Ripponpete | ಧರ್ಮ ಜಾಗೃತಿಗಾಗಿ ಶ್ರೀಶೈಲ ಜಗದ್ಗುರು ನಡಿಗೆ ಮಲೆನಾಡ ಕಡೆಗೆ
ರಿಪ್ಪನ್‌ಪೇಟೆ: ಗುರು-ವಿರಕ್ತವರ್ಗ ಬೇರೆಬೇರೆ ಎಂಬ ಭಾವನೆ ಸರಿಯಾದುದಲ್ಲ. ಗುರು-ವಿರಕ್ತ ಪರಂಪರೆ ಒಂದೇ ಆಗಿದ್ದು, ಸಮಾಜದ ಧಾರ್ಮಿಕ ಭಾವನೆಗೆ ಎರಡೂ ಕಣ್ಣುಗಳಿದ್ದಂತೆ ಎಂಬ ಹಿನ್ನೆಲೆಯಲ್ಲಿ ಧರ್ಮದ ಪ್ರಬೋದನೆ ಮತ್ತು ಧರ್ಮ ಜಾಗೃತಿ ಸಾರುವ ನಿಟ್ಟಿನಲ್ಲಿ ಗುರು-ವಿರಕ್ತರು ಸಮಾಗಮಗೊಳ್ಳುತ್ತಿರುವುದಾಗಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಪಟ್ಟಣದ ಸಮೀಪದ ಬೆಳಕೋಡು ಹಾಲಸ್ವಾಮಿಗೌಡರು ಮಂಗಳವಾರ ಆಯೋಜಿಸಲಾಗಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ವಿರಕ್ತ ಪರಂಪರೆಗೂ ಪಂಚಾಚಾರ್ಯ ಪರಂಪರೆಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಸಮುದಾಯದವರು ಮತ್ತು ಮಲ್ಲವ ಸಮುದಾಯದವರು ಮಲ್ಲಿಕಾರ್ಜುನ ಸ್ವಾಮಿಯ ಭಕ್ತರೇ. ಶ್ರೀಶೈಲಾಕ್ಕೂ ಮಲೆನಾಡಿನ ಮಲ್ಲವರಿಗೂ ಅವಿನಾಭಾವ ಸಂಬAಧವಿದೆ. ಅಲ್ಲಮಾಪ್ರಭುರವರ ಶ್ರೀಶೈಲದಲ್ಲಿ ಐಕ್ಯರಾಗಿದ್ದು ಈ ಎಲ್ಲಾಭಕ್ತರ ಅಪೇಕ್ಷೆಯು ಧರ್ಮದ ತಿಳುವಳಿಕೆ ಮತ್ತು ಧರ್ಮ ಜಾಗೃತಿಯೊಂದಿಗೆ ಭಕ್ತರ ಮನೆಯಲ್ಲಿ ಧರ್ಮ ಪ್ರಚಾರವನ್ನು ಮಾಡುವ ಮೂಲಕ ಶ್ರೀಶೈಲ ಶ್ರೀಗಳ ನಡಿಗೆ ಮಲೆನಾಡ ಭಕ್ತರಕಡೆಗೆ ಎಂಬ ಧ್ಯೇಯದೊಂದಿಗೆ ಒಂದು ವಾರಗಳ ಕಾಲ ಮಲೆನಾಡಿನ ವ್ಯಾಪ್ತಿಯ ಭಕ್ತರ ಮನೆಮನೆಗಳಿಗೆ ಭೇಟಿನೀಡಿ ಧರ್ಮಬೋಧನೆಯಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.
ಆನಂದಪುರ ಮುರುಘರಾಜೇಂದ್ರ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಸಾನಿಧ್ಯವಹಿಸಿ ಆಶೀರ್ಚಚನ ನೀಡಿ ವ್ಯಕ್ತಿ ಕ್ರಿಯಾಶೀಲವಾಗಿ ಸಾಮಾಜಿಕ ಮತ್ತು ಸಮಾಜದ ಸೇವೆಯಲ್ಲಿ ಸಕ್ರೀಯರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ಶ್ರೇಯಸ್ಸು ದೊರೆಯುವುದೆಂದು ಹೇಳಿದರು. ಗುರು-ವಿರಕ್ತ ಪರಂಪರೆಯಲ್ಲಿ ಬೇಧಭಾವವಿಲ್ಲ ಕೆಲವು ಭಕ್ತರೇ ನಮ್ಮಗಳ ಮಧ್ಯೆ ಗೊಂದಲಸೃಷ್ಠಿಸುವ ಕೆಲಸ ಮಾಡಬಾರದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ, ಬಿಜಾಪುರ ಜಿಲ್ಲೆ ಬಾಗೇವಾಡಿ ಮಠದ ಷ.ಬ್ರ.ರೇಣುಕಾ ಶಿವಾಚಾರ್ಯ ಸ್ವಾಮೀಗಳು, ಮಾಜಿ ಸಚಿವ ಆರಗ ಜ್ಞಾನೇಂದ್ರ, ಮುಖಂಡ ಟಿ.ಡಿ. ಮೇಘರಾಜ್, ಉದ್ಯಮಿ ಕೆ.ಆರ್. ಪ್ರಕಾಶ್ ಕೋಣಂದೂರು, ಬೆಳಕೋಡು ಹಾಲಸ್ವಾಮಿಗೌಡರು, ವೀರೇಶ, ಉಮೇಶ, ಗಿರೀಶ ಇನ್ನಿತರರಿದ್ದರು.
ಹಾಲಸ್ವಾಮಿಗೌಡರ ಮನೆಯಲ್ಲಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಜರುಗಿತು.