ಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನೀರುಪಾಲು | Youth drowned in water

ಭದ್ರಾ ಹಿನ್ನೀರಿನಲ್ಲಿ ಮೂವರು ಯುವಕರು ನೀರುಪಾಲು | Youth drowned in water

ಭದ್ರಾ ಹಿನ್ನೀರಿನಲ್ಲಿ ಮುಳುಗಿ ಮೂವರು ನೀರು ಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ(N.R Pura) ತಾಲೂಕಿನ ಬೈರಾಪುರ ಗ್ರಾಮದ ಬಳಿ ನಡೆದಿದೆ. 

ತೆಪ್ಪದಲ್ಲಿ ಮೂವರು ಯುವಕರು ಭದ್ರಾ ಹಿನ್ನೀರಿನಲ್ಲಿ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದ್ದು, ನಾಪತ್ತೆಯಾದವರು ಶಿವಮೊಗ್ಗ ಮೂಲದ ಅಫ್ದಾಖಾನ್, ಆದೀಲ್ ಹಾಗೂ ಸಾಜೀದ್ ಎಂದು ತಿಳಿದುಬಂದಿದೆ. 

ಇದೀಗ ಎನ್.ಆರ್ ಪುರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *