತ್ತನ್ನು ಉಹಿಸಿಕೊಳ್ಳಲು ಅಸಾಧ್ಯ ಎಂದು ಪಿಎಸ್‌ಐ ನಿಂಗರಾಜ್ ಕೆ ವೈ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಆಲದಕಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ವೈದ್ಯರುಗಳಿಗೆ ಸನ್ಮಾನಿಸಿ ನಂತರ ಮಾತನಾಡಿ, ಪ್ರತಿ ವರ್ಷ ಜು.1ರಂದು ಹೆಸರಾಂತ ವೈದ್ಯ, ಶಿಕ್ಷಣ ತಜ್ಞ, ಸ್ವಾತಂತ್ರೃ, ಹೋರಾಟಗಾರ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಡಾ.ಬಿ.ಸಿ.ರಾಯ್ ಜನ್ಮದಿನ. ಅವರ ಗೌರವಾರ್ಥ ದೇಶದ ವಿವಿಧಡೆ ಜನ ಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಪರಿಶ್ರಮವನ್ನು ಈ ದಿನ ಗೌರವಿಸಲಾಗುತ್ತದೆ ಎಂದರು.
ಕೊರೊನಾ ದೇಶವನ್ನು ಆವರಿಸಿದಾಗ ವೈದ್ಯರ ಪ್ರಾಮುಖ್ಯತೆ ಹಿಂದೆಂದಿಗಿಂತಲೂ ಹೆಚ್ಚು ಚೆನ್ನಾಗಿ ಮನವರಿಕೆ ಆಯಿತು. ಪ್ರತಿಯೊಬ್ಬರೂ ವೈದ್ಯರನ್ನು ಪ್ರೀತಿಸಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು. ಅಂತೆಯೇ ಪ್ರತಿ ವೈದರೂ ಡಾ.ಬಿ.ಸಿ.ರಾಯ್ ಅವರ ಆದರ್ಶ, ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಗ್ಗಾವಿ ತಾಲೂಕಿನ ಬಂಕಾಪುರದ ಆಲದಕಟ್ಟಿ ಸಮುದಾಯ ಆರೋಗ್ಯ ಕೇಂದ್ರದವರು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಂಜೀವಿನಿ ಅಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇರೀತಿ ಸತತವಾಗಿ ಮುರುಬಾರಿ ಕಾಯಕಲ್ಪಪ್ರಶಸ್ತಿ ಹಾಗೂ ಸ್ವಚ್ಚ ಭಾರತ ರತ್ನ ಪ್ರಶಸ್ತಿ ಕೂಡಾ ದೊರಕಿದೆ.ಸುತ್ತಮುತ್ತಲಿನ ಜನರು ಪಾಲಿಗೆ ಆಲದಕಟ್ಟಿ ಸಮುದಾಯ ಆರೋಗ್ಯ ಕೇಂದ್ರ ಎಂದರೆ ಅಚ್ಚು ಮೆಚ್ಚು ಇಲ್ಲಿಗೆ ತೆರಳಿ ಚಿಕಿತ್ಸೆ ಪಡೆದಲ್ಲಿ ರೋಗ ಗುಣಮುಖ ಎಂಬುದು ಸಾಬೀತಾಗಿರುವ ಸತ್ಯ. ಅಷ್ಟರ ಮಟ್ಟಿಗೆ ಇಲ್ಲಿನ ವೈದ್ಯರು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಮನೆ ಮಾತಾಗಿದ್ದಾರೆ. ಇವರು ಸಂಪನ್ಮೂಲ ಬಳಸಿಕೊಂಡು ರೋಗಿಗಳನ್ನು ಗುಣಪಡಿಸಿ ಕಳಿಸುವ ವೈದ್ಯರು ಪ್ರೀತಿ ಚಿಕಿತ್ಸೆಗೆ ಜನರಲ್ಲಿ ದುಗುಡ ಭಯ ಮಾಯವಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳು ಎಂದರೆ ಸರಿಯಾದ ಚಿಕಿತ್ಸೆ ಹಾಗೂ ಆರೈಕೆ ಸಿಗಲ್ಲ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸಲ್ಲ ಎಂದು ಮೂಗು ಮುರಿಯುವ ಜನರ ಮಧ್ಯದಲ್ಲಿ ಪಟ್ಟಣದ ಆಸ್ಪತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಚಿಕಿತ್ಸೆ ಪಡೆಯಲು ಬರುತ್ತಾರೆ ಎಂದರೆ ಇಲ್ಲಿನ ವೈದ್ಯರು ನೀಡುತ್ತಿರುವ ಚಿಕಿತ್ಸೆ ಹಾಗೂ ಸೇವೆ ಅನನ್ಯವಾಗಿದೆ. ಯಾರಲ್ಲೂ ಬೇದ ಭಾವ ಮಾಡದೆ ಪ್ರತಿಯೊಬ್ಬ ರೋಗಿಯನ್ನು ಸಹ ಅತ್ಯಂತ ಪ್ರೀತಿ,ಕಾಳಜಿ,ಮಮತೆಯಿಂದ ಆರೈಕೆ ಮಾಡುವ ವೈದ್ಯರು ಹಾಗೂ ಸಿಬ್ಬಂದಿ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.
ಈ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆರಕ್ಷಕ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.
ವರದಿ: ನಿಂಗರಾಜ್ ಕೂಡಲ
ಹಾವೇರಿ ಜಿಲ್ಲೆ ಬಂಕಾಪುರ.