Ripponpete | ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಹತ್ತಾರು ತೆಂಗಿನ ಗಿಡಗಳನ್ನು ಕಡಿದ ಕಿಡಿಗೇಡಿಗಳು – ದೂರು ದಾಖಲು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವರ ತೋಟದಲ್ಲಿ 10ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿ ದುಷ್ಖೃತ್ಯ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೋಟದ ಮಾಲೀಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ
ವಡಾಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮಮ್ಮ ಕೋಂ ಗೋಪಾಲ ರವರ ತೋಟದ ಮಧ್ಯ ಮತ್ತು ಅಂಚುಗಳಲ್ಲಿ ತೆಂಗಿನ ಮರಗಳನ್ನು ಕಡಿಯಲಾಗಿದೆ. ತೋಟದ ಅಂಚಿನಲ್ಲಿ ಮನೆ ಇದ್ದು ಬುಧವಾರ ತಡರಾತ್ರಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ವಡಾಹೊಸಳ್ಳಿ ಗ್ರಾಮದ ಸ.ನಂ.28ರಲ್ಲಿ 1-20 ಎಕರೆ ಜಮೀನನ್ನು ಸುಮಾರು ವರ್ಷಗಳಿಂದ ಬಗಹುಕುಂ ಸಾಗುವಳಿ ಮಾಡುತ್ತಿರುವ ಲಕ್ಷ್ಮಮ್ಮ ಸದರಿ ಜಮೀನಿಗೆ ಸುತ್ತಲು ಕಲ್ಲು ಕಂಬದ ಬೇಲಿ ನಿರ್ಮಿಸಿದ್ದಾರೆ. ಸದರಿ ಜಮೀನಿನ ಮಂಜೂರಾತಿಗಾಗಿ ಈ ಹಿಂದೆಯೇ ಫಾರಂ 53ಯಡಿ ಅರ್ಜಿ ಸಲ್ಲಿಸಿದ್ದಾರೆ. ದಿನಾಂಕ:29-05-2024ರಂದು ಮದ್ಯರಾತ್ರಿ ಸುಮಾರು 2-00 ಗಂಟೆಗೆ ಕಿಡಿಗೇಡಿಗಳು ಮದ್ಯರಾತ್ರಿ ಸುಮಾರು 2-00 ಗಂಟೆಗೆ ಮಾಲೀಕರು ಮಲಗಿರುವ ವೇಳೆಯಲ್ಲಿ ಹತ್ತು ತೆಂಗಿನ ಗಿಡಗಳನ್ನು ಕಿತ್ತು ಕಡಿದು ಹಾಕಿರುತ್ತಾರೆ.
ಈ ಬಗ್ಗೆ ಅದೇ ಗ್ರಾಮದ ಐವರ ಮೇಲೆ ತೋಟದ ಮಾಲೀಕರು ದೂರು ಸಲ್ಲಿಸಿದ್ದಾರೆ,ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.