Anandapura | ಅಂದಾಸುರದಲ್ಲಿ ವಿದ್ಯುತ್ ತಗುಲಿ ಯುವಕ ಸಾವು
ಆನಂದಪುರ : ಇಲ್ಲಿನ ಸಮೀಪದ ಕೊರಲಿಕೊಪ್ಪದಲ್ಲಿ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕೊರಲಿಕೊಪ್ಪ ಗ್ರಾಮದ ಹರೀಶ್ (30) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ನಡೆದಿದ್ದೇನು..???
ಹರೀಶ್ ಇಂದು ಮಧ್ಯಾಹ್ನ ಮನೆಯಲ್ಲಿ ಸ್ನಾನ ಮುಗಿಸಿ ಮನೆ ಮುಂದೆ ಇರುವ ತಂತಿಯಲ್ಲಿ ಬಟ್ಟೆ ಒಣಗಿಸಲು ಹೋದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಸ್ನೇಹಿತರೊಂದಿಗೆ ಇಂದು ತಿರುಪತಿ ದೇವಸ್ಥಾನಕ್ಕೆ ಹೊರಟಿದ್ದ ಹರೀಶ್ ಮನೆ ಮುಂದೆ ವಿದ್ಯುತ್ ಗ್ರೌಂಡಿಂಗ್ ಆಗಿರುವುದನ್ನು ಗಮನಿಸದೇ ಬಟ್ಟೆ ಒಣಗಿಸಲು ಹೋಗಿ ಮೃತಪಟ್ಟಿದ್ದಾನೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.